ಇಂಡೋ-ಪಾಕ್ ಗಡಿಯಲ್ಲಿ ಭಾರತಕ್ಕೆ 'ಭೀಷ್ಮ' ಬಲ; ಗಡಿಯುದ್ದಕ್ಕೂ 464 ಭೀಷ್ಮ ಟ್ಯಾಂಕರ್​ ಗಳ ನಿಯೋಜನೆ?

ಮಹತ್ವದ ಬೆಳವಣಿಗೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ರಷ್ಯಾ ನಿರ್ಮಿತ ಪ್ರಬಲ ಟಿ-90 ಭೀಷ್ಮ ಯುದ್ಧ ಟ್ಯಾಂಕರ್ ಗಳನ್ನು ನಿಯೋಜಿಸಲು ಭಾರತೀಯ ಸೇನೆ ಮುಂದಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ರಷ್ಯಾ ನಿರ್ಮಿತ ಪ್ರಬಲ ಟಿ-90 ಭೀಷ್ಮ ಯುದ್ಧ ಟ್ಯಾಂಕರ್ ಗಳನ್ನು ನಿಯೋಜಿಸಲು ಭಾರತೀಯ ಸೇನೆ ಮುಂದಾಗಿದೆ ಎಂದು ತಿಳಿದುಬಂದಿದೆ.
ಮಾಧ್ಯಮವೊಂದರ ವರದಿಯಂತೆ, ಭಾರತೀಯ ಸೇನೆ ಸುಮಾರು 13 ಸಾವಿರ ಕೋಟಿ ರೂ ವೆಚ್ಚದಲ್ಲಿ ರಷ್ಯಾ ನಿರ್ಮಿತ ಪ್ರಬಲ ಟಿ-90 ಭೀಷ್ಮ ಯುದ್ಧ ಟ್ಯಾಂಕರ್ ಗಳನ್ನು ನಿರ್ಮಿಸಿ ಅವುಗಳನ್ನು ಇಂಡೋ-ಪಾಕ್ ಗಡಿಯಲ್ಲಿ ನಿಯೋಜನೆ ಮಾಡಲು ಮುಂದಾಗಿದೆ ಎಂದು ಹೇಳಲಾಗಿದೆ.
ರಷ್ಯಾ ನಿರ್ಮಿತ ಟಿ-90 ಟ್ಯಾಂಕರ್ ಗಳನ್ನು ಭಾರತದಲ್ಲಿ ನಿರ್ಮಾಣ ಮಾಡಲು ಭಾರತ ಸರ್ಕಾರ ಇತ್ತೀಚೆಗಷ್ಟೇ ರಷ್ಯಾ ಸರ್ಕಾರದಿಂದ ಪರವಾನಿಗೆ ಪಡೆದುಕೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಭಾರತ ಮತ್ತು ಪಾಕಿಸ್ತಾನದ ಗಡಿಯುದ್ದಕ್ಕೂ ಈ ಟಿ90 ಭೀಷ್ಮ ಟ್ಯಾಂಕರ್ ಗಳನ್ನು ನಿಯೋಜಿಸಲು ಭಾರತೀಯ ಸೇನೆ ಉದ್ದೇಶಿಸಿದೆ. ಮೂಲಗಳ ಪ್ರಕಾರ ಗಡಿಯಲ್ಲಿ ಸುಮಾರು 464 ಟ್ಯಾಂಕರ್ ಗಳನ್ನು ನಿಯೋಜಿಸಲು ಸೇನೆ ಮುಂದಾಗಿದೆ. ಒಂದು ಅಂದಾಜಿನ ಪ್ರಕಾರ ಭಾರತೀಯ ಸೇನೆಯ ಈ ಪ್ರಕ್ರಿಯೆಗೆ ಸುಮಾರು 13 ಸಾವಿರ ಕೋಟಿ ರೂ ವೆಚ್ಚವಾಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಟಿ-90 ಟ್ಯಾಂಕರ್ ನಿರ್ಮಾಣಕ್ಕೆ ರಷ್ಯಾದಿಂದ ಕಳೆದ ತಿಂಗಳಷ್ಟೇ ಭಾರತ ಪರವಾನಿಗೆ ಪಡೆದುಕೊಂಡಿತ್ತು. ಅದರಂತೆ ಚೆನ್ನೈನ ಆವಡಿಯಲ್ಲಿರುವ ಸೇನೆಗೆ ಸೇರಿದ ಹೆಚ್ ​ವಿಎಫ್ ಫ್ಯಾಕ್ಟರಿಯಲ್ಲಿ ಈ ಟಿ-90 ಟ್ಯಾಂಕರ್ ಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಲಾಗಿದೆ. 2001ರಲ್ಲಿ ಭಾರತ ಸರ್ಕಾರ 100ಕ್ಕೂ ಹೆಚ್ಚು ಟಿ-90 ಯುದ್ಧ ಟ್ಯಾಂಕರ್ ​ಗಳನ್ನು ರಷ್ಯಾದಿಂದ ಖರೀದಿಸಿತ್ತು. ಇದೀಗ ಮತ್ತಷ್ಟು ಟ್ಯಾಂಕರ್ ​ಗಳನ್ನು ಚೆನ್ನೈ ಘಟಕದಲ್ಲಿ ಉತ್ಪಾದಿಸಿ, ಬಳಿಕ ಅವುಗಳನ್ನು ಇಂಡೋ-ಪಾಕ್ ಗಡಿಯಲ್ಲಿ ನಿಯೋಜನೆ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com