'ಮಹಾ' ಕಗ್ಗಂಟು: ರಾಜ್ಯಪಾಲರ ತೀರ್ಮಾನ ಪ್ರಶ್ನಿಸಿ, ಸುಪ್ರೀಂ ಮೊರೆ ಹೋದ ಶಿವಸೇನೆ

ಮಹಾರಾಷ್ಟ್ರದಲ್ಲಿನ ರಾಜಕೀಯ ಕ್ಷಣ ಕ್ಷಣಕ್ಕೂ ರೋಚಕತೆ ಪಡೆದುಕೊಳ್ಳುತ್ತಿದೆ. ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ  ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದನ್ನು ಪ್ರಶ್ನಿಸಿ ಶಿವಸೇನೆ ಸುಪ್ರೀಂಕೋರ್ಟ್ ಮೊರೆ ಹೋಗಿದೆ. 
ಉದ್ದವ್ ಠಾಕ್ರೆ, ಕಪಿಲ್ ಸಿಬಲ್
ಉದ್ದವ್ ಠಾಕ್ರೆ, ಕಪಿಲ್ ಸಿಬಲ್

ಮುಂಬೈ: ಮಹಾರಾಷ್ಟ್ರದಲ್ಲಿನ ರಾಜಕೀಯ ಕ್ಷಣ ಕ್ಷಣಕ್ಕೂ ರೋಚಕತೆ ಪಡೆದುಕೊಳ್ಳುತ್ತಿದೆ. ರಾಜ್ಯಪಾಲರು ರಾಷ್ಟ್ರಪತಿ ಆಳ್ವಿಕೆಗೆ  ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವುದನ್ನು ಪ್ರಶ್ನಿಸಿ ಶಿವಸೇನೆ ಸುಪ್ರೀಂಕೋರ್ಟ್ ಮೊರೆ ಹೋಗಿದೆ. 

ಸರ್ಕಾರ ರಚಿಸಲು ಬಿಜೆಪಿ ಎರಡು ದಿನ ಅವಕಾಶ ನೀಡಿದ್ದ ರಾಜ್ಯಪಾಲರು ಶಿವಸೇನೆಗೆ ಕೇವಲ 24 ಗಂಟೆಗಳ ಗಡುವು ನೀಡಿದ್ದರು. ಶಿವಸೇನಾ ಕೂಡಾ ಸರ್ಕಾರ ರಚಿಸುವಲ್ಲಿ ವಿಫಲವಾಗಿದ್ದರಿಂದ ಮೂರನೇ ದೊಡ್ಡ ಪಕ್ಷವಾಗಿರುವ ಎನ್ ಸಿಪಿಗೆ ಇಂದು ರಾತ್ರಿ 8-30ರವರೆಗೆ ಗಡುವನ್ನು ನೀಡಲಾಗಿದೆ. ಆದಾಗ್ಯೂ, ಈ ಗಡುವು ಮುಗಿಯದಿದ್ದರೂ ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲರು ಮಾಡಿರುವ ಶಿಫಾರಸನ್ನು ಶಿವಸೇನೆ ಪ್ರಶ್ನಿಸಿದೆ.

ಕಾಂಗ್ರೆಸ್  ಮುಖಂಡ ಹಾಗೂ ಸುಪ್ರೀಂಕೋರ್ಟ್ ಹಿರಿಯ ವಕೀಲ ಕಪಿಲ್ ಸಿಬಲ್  ಶಿವಸೇನೆ ಪರ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಈ ಮಧ್ಯೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಅಭಿಷೇಕ್ ಮನು ಸಿಂಘ್ವಿ, ಸರ್ಕಾರ ರಚಿಸಲು ಶಿವಸೇನೆಗೆ 48 ಗಂಟೆಗಳ ಕಾಲಾವಕಾಶ ನೀಡದ ರಾಜ್ಯಪಾಲರು ಬಿಜೆಪಿಗೆ 5 ವಾರಗಳ ಕಾಲಾವಕಾಶ ನೀಡುತ್ತಾರೆ. ರಾಜಕೀಯ ದುರುದ್ದೇಶಕ್ಕಾಗಿ ಸಾಂವಿಧಾನಿಕ ಹುದ್ದೆಗಳನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com