ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸದಿರಿ, ಸುಮ್ಮನಿರಲು ನಾವೇನು ಬಳೆ ತೊಟ್ಟಿಲ್ಲ: ಪಾಕ್'ಗೆ ಅಮರೀಂದರ್ ಎಚ್ಚರಿಕೆ

ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸದಿರಿ. ಪಂಬಾಜ್ ಮೇಲಿನ ನಿಮ್ಮ ಕೆಂಗಣ್ಣು ನಿಲ್ಲಿಸಿ. ನೀವೇನೆ ಮಾಡಿದರೂ ಸಹಿಸಿಕೊಂಡು ಸುಮ್ಮನೆ ಕೂರಲು ನಾವೇನು ಬಳೆ ತೊಟ್ಟಿಲ್ಲ ಎಂದು ಪಾಕಿಸ್ತಾನಕ್ಕೆ ಪಂಜಾಬ್ ರಾಜ್ಯ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಎಚ್ಚರಿಕೆ ನೀಡಿದ್ದಾರೆ.
ಪಂಜಾಬ್ ರಾಜ್ಯ ಮುಖ್ಯಮಂತ್ರಿ ಅಮರೀಂದರ್ ಸಿಂಗ್
ಪಂಜಾಬ್ ರಾಜ್ಯ ಮುಖ್ಯಮಂತ್ರಿ ಅಮರೀಂದರ್ ಸಿಂಗ್

ದೇರಾ ಬಾಬ್ ನಾನಕ್: ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸದಿರಿ. ಪಂಬಾಜ್ ಮೇಲಿನ ನಿಮ್ಮ ಕೆಂಗಣ್ಣು ನಿಲ್ಲಿಸಿ. ನೀವೇನೆ ಮಾಡಿದರೂ ಸಹಿಸಿಕೊಂಡು ಸುಮ್ಮನೆ ಕೂರಲು ನಾವೇನು ಬಳೆ ತೊಟ್ಟಿಲ್ಲ ಎಂದು ಪಾಕಿಸ್ತಾನಕ್ಕೆ ಪಂಜಾಬ್ ರಾಜ್ಯ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಎಚ್ಚರಿಕೆ ನೀಡಿದ್ದಾರೆ. 

ಕರ್ತಾರ್ಪುರ ಕಾರಿಡಾರ್ ಮೂಲಕ ಗುರುದ್ವಾರ ದರ್ಬಾರ್ ಸಾಹಿಬ್'ಗೆ ಭೇಟಿ ನೀಡುವ 550 ಯಾತ್ರಾರ್ಥಿಗಳಲ್ಲಿ ಅಮರೀಂದರ್ ಸಿಂಗ್ ಕೂಡ ಒಬ್ಬರಾಗಿದ್ದು, ದರ್ಬಾರ್ ಸಾಹಿಬ್'ಗೆ ಭೇಟಿ ನೀಡುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ವಿರುದ್ಧ ಹರಿಹಾಯ್ದರು. 

ಭಾರತದ ಮೇಲೆ ನಡೆಸುತ್ತಿರುವ ಮಹಾಪಾತಕ ಕೃತ್ಯಗಳನ್ನು ನಿಲ್ಲಿಸುವಂತೆ ಪದೇ ಪದೇ ಪಾಕಿಸ್ತಾನಕ್ಕೆ ತಿಳಿಸುತ್ತಲೇ ಇದ್ದೇನೆ. ಇಷ್ಟು ದಿನ ಕಾಶ್ಮೀರ ವಿಚಾರದಲ್ಲಿ ಮೂಗು ತೂರಿಸುತ್ತಿದ್ದ ಪಾಕಿಸ್ತಾನ, ಇದೀಗ ಪಂಜಾಬ್ ರಾಜ್ಯದ ಮೇಲೆ ತನ್ನ ಕೆಂಗಣ್ಣು ಬೀರಿದೆ. ಪಾಕಿಸ್ತಾನ ಏನೇ ಮಾಡಿದರೂ ಅದನ್ನು ಸಹಿಸಿಕೊಂಡು ಸುಮ್ಮನೆ ಕೂರಲು ನಾವೇನು ಬಳೆತೊಟ್ಟಿಲ್ಲ. ನಿಮ್ಮ ಮಹಾಪಾತಕ ಕೃತ್ಯಗಳು ಯಶಸ್ಸು ಕಾಣಲು ನಾವು ಬಿಡುವುದಿಲ್ಲ. ಅದು ಪಂಜಾಬ್ ಆದರೂ ಸರಿಯೇ ಕಾಶ್ಮೀರವಾದರೂ ಸರಿಯೇ ಎಂದು ಎಚ್ಚರಿಸಿದ್ದಾರೆ. 

ಪಂಜಾಬಿಗಳು ಧೈರ್ಯಶಾಲಿಗಳು. ನಿಮಗೆ ಬೇಕಿದ್ದನ್ನು ಮಾಡಲು ಬಿಡಲು ನಾವೇನು ಬಳೆ ತೊಟ್ಟಿಲ್ಲ. ವಿಧ್ವಂಸಕ ಕೃತ್ಯಕ್ಕೆ ಕುಮ್ಮಕ್ಕು ನೀಡುವ ಬದಲು ಪಾಕಿಸ್ತಾನ ತನ್ನ ದೇಶವನ್ನು ಅಭಿವೃದ್ಧಿ ಪಡಿಸುವುದರತ್ತ, ಶಾಲೆಗಳು, ರಸ್ತೆಗಳು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದರತ್ತ ಗಮನ ಹರಿಸಬೇಕಿದೆ ಎಂದು ಹೇಳಿದ್ದಾರೆ. 

ದ್ವೇಷವನ್ನು ಹುಟ್ಟು ಹಾಕುವುದರಿಂದ ಪಾಕಿಸ್ತಾನ ಏನನ್ನು ಸಾಧಿಸುತ್ತದೆ. ನಮ್ಮ ದೇಶ ಸ್ನೇಹವನ್ನು ಬಯಸುತ್ತದೆ ಎಂಬುದನ್ನು ಪಾಕಿಸ್ತಾನ ಅರ್ಥಮಾಡಿಕೊಳ್ಳುತ್ತದೆ ಎಂದು ನಾನು ಆಶಿಸುತ್ತೇನೆ. ನೆರೆ ರಾಷ್ಟ್ರದೊಂದಿಗೆ ಶಾಂತಿ ಕಾಪಾಡುವ ಕುರಿತಂತೆ ಹಲವು ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದ್ದೇನೆ. ಮೋದಿಯವರೂ ಕೂಡ ಅದನ್ನೇ ಬಯಸುತ್ತಿದ್ದಾರೆ. ಗುರುನಾನಕ್ ದೇವ್ ಅವರು ತೋರಿಸಿದ ಮಾರ್ಗವನ್ನು ಎಲ್ಲರೂ ಅನುಸರಿಸಬೇಕು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com