ಕೊಲೆ ಪ್ರಕರಣ: ಸರವಣ ಭವನ ಹೋಟೆಲ್ಸ್ ಮಾಲೀಕನಿಗೆ ಜೀವಾವಧಿ ಶಿಕ್ಷೆ

2001ರಲ್ಲಿ ನಡೆದಿದ್ದ ಉದ್ಯೋಗಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಿದ್ಧ ಸರವಣ ಹೊಟೇಲ್ಸ್ ಮಾಲೀಕ ಪಿ. ರಾಜ್ ಗೋಪಾಲ್ ಗೆ ಸುಪ್ರೀಂಕೋರ್ಟ್ ...
ಪಿ. ರಾಜಗೋಪಾಲ್
ಪಿ. ರಾಜಗೋಪಾಲ್
ನವದೆಹಲಿ: 2001ರಲ್ಲಿ ನಡೆದಿದ್ದ ಉದ್ಯೋಗಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಿದ್ಧ ಸರವಣ ಹೊಟೇಲ್ಸ್ ಮಾಲೀಕ ಪಿ. ರಾಜ್ ಗೋಪಾಲ್ ಗೆ ಸುಪ್ರೀಂಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ಮೃತ ಉದ್ಯೋಗಿಯ ಪತ್ನಿಯನ್ನು ವಿವಾಹವಾಗುವ ಸಲುವಾಗಿ ಹೊಟೇಲ್ ಮಾಲಿಕ ಅಕ್ಟೋಬರ್ 2001ರಂದು ಆತನನ್ನು ಕೊಲೆ ಮಾಡಿದ್ದ, ಈ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಜುಲೈ 7 ರೊಳಗೆ ಅಪರಾಧಿಗಳು ಶರಣಾಗಬೇಕೆಂದು ತಿಳಿಸಿದೆ, 2009ರ ಮಾರ್ಚ್ 20 ರಂದು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮದ್ರಾಸ್ ಹೈಕೋರ್ಟ್ ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ರಾಜ್ ಗೋಪಾಲ್ ಮತ್ತಿತರರು ಸುಪ್ರಿಂಕೋರ್ಟ್ ಮೊರೆ ಹೋಗಿದ್ದರು.
ಮೃತ ಉದ್ಯೋಗಿ ಶಾಂತ ಕುಮಾರ್ ಪತ್ನಿ ಜೀವನ್ ಜ್ಯೋತಿಯನ್ನು ವಿವಾಹವಾಗಲು ರಾಜ್ ಗೋಪಾಲ್ ಬಯಸಿದ್ದ,  ಹೀಗಾಗಿ ಆತನನ್ನು ಕೊಲೆ ಮಾಡಿದ್ದ, 2001 ರಲ್ಲಿ ಪೆರುಮಲಾಲ್ ನ ಅರಣ್ಯ ಪ್ರದೇಶದಲ್ಲಿ ಉದ್ಯೋಗಿಯ ದೇಹ ಪತ್ತೆಯಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com