ಮಹತ್ವದ ಕಾರ್ಯಾಚರಣೆ, ಶ್ರೀನಗರದಲ್ಲಿ ಜೈಷ್ ಉಗ್ರನ ಬಂಧನ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಪುಲ್ವಾಮ ಉಗ್ರ ದಾಳಿ ನಡೆಸಿದ್ದ ಜೈಶ್ ಉಗ್ರ ಸಂಘಟನೆಯ ಪ್ರಮುಖ ಉಗ್ರನೋರ್ವನನ್ನು ಸೇನೆ ಬಂಧಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಪುಲ್ವಾಮ ಉಗ್ರ ದಾಳಿ ನಡೆಸಿದ್ದ ಜೈಶ್ ಉಗ್ರ ಸಂಘಟನೆಯ ಪ್ರಮುಖ ಉಗ್ರನೋರ್ವನನ್ನು ಸೇನೆ ಬಂಧಿಸಿದೆ.
ಈ ಹಿಂದೆ ವಿವಿಧ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿದ್ದ ಜೈಶ್ ಉಗ್ರ ಅಬ್ದುಲ್ ಮಜೀದ್ ಬಾಬಾ ನನ್ನು ದೆಹಲಿ ಪೊಲೀಸರು ಸೇನೆಯ ನೆರವಿನೊಂದಿಗೆ ಬಂಧಿಸಿದ್ದಾರೆ.
ಸೋಪೋರ್ ಜಿಲ್ಲೆಯ ಮಗ್ರೆಪೋರಾ ದಲ್ಲಿ ಮಜೀದ್ ನನ್ನು ಬಂಧಿಸಿದ್ದು, ಈತನ ಸುಳಿವು ಕೊಟ್ಟವರಿಗೆ ಈ ಹಿಂದೆ 2 ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು. ಈ ಬಗ್ಗೆ ಮಾಹಿಚಿ ನೀಡಿರುವ ಡೆಪ್ಟುಟಿ ಕಮಿಷನರ್ ಆಫ್ ಪೊಲೀಸ್ ಸಂಜೀವ್ ಕುಮಾರ್ ಯಾದವ್ ಅವರು, ಶನಿವಾರ ಸಂಜೆ ಶ್ರೀನಗರದ ಸೌರಾದಲ್ಲಿ ಮಜೀದ್ ನನ್ನು ಬಂಧಿಸಲಾಗಿದೆ. ಪ್ರಸ್ತುತ ಆತನನ್ನು ದೆಹಲಿಗೆ ಕರೆತಂದಿದ್ದು, ಶ್ರೀನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಆತನನ್ನು ಪೊಲೀಸ್ ವಶಕ್ಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com