ಮೋದಿ ಪ್ರಮಾಣವಚನದಲ್ಲಿ ಬಾಲಿವುಡ್, ಕ್ರಿಕೆಟ್ ತಾರೆಯರ ದಂಡು

ಎರಡನೇ ಬಾರಿಗೆ ಪ್ರಧಾನಿಯಾದ ನರೇಂದ್ರ ಮೋದಿ ಅವರ ಗುರುವಾರದ ಪ್ರಮಾಣವಚನ ಸಮಾರಂಭಕ್ಕೆ ಬಾಲಿವುಡ್‌, ಕ್ರಿಕೆಟ್‌ ಕ್ಷೇತ್ರದ ತಾರೆಯರ...

Published: 30th May 2019 12:00 PM  |   Last Updated: 31st May 2019 01:29 AM   |  A+A-


Bollywood celebrities, Sports personalities grace PM Modi swearing-in ceremony

ರಜನಿಕಾಂತ್ ಹಾಗೂ ಬಾಲಿವುಡ್ ತಾರೆಯರು

Posted By : LSB LSB
Source : UNI
ನವದೆಹಲಿ: ಎರಡನೇ ಬಾರಿಗೆ ಪ್ರಧಾನಿಯಾದ ನರೇಂದ್ರ ಮೋದಿ ಅವರ ಗುರುವಾರದ ಪ್ರಮಾಣವಚನ ಸಮಾರಂಭಕ್ಕೆ ಬಾಲಿವುಡ್‌, ಕ್ರಿಕೆಟ್‌ ಕ್ಷೇತ್ರದ ತಾರೆಯರ ದಂಡೇ ಸಾಕ್ಷಿಯಾಗಿತ್ತು.

ಚಲನಚಿತ್ರೋದ್ಯಮದ ಅನುಪಮ್ ಖೇರ್, ಅನಿಲ್ ಕಪೂರ್, ಬೋಮನ್ ಇರಾನಿ, ವಿವೇಕ್ ಒಬೆರಾಯ್, ರಜನಿಕಾಂತ್, ಶಾರುಖ್ ಖಾನ್, ಕಮಲ ಹಾಸನ್, ಕಂಗನಾ ರಣಾವತ್, ಕರಣ್ ಜೋಹರ್ ಮತ್ತು ಸಂಜಯ್ ಲೀಲಾ ಬನ್ಸಾಲಿ, ಬೋನಿ ಕಪೂರ್, ಸುಶಾಂತ್ ಸಿಂಗ್ ರಜಪೂತ್‌ ಸೇರಿದಂತೆ ಹಲವಾರು ಗಣ್ಯರು ಪ್ರಧಾನಿ ಮೋದಿ ಪ್ರಮಾಣವಚನಕ್ಕೆ ಸಾಕ್ಷಿಯಾದರು. 

ಮಾಜಿ ಓಟಗಾರ್ತಿ ಪಿ. ಟಿ. ಉಷಾ, ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ಜಾವಗಲ್ ಶ್ರೀನಾಥ್, ಹರ್ಭಜನ್ ಸಿಂಗ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಬ್ಯಾಡ್ಮಿಂಟನ್ ತರಬೇತುದಾರ ಪುಲ್ಲೆಲಾ ಗೋಪಿಚಂದ್ ಮತ್ತು ಜಿಮ್ನಾಸ್ಟ್ ದೀಪಾ ಕರ್ಮಕರ್ ಕೂಡ ಉಪಸ್ಥಿತರಿದ್ದರು.

ನಿರ್ಮಾಪಕರ ಸಂಘದ ಅಧ್ಯಕ್ಷರಾದ ಸಿದ್ಧಾರ್ಥ್ ರಾಯ್ ಕಪೂರ್ ಸಹ ಸಮಾರಂಭದಲ್ಲಿ ಭಾಗವಹಿಸಿದ್ದರು.

ಪ್ರಮಾಣವಚನ ಸಮಾರಂಭಕ್ಕೂ ಮೊದಲು ಈ ಕುರಿತು ಟ್ವೀಟ್‌ ಮಾಡಿದ ಅನುಪಮ್‌ ಖೇರ್‌, ಅನಿಲ್‌ ಕಪೂರ್‌ ಜೊತೆಗಿನ ಚಿತ್ರವೊಂದನ್ನು ಹಂಚಿಕೊಂಡು ಮೋದಿ ಪ್ರಮಾಣವಚನ ಸಮಾರಂಭಕ್ಕೆ ದೆಹಲಿಯತ್ತ ಹೊರಟಿರುವುದಾಗಿ ಬರೆದುಕೊಂಡಿದ್ದರು.

ಗುಜರಾತ್‌ ಮುಖ್ಯುಮಂತ್ರಿಯಾದಾಗಿನಿಂದ ಇಲ್ಲಿವರೆಗೆ 3ನೇ ಸಲ ನಾನು ಮೋದಿ ಪ್ರಮಾಣವಚನ ಸ್ವೀಕರಿಸುವುದನ್ನು ನೋಡುತ್ತಿದ್ದೇನೆ. ಅತ್ಯದ್ಭುತ ಇತಿಹಾಸದ ಸಣ್ಣ ಭಾಗವಾದ ಅನುಭವವಾಗುತ್ತಿದೆ ಎಂದು ವಿವೇಕ್‌ ಒಬೆರಾಯ್‌ ಟ್ವೀಟ್‌ ಮಾಡಿದ್ದಾರೆ.

ಕಾರ್ತಿಕ್ ಆರ್ಯನ್, ರಾಜ್ಕುಮಾರ್ ಹಿರಾನಿ, ಆನಂದ್‌ ಎಲ್ ರೈ, ಮಂಗೇಶ್ ಹಡಾವಲೆ ಮತ್ತು ಮಹಾವೀರ ಜೈನ್ ಸಹ ಹಾಜರಿದ್ದರು.

ಸೂಪರ್‌ ಸ್ಟಾರ್‌ಗಳಾದ ಅಮೀರ್ ಖಾನ್, ಹೃತಿಕ್ ರೋಷನ್ ಮತ್ತು ಸಲ್ಮಾನ್ ಖಾನ್ ಅವರ ಗೈರು ಗಮನಾರ್ಹ. ಇದಕ್ಕೆ ಕಾರಣ ತಿಳಿದುಬಂದಿಲ್ಲ.
Stay up to date on all the latest ರಾಷ್ಟ್ರೀಯ news
Poll
IPL2020

ಚೀನಾದ ಪ್ರಾಯೋಜಕರೊಂದಿಗಿನ ಒಪ್ಪಂದವನ್ನು ಮುಂದುವರಿಸಿರುವ ಕಾರಣ ಭಾರತೀಯರು ಐಪಿಎಲ್ ಅನ್ನು ಬಹಿಷ್ಕರಿಸಬೇಕೆಂದು ಸ್ವದೇಶಿ ಜಾಗರನ್ ಮಂಚ್ ಹೇಳಿದೆ. ನೀವು ಏನಂತೀರಿ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp