ದಕ್ಷಿಣ ಅಮೆರಿಕಾದಲ್ಲಿ ನಿತ್ಯಾನಂದ? ಇಲ್ಲಿದೆ ಆಘಾತಕಾರಿ ವಿವರ

ಸ್ವಯಂಘೋಷಿತ ದೇವಮಾನವ ನಿತ್ಯಾನಂದ 2018 ರ ಸೆಪ್ಟೆಂಬರ್ ಮೊದಲು ದೇಶದಿಂದ ಪಲಾಯನ ಮಾಡಿದ್ದಾನೆಯೆ? ಆತನ ಪಾಸ್ ಪೋರ್ಟ್ ಅವಧಿ ಸೆಪ್ಟೆಂಬರ್ 30, 2018ಕ್ಕೆ ಮುಕ್ತಾಯವಾಗಿತ್ತು. ಅದರ ನವೀಕರಣ ಮಾಡಬೇಕಿದ್ದ ದಿನಕ್ಕೆ ಮುನ್ನವೇ ಆತ ಭಾರತದಿಂದ ಹೊರಟು ಹೋಗಿದ್ದಾನೆ ಎಂಬ ಕುರಿತು ಪೋಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ನಿತ್ಯಾನಂದ
ನಿತ್ಯಾನಂದ

ಅಹಮದಾಬಾದ್: ಸ್ವಯಂಘೋಷಿತ ದೇವಮಾನವ ನಿತ್ಯಾನಂದ 2018 ರ ಸೆಪ್ಟೆಂಬರ್ ಮೊದಲು ದೇಶದಿಂದ ಪಲಾಯನ ಮಾಡಿದ್ದಾನೆಯೆ? ಆತನ ಪಾಸ್ ಪೋರ್ಟ್ ಅವಧಿ ಸೆಪ್ಟೆಂಬರ್ 30, 2018ಕ್ಕೆ ಮುಕ್ತಾಯವಾಗಿತ್ತು. ಅದರ ನವೀಕರಣ ಮಾಡಬೇಕಿದ್ದ ದಿನಕ್ಕೆ ಮುನ್ನವೇ ಆತ ಭಾರತದಿಂದ ಹೊರಟು ಹೋಗಿದ್ದಾನೆ ಎಂಬ ಕುರಿತು ಪೋಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.ಗುಜರಾತ್ ಪೊಲೀಸರುನಿತ್ಯಾನಂದನ ಪಾಸ್ ಪೋರ್ಟ್ ಬಗ್ಗೆ ಕೆಲವು ಸೂಕ್ಷ್ಮ ಮಾಹಿತಿಯನ್ನು ಕಂಡುಕೊಂಡಿದ್ದಾರೆ, ಮತ್ತು ಇದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.

ಅಕ್ಟೋಬರ್ 1, 2008 ರಂದು ಬೆಂಗಳೂರು ಕಚೇರಿಯಿಂದ ನಿತ್ಯಾನಂದ ಅವರ ಪಾಸ್‌ಪೋರ್ಟ್ (ಸಂಖ್ಯೆZ-1864348) ನೀಡಲಾಗಿದ್ದು, ಇದು ಸೆಪ್ಟೆಂಬರ್ 30, 2018 ರವರೆಗೆ ಇದು ಮಾನ್ಯವಾಗಿರಲಿದೆ.ಎಂದು  ಗುಜರಾತ್ ಪೊಲೀಸರ ಮೂಲಗಳು ತಿಳಿಸಿವೆ. ಗುಜರಾತ್ ಪೊಲೀಸ್ ತನಿಖೆ ನಡೆಯುತ್ತಿರುವಾಗ ಆಘಾತಕಾರಿ ಸಂಗತಿಗಳು ಪತ್ತೆಯಾಗಿದೆ.

"ನಿತ್ಯಾನಂದನ  ಪಾಸ್‌ಪೋರ್ಟ್ ನವೀಕರಿಸಲಾಗಿಲ್ಲ ಎಂದು ಬೆಂಗಳೂರು ಪಾಸ್‌ಪೋರ್ಟ್ ಕಚೇರಿ ದೃಢಪಡಿಸಿದೆ.ಅದಾಗ್ಯೂ ಆತ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದ. ಆದರೆ ಎನ್‌ಒಸಿ ಪಡೆಯಲು ಸಾಧ್ಯವಾಗಲಿಲ್ಲ"ಉಪ ಪೊಲೀಸ್ ವರಿಷ್ಠಾಧಿಕಾರಿ (ಅಹಮದಾಬಾದ್ ಗ್ರಾಮೀಣ) ಕೆ.ಟಿ. ಕಮರಿಯಾಹೇಳೀದ್ದಾರೆ. ತನ್ನ ಪಾಸ್‌ಪೋರ್ಟ್‌ನ ನವೀಕರಣ ದಿನಾಂಕ ಸಮೀಪಿಸುವ ಮುನ್ನ ನಿತ್ಯಾನಂದ ದೇಶದಿಂದ ಪರಾರಿಯಾಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.

ನಿತ್ಯಾನಂದ ದಕ್ಷಿಣ ಅಮೆರಿಕಾದಯಾವುದೋ ಭಾಗದಲ್ಲಿ ತಲೆಮರೆಸಿಕೊಂಡಿದ್ದಾನೆ.ಈಗ, ನಿತ್ಯಾನಂದ ಭಾರತದಿಂದ ಪಲಾಯನ ಮಾಡಲು ಬಯಸಿದ್ದರೆ  ನವೀಕರಣಕ್ಕಾಗಿ ಏಕೆ ಅವಸರದಲ್ಲಿದ್ದರು ಎಂಬ ಪ್ರಶ್ನೆ ಉದ್ಭವಿಸಿದೆ. ಎರಡನೆಯದಾಗಿಪಾಸ್ ಪೋರ್ಟ್  ನವೀಕರಿಸಲು ಸಾಧ್ಯವಾಗದಿದ್ದರೆ, ಆತ ಹೇಗೆ ತಪ್ಪಿಸಿಕೊಂಡನು? ಅಥವಾ ಅವರು ಸೆಪ್ಟೆಂಬರ್ 30, 2018 ರ ಮುನ್ನವೇ ದೇಶ ಬಿಟ್ಟು ಹೋದನೆ?

"ನಾವೀಗ ಈ ಒಗಟನ್ನು ಬಿಡಿಸಲು ಪ್ರಯತ್ನದಲ್ಲಿದ್ದೇವೆ" ಕಮರಿಯಾ ಹೇಳಿದರು.

ಗುಜರಾತ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳೀದಂತೆ "ಈ ವಿಷಯವು ನ್ಯಾಯಾಲಯದ ಮುಂದೆ ಬರುತ್ತಿದ್ದಂತೆ, ಆರೋಪಿ ಬಂಧನವನ್ನು ತಪ್ಪಿಸಿಕೊಳ್ಳಲು ಸಾಧ್ಯವಿರುವ ಎಲ್ಲ ತಂತ್ರಗಳನ್ನು ಪ್ರಯತ್ನಿಸಿದ್ದಾನೆ.ಆದ್ದರಿಂದ  ಆತ ಕುಂಭಮೇಳ-2018ಕ್ಕೆ ಹಾಜರಾಗಲು ಯತ್ನಿಸಿದ್ದ.ಅಲ್ಲಿ ಆತ ತಾನು ಮುಖ್ಯ ಕಾರ್ಯಕ್ರಮ ನಡೆಸಲು ಯೋಜಿಸಿದ. ಅದು ಉತ್ತರ ಪ್ರದೇಶ ಪೋಲೀಸರು ಆತನಿಂದ ದೂರ ಸರಿಯುವಂತೆ ಮಾಡಿದೆ." ಎಂದಿದ್ದಾರೆ.

ಪೊಲೀಸರು ಬುಧವಾರ ನಿತ್ಯಾನಂದನ ಅಹಮದಾಬಾದ್ ಆಶ್ರಮದ ಮೇಲೆ ದಾಳಿ ನಡೆಸಿ ಕೆಲವು ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಿದ್ದಾರೆ. ಆಶ್ರಮದ ಉಸ್ತುವಾರಿ ವಹಿಸಿಕೊಂಡಿದ್ದ ನಿತ್ಯಾನಂದನ ಇಬ್ಬರು ಮಹಿಳಾ ಶಿಷ್ಯರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಈ ನಿಟ್ಟಿನಲ್ಲಿ ನಿತ್ಯಾನಂದ ಹಾಗೂ ಇಬ್ಬರು ಮಹಿಳೆಯರು ಸೇರಿ ಮೂವರ ವಿರುದ್ಧ  ಪ್ರಕರಣ ದಾಖಲಿಸಲಾಗಿದೆ. ನಿತ್ಯಾನಂದಕುಂಭಮೇಳ 2018 ರಲ್ಲಿ ಭಾಗವಹಿಸಲು ಪ್ರಯತ್ನಿಸಿದ್ದಾನೆ ಎಂದು ಗುಜರಾತ್ ಪೋಲೀಸರಿಗೆ ಮಾಹಿತಿ ಇತ್ತು. ಆದರೆ ಆತನ ಕುಕೃತ್ಯಗಳು ಉತ್ತರ ಪ್ರದೇಶ ಸರ್ಕಾರದ ಗಮನಕ್ಕೆ ಬಂದಿದ್ದು, ಅವನಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಿತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com