ಗುಜರಾತ್: ಹೋಲಿಕೆಗೆ ಬೇಸತ್ತ ರಾಹುಲ್ ಗಾಂಧಿ ತದ್ರೂಪಿ ಮಾಡಿದ್ದೇನು ಗೊತ್ತೇ?

ಒಬ್ಬ ವ್ಯಕ್ತಿಯ ರೀತಿಯಲ್ಲಿ ಇನ್ನೂ 6 ಜನರು ಇರುತ್ತಾರೆ ಅನ್ನೋದಂತೂ ಜನಜನಿತ. ಪ್ರಧಾನಿ ಮೋದಿ ನಾಡು ಗುಜರಾತ್ ನ ಸೂರತ್ ನಲ್ಲಿ ರಾಹುಲ್ ಗಾಂಧಿಯ ತದ್ರೂಪಿ ಯುವಕನೋರ್ವ ಹೋಲಿಕೆಗೆ ಬೇಸತ್ತು
ರಾಹುಲ್ ಗಾಂಧಿ-ಪ್ರಶಾಂತ್ ಸೇಥಿ
ರಾಹುಲ್ ಗಾಂಧಿ-ಪ್ರಶಾಂತ್ ಸೇಥಿ
ಸೂರತ್: ಒಬ್ಬ ವ್ಯಕ್ತಿಯ ರೀತಿಯಲ್ಲಿ ಇನ್ನೂ 6 ಜನರು ಇರುತ್ತಾರೆ ಅನ್ನೋದಂತೂ ಜನಜನಿತ. ಪ್ರಧಾನಿ ಮೋದಿ ನಾಡು ಗುಜರಾತ್ ನ ಸೂರತ್ ನಲ್ಲಿ ರಾಹುಲ್ ಗಾಂಧಿಯ ತದ್ರೂಪಿ ಯುವಕನೋರ್ವ ಹೋಲಿಕೆಗೆ ಬೇಸತ್ತು ಹುಬ್ಬೇರಿಸುವ ನಿರ್ಧಾರ ಕೈಗೊಂಡಿದ್ದಾನೆ. 
ಬಿಜೆಪಿ ಬೆಂಬಲಿಗ ಪ್ರಶಾಂತ್ ಸೇಥಿ ಕಪಾಡಿಯಾ ಕ್ಲಬ್ ನಲ್ಲಿ ಚಿಕನ್ ಈಟೆರಿ ನಡೆಸುತ್ತಿದ್ದಾರೆ. ಪರಿಚಯ ಇರುವವರು, ಸ್ನೇಹಿತರು, ಪರಿಚಯ ಇಲ್ಲದಿರುವವರು ಅಷ್ಟೇ ಏಕೆ ಇಲ್ಲಿಗೆ ಬಂದವರೆಲ್ಲಾ ನೀನು ನೋಡಕ್ಕೆ  ರಾಹುಲ್ ಗಾಂಧಿ ತರ ಇದ್ದೀಯ ಎನ್ನುತ್ತಿದ್ದರಂತೆ. 2014 ರಿಂದಲೂ ಇದನ್ನೇ ನಿರಂತರವಾಗಿ ಕೇಳಿ ಬೇಸತ್ತ ಪ್ರಶಾಂತ್ ಸೇಥಿ ತನ್ನ ಲುಕ್ ನ್ನೇ ಬದಲಿಸಿಕೊಳ್ಳಲು ನಿರ್ಧರಿಸಿದರು. ಪರಿಣಾಮ ಈಗ ರಾಹುಲ್ ಗಾಂಧಿಗಿಂತ ಸ್ವಲ್ಪ ಭಿನ್ನವಾಗಿ ಕಾಣಿಸುತ್ತಿದ್ದಾರೆ. 
ಹೇರ್ ಸ್ಟೈಲ್ ನಿಂದ ಮೊದಲುಗೊಂಡು ತೂಕದ ವರೆಗೆ ಹಲವು ಬದಲಾವಣೆಗಳನ್ನು ಮಾಡಿಕೊಂಡಿರುವ ಪ್ರಶಾಂತ್ ಸೇಥಿ, ಬರೊಬ್ಬರಿ 20 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾರೆ. ನನಗೆ ರಾಹುಲ್ ಗಾಂಧಿ ತರ ಕಾಣಿಸುವುದು ಇಷ್ಟ ಇಲ್ಲ ಎಂದಿದ್ದಾರೆ. 
ನೋಡಲು ಥೇಟ್ ರಾಹುಲ್ ಗಾಂಧಿಯ ರೀತಿಯಲ್ಲೇ ಇದ್ದ ಪ್ರಶಾಂತ್ ಸೇಥಿಗೆ ನರೇಂದ್ರ ಮೋದಿ ಬಯೋಪಿಕ್ ನಲ್ಲಿ ರಾಹುಲ್ ಗಾಂಧಿ ಪಾತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿತ್ತಂತೆ ಆದರೆ, ರಾಹುಲ್ ರೀತಿಯಲ್ಲಿ ಕಾಣಿಸುವುದಕ್ಕೆ ನನಗೆ ಇಷ್ಟ ಇಲ್ಲದ ಕಾರಣ ನಾನು ಆ ಆಫರ್ ನ್ನು ತಿರಸ್ಕರಿಸಿದ್ದೆ ಎಂದು ಹೇಳಿದ್ದಾರೆ. 
ರಾಹುಲ್ ಗಾಂಧಿ ಬಗ್ಗೆ ಈ ಹಿಂದೆ ಬಹಳ ಭರವಸೆ ಹೊಂದಿದ್ದೆ. ಆದರೆ ಅವರ ಬಗ್ಗೆ ಮಾತನಾಡುವುದಕ್ಕೆ ಅಂಥದ್ದೇನು ಸಾಧನೆ ಮಾಡಿಲ್ಲ ಎಂದು ಪ್ರಶಾಂತ್ ಸೇಥಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com