ಶೌಚಾಲಯದಲ್ಲಿ ಬಳಸಿದ ಪ್ಯಾಡ್: ಪತ್ತೆ ಹಚ್ಚಲು ವಿದ್ಯಾರ್ಥಿನಿಯರ ಬಟ್ಟೆ ಕಳಚಿಸಿದ ವಾರ್ಡನ್; ನಾಲ್ವರು ಅಮಾನತು

ಹಾಸ್ಟೆಲ್ ನ ಶೌಚಾಲಯದಲ್ಲಿ ಸ್ಯಾನಿಟರಿ ಪ್ಯಾಡ್ ಹಾಕಿದವರು ಯಾರು ಎಂದು ಪರೀಕ್ಷೆ ಮಾಡಲು ಹಾಸ್ಟೆಲ್...
ವಿದ್ಯಾರ್ಥಿನಿಯರ ಪ್ರತಿಭಟನೆ
ವಿದ್ಯಾರ್ಥಿನಿಯರ ಪ್ರತಿಭಟನೆ
ಬಥಿಂಡಾ: ಹಾಸ್ಟೆಲ್ ನ ಶೌಚಾಲಯದಲ್ಲಿ ಸ್ಯಾನಿಟರಿ ಪ್ಯಾಡ್ ಹಾಕಿದವರು ಯಾರೆಂದು ಪರೀಕ್ಷೆ ಮಾಡಲು ಹಾಸ್ಟೆಲ್ ನಲ್ಲಿರುವ ಯುವತಿಯರಿಗೆ ವಾರ್ಡನ್ ಬಟ್ಟೆ ಕಳಚುವಂತೆ ಹೇಳಿದ ಆರೋಪಕ್ಕೆ ಸಂಬಂಧಪಟ್ಟಂತೆ ಅಕಲ್ ವಿಶ್ವವಿದ್ಯಾಲಯದ ನಾಲ್ವರು ನೌಕರರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಈ ಸಂಬಂಧ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ನಿನ್ನೆ ಕಾಲೇಜು ಬಳಿ ಪ್ರತಿಭಟನೆ ನಡೆಸಿದರು. ಕಾಲೇಜಿನ ಹಾಸ್ಟೆಲ್ ವಾರ್ಡನ್ ಶೌಚಾಲಯದಲ್ಲಿ ಸ್ಯಾನಿಟರಿ ಪ್ಯಾಡ್ ಯಾರು ಹಾಕಿದ್ದು ಎಂದು ತಪಾಸಣೆ ಮಾಡಲು ಬಟ್ಟೆ ಕಳಚಿ ತೋರಿಸುವಂತೆ ಹೇಳಿದ್ದರು.
ಇಂತಹ ಹೀನ ಕೃತ್ಯವೆಸಗಿದ ಕಾರಣಕ್ಕೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಇಬ್ಬರು ಭದ್ರತಾ ಅಧಿಕಾರಿಗಳು ಮತ್ತು ಇಬ್ಬರು ವಾರ್ಡನ್ ಗಳನ್ನು ಸೇವೆಯಿಂದ ವಜಾಗೊಳಿಸಿದ್ದಾರೆ.
ಹಾಸ್ಟೆಲ್ ನ ವಿದ್ಯಾರ್ಥಿನಿಯರು ನೀಡಿದ ದೂರಿನ ಆಧಾರದ ಮೇಲೆ ಸಮಿತಿಯನ್ನು ರಚಿಸಿ ತನಿಖೆ ನಡೆಸಿದೆವು. ನಾಲ್ವರು ನೌಕರರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಅಕಲ್ ವಿಶ್ವವಿದ್ಯಾಲಯದ ಡೀನ್ ಎಂಎಸ್ ಜೊಹಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com