ನ್ಯೂಜಿಲೆಂಡ್‌ ಮಸೀದಿ ಮೇಲಿನ ಗುಂಡಿನ ದಾಳಿಗೆ ಪ್ರಧಾನಿ ಮೋದಿ ಸಂತಾಪ

ನ್ಯೂಜಿಲೆಂಡ್‌ನ ಕ್ರಿಸ್ಟ್‌ಚರ್ಚ್‌ ನಗರದ ಮಸೀದಿ ಮೇಲಿನ ಭಯೋತ್ಪಾದಕ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ದ್ವೇಷ ಮತ್ತು...
ನರೇಂದ್ರ ಮೋದಿ
ನರೇಂದ್ರ ಮೋದಿ
ನವದೆಹಲಿ: ನ್ಯೂಜಿಲೆಂಡ್‌ನ ಕ್ರಿಸ್ಟ್‌ಚರ್ಚ್‌ ನಗರದ ಮಸೀದಿ ಮೇಲಿನ ಭಯೋತ್ಪಾದಕ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದು, ದ್ವೇಷ ಮತ್ತು ಹಿಂಸೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸ್ಥಾನವಿಲ್ಲ ಎಂದಿದ್ದಾರೆ.
ಈ ಸಂಬಂಧ ನ್ಯೂಜಿಲೆಂಡ್‌ ಪ್ರಧಾನಿ ಜಕಂಡಾ ಅರ್ಡೆರ್ನ್‌ ಅವರಿಗೆ ಪತ್ರ ಬರೆದಿರುವ ಪ್ರಧಾನಿ ಮೋದಿ, ದಾಳಿಯಲ್ಲಿ ಮೃತರಾದವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. 
ಗಾಯಾಳುಗಳು ಬೇಗ ಗುಣಮುಖರಾಗಲೆಂದು ಪ್ರಾರ್ಥಿಸುವುದಾಗಿ ತಿಳಿಸಿದ್ದು, ಭಾರತ ಸಂಕಷ್ಟದ ಸಮಯದಲ್ಲಿ ನ್ಯೂಜಿಲೆಂಡ್‌ ಜೊತೆಗಿರಲಿದೆ ಎಂಬ ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಕ್ರಿಸ್ಟ್‌ ಚರ್ಚ್‌ ಮೇಲಿನ ಉಗ್ರರ ದಾಳಿ ಕುರಿತು ಆತಂಕ ವ್ಯಕ್ತಪಡಿಸಿದ್ದು, ಮುಗ್ಧ ಜೀವಗಳ ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಭಾರತ ಭಯೋತ್ಪಾದನೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com