ಬೆಚ್ಚಿಬಿದ್ದ ತೆಲಂಗಾಣ! ಕಚೇರಿಯಲ್ಲೇ ಮಹಿಳಾ ತಹಶೀಲ್ದಾರ್‌ಗೆ ಬೆಂಕಿ ಹಚ್ಚಿ ಹತ್ಯೆ

ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಅಪರಿಚಿತ ವ್ಯಕ್ತಿಯೊಬ್ಬ ಮಹಿಳಾ ತಹಶೀಲ್ದಾರ್‌ಗೆ ಅವರ ಕಚೇರಿಯಲ್ಲಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಜೀವ ದಹನ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಮೃತ ತಹಶೀಲ್ದಾರ್ ವಿಜಯಾ ರೆಡ್ಡಿ
ಮೃತ ತಹಶೀಲ್ದಾರ್ ವಿಜಯಾ ರೆಡ್ಡಿ

ಹೈದರಾಬಾದ್: ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಅಪರಿಚಿತ ವ್ಯಕ್ತಿಯೊಬ್ಬ ಮಹಿಳಾ ತಹಶೀಲ್ದಾರ್‌ಗೆ ಅವರ ಕಚೇರಿಯಲ್ಲಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಜೀವ ದಹನ ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಅಬ್ದುಲ್ಲಾಪುರಮೆಟ್​​ ಎಂಬಲ್ಲಿ ಈ ಕೃತ್ಯ ನಡೆದಿದ್ದು ಸೋಮವಾರ ಮಧ್ಯಾಹ್ನ 1.30 ರ ಸುಮಾರಿಗೆ ಮಾತನಾಡುವ ನೆಪದಲ್ಲಿ  ತಹಶೀಲ್ದಾರ್‌ಕೋಣೆ ಪ್ರವೇಶಿಸಿದ ವ್ಯಕ್ತಿ  ತಹಶೀಲ್ದಾರ್‌ಗೆ ಬೆಂಕಿ ಹಚ್ಚಿ ಜೀವಂತ ಸುಟ್ಟುಹಾಕಿದ್ದಾನೆ. ಇದು ತೆಲಂಗಾಣದಾದ್ಯಂತ ತೀವ್ರ ಭಯಭೀತಿಗೆ ಕಾರಣವಾಗಿದೆ.

ತಹಶೀಲ್ದಾರ್ ವಿಜಯಾ ರೆಡ್ಡಿ ತನ್ನ ಕಚೇರಿಯಲ್ಲಿದ್ದಾಗ ಅಪರಾಧಿ ಒಳಗೆ ಹೋಗಿ ಅವಳೊಂದಿಗೆ ಸ್ವಲ್ಪ ಸಮಯ ಮಾತಾಡಿದ. ನಂತರ ಅವನು ತನ್ನೊಂದಿಗೆ ತಂದಿದ್ದ ಬಾಟಲಿಯನ್ನು ಹೊರತೆಗೆದು ಅವಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಕೃತ್ಯ ನಡೆದ ಕೆಲವೇ ಸೆಕೆಂಡ್ ಗಳಲ್ಲಿ ಮಹಿಳಾ ತಹಶೀಲ್ದಾರ್ ದೇಹಕ್ಕೆ ಪೂರ್ತಿಯಾಗಿ ಬೆಂಕಿ ಆವರಿಸಿದೆ. ಆಕೆ ಕೊಠಡಿಯಿಂದ ಹೊರಗೋಡಲು ಪ್ರಯತ್ನಿಸಿದರೂ ಅರ್ಧದಲ್ಲೇ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಇದೇ ವೇಳೆ ಕೃತ್ಯ ನಡೆದ ಬಳಿಕ ಗಲಿಬಿಲಿ ವಾತಾವರಣ ಉಂಟಾಗಿದ್ದು ತಕ್ಷಣವೇ ಕೊಲೆಗಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಅಪರಾಧಿಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ವರದಿ ಹೇಳಿದ್ದು  ಕೃತ್ಯ ನಡೆದ ವೇಳೆ ಊಟದ ವಿರಾಮವಿದ್ದ ಕಾರಣ ಕಚೇರಿಯಲ್ಲಿ ಜನಸಂದಣಿ ಕಡಿಮೆ ಇತ್ತು ಎನ್ನಲಾಗಿದೆ. .

ಕೊಲೆಗಾರ ಸುಮಾರು  30 ನಿಮಿಷಗಳ ಕಾಲ ಮಹಿಳಾ ತಹಶೀಲ್ದಾರ್‌ ಜತೆ ಮಾತುಕತೆ ನಡೆಸಿದ್ದಾನೆ. ಜಮೀನಿನ ಭಾಗದ ವಿಚಾರದಲ್ಲಿ ಇಬ್ಬರೂ ವಾಗ್ವಾದ ನಡೆಸಿದರು ಎಂಬ ಮಾಹಿತಿ ಇದ್ದು ಬಳಿಕ ಆತ ಆಕೆಯ ಮೇಲೆ ಪೆಟ್ರೋಲ್ ಸುರಿದಿದ್ದಾನೆ. ಆಗ ಸಹಾಯಕ್ಕಾಗಿ ಆಕೆ ಮೊರೆಇಟ್ತಾಗ ಆಕೆಯ ವಾಹನ ಚಾಲಕ ಸಿಬ್ಬಂದಿ ಅವಳನ್ನು ರಕ್ಷಿಸಲು ಬಂದಿದ್ದರು. ಆದರೆ ಅದು ಬಹಳ ತಡವಾಗಿದ್ದು ಬೆಂಕಿಯ ಕಾರಣ ಅವರಿಗೆ ಸಹ ಸುಟ್ಟ ಗಾಯಗಳಾಗಿದೆ. ಸಧ್ಯ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.

ಘಟನೆ ಬಗೆಗೆ ಮಾಹಿತಿ ಪಡೆದ  ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.ಸ್ಥಳೀಯರು ಮತ್ತು ಕಂದಾಯ ಇಲಾಖೆ ಸಿಬ್ಬಂದಿ ಆಕೆಯ ಕಚೇರಿಯ ಸುತ್ತಲೂ ಜಮಾಯಿಸಿ, ಅಪರಾಧಿಗೆ ಕಠಿಣ ಶಿಕ್ಷೆನೀಡಬೇಕೆಂದು ಘೋಷಣೆ ಕೂಗಿದ್ದಾರೆ. , ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಆಸ್ಪತ್ರೆಗೆ ಕೊಂಡೊಯ್ಯುವುದಕ್ಕೆ ಅಧಿಕಾರಿಗಳು ಅಡ್ಡಿಯಾಗಿದ್ದು ಮಾತ್ರವಲ್ಲದೆ ಅವರು ತಮಗೆ ಸಮರ್ಪಕ ರಕ್ಷಣೆ ಒದಗಿಸುವಂತೆ ಆಗ್ರಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com