ಮುಂಬೈ: ಮರಾಠಿ ಚಿತ್ರದ ಹಿನ್ನಲೆ ಗಾಯಕಿ ಗೀತಾ ಮಾಲಿ ರಸ್ತೆ ಅಪಘಾತದಲ್ಲಿ ನಿಧನ 

ಮರಾಠಿ ಚಿತ್ರಗಳ ಹಿನ್ನಲೆ ಗಾಯಕಿ ಗೀತಾ ಮಾಲಿ ಥಾಣೆ ಜಿಲ್ಲೆಯ ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಗೀತಾ ಮಾಲಿ(ಸಂಗ್ರಹ ಚಿತ್ರ)
ಗೀತಾ ಮಾಲಿ(ಸಂಗ್ರಹ ಚಿತ್ರ)

ನಾಶಿಕ್: ಮರಾಠಿ ಚಿತ್ರಗಳ ಹಿನ್ನಲೆ ಗಾಯಕಿ ಗೀತಾ ಮಾಲಿ ಥಾಣೆ ಜಿಲ್ಲೆಯ ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.


ಅಮೆರಿಕಾದಿಂದ ವಾಪಸ್ಸಾಗಿದ್ದ ಗೀತಾ ಮಾಲಿ ತಮ್ಮ ಪತಿ ವಿಜಯ್ ಅವರೊಂದಿಗೆ ತಮ್ಮ ತವರೂರು ನಾಶಿಕ್ ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಕಾರು ರಸ್ತೆ ಬದಿ ನಿಂತಿದ್ದ ಕಂಟೈನರ್ ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ.


ನಿನ್ನೆ ಅಪರಾಹ್ನ 3 ಗಂಟೆ ಸುಮಾರಿಗೆ ಶಹಪುರದ ಲಾಹೆ ಫಾಟಾ ಹತ್ತಿರ ಈ ಅಪಘಾತ ಸಂಭವಿಸಿದ್ದು ಗೀತಾ ಮತ್ತು ಅವರ ಪತಿ ವಿಜಯ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಕೂಡಲೇ ಶಹಪುರ ಗ್ರಾಮೀಣ ಆಸ್ಪತ್ರೆಗೆ ದಾಖಲು ಮಾಡಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಗೀತಾ ಮಾಲಿ ಮೃತಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com