ಪರೀಕ್ಷೆಗಾಗಿ ಕಾದು ನಿಂತಿವೆ ನಾಲ್ಕು ಪರಮಾಣು ಸಹಿತ ಕ್ಷಿಪಣಿಗಳು!

ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ತನ್ನ ನಾಲ್ಕು ಪ್ರಬಲ ಅಣ್ವಸ್ತ್ರ ಸಹಿತ ಕ್ಷಿಪಣಿಗಳ ಪರೀಕ್ಷೆಗೆ ಸಿದ್ಧತೆ ನಡೆಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕೆ-4, ಅಗ್ನಿ-2, ಬ್ರಹ್ಮೋಸ್ ಮತ್ತು ಪೃಥ್ವಿ ಪರಮಾಣು ಸಹಿತ ಕ್ಷಿಪಣಿಗಳ ಪರೀಕ್ಷೆ

ಭುವನೇಶ್ವರ್: ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆ ಡಿಆರ್ ಡಿಒ ತನ್ನ ನಾಲ್ಕು ಪ್ರಬಲ ಅಣ್ವಸ್ತ್ರ ಸಹಿತ ಕ್ಷಿಪಣಿಗಳ ಪರೀಕ್ಷೆಗೆ ಸಿದ್ಧತೆ ನಡೆಸಿದೆ.

ಕೆ-4, ಅಗ್ನಿ-2, ಬ್ರಹ್ಮೋಸ್ ಮತ್ತು ಪೃಥ್ವಿ ಕ್ಷಿಪಣಿಗಳ ಪರೀಕ್ಷೆ ನಡೆಯಲಿದ್ದು, ಈ ನಾಲ್ಕೂ ಕ್ಷಿಪಣಿಗಳೂ ಸ್ವದೇಶಿ ನಿರ್ಮಿತ ಕ್ಷಿಪಣಿಗಳಾಗಿದ್ದು, ಅಣ್ವಸ್ತ್ರ ಸಹಿತ ಕ್ಷಿಪಣಿಗಳಾಗಿವೆ. ತಜ್ಞರು ಅಭಿಪ್ರಾಯಪಟ್ಟಿರುವಂತೆ ಪಾಕಿಸ್ತಾನದ ನಾಲ್ಕು ಪ್ರಮುಖ ನಗರಗಳನ್ನು ಉಡಾಯಿಸಬಲ್ಲ ತಾಕತ್ತು ಈ ಕ್ಷಿಪಣಿಗಳಿಗಿವೆ ಎಂದು ಹೇಳಿದ್ದಾರೆ.

ಇದೇ ನವೆಂಬರ್ 8ರಂದು ಕೆ4 ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಲಾಗುತ್ತಿದ್ದು, ಇದರ ಬೆನ್ನಲ್ಲೇ ಭೂಮಿಯಿಂದ ಭೂಮಿಗೆ ಹಾರಬಲ್ಲ ಬ್ರಹ್ಮೋಸ್ ಕ್ಷಿಪಣಿಯನ್ನು ನವೆಂಬರ್ 14ರಂದು ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ನವೆಂಬರ್ 16ರಂದು ಅಗ್ನಿ2 ಮತ್ತು ನವೆಂಬರ್ 20ರಂದು ಪೃಥ್ವಿ ಕ್ಷಿಪಣಿಯ ಪರೀಕ್ಷೆ ನಡೆಸಲಾಗುತ್ತದೆ.

ಇನ್ನು ಅಲ್ಪ ದೂರಗಾಮಿಯ ಬ್ರಹ್ಮೋಸ್ ಕ್ಷಿಪಣಿಯನ್ನು ಬ್ರಹ್ಮೋಸ್ ಏರೋಸ್ಪೇಸ್ ನಿರ್ಮಾಣ ಮಾಡಿದ್ದು, ಸುಖೋಯ್ 30 ಎಂಕೆಐ ಫೈಟರ್ ಜೆಟ್ ವಿಮಾನಕ್ಕೆ ಅಳವಡಿಸಬಹುದಾಗಿದ್ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com