ನಮ್ಮ ಮಕ್ಕಳ ರಕ್ಷಣೆ ಮಾಡಿ: ಬಿಡದಿ ನಿತ್ಯಾನಂದ ಶಾಲೆ ವಿರುದ್ಧ ಗುಜರಾತ್ 'ಹೈ' ಮೊರೆ ಹೋದ ಬೆಂಗಳೂರು ದಂಪತಿ!

ಬೆಂಗಳೂರಿನಲ್ಲಿ ಆಶ್ರಮ ಹೊಂದಿರುವ ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದು, ಅವರನ್ನು ರಕ್ಷಣೆ ಮಾಡಬೇಕೆಂದು ಕೋರಿ ಬೆಂಗಳೂರು ಮೂಲದ ದಂಪತಿಗಳು ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಅಹಮದಾಬಾದ್: ಬೆಂಗಳೂರಿನಲ್ಲಿ ಆಶ್ರಮ ಹೊಂದಿರುವ ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದು, ಅವರನ್ನು ರಕ್ಷಣೆ ಮಾಡಬೇಕೆಂದು ಕೋರಿ ಬೆಂಗಳೂರು ಮೂಲದ ದಂಪತಿಗಳು ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದಾರೆ. 

ಜನಾರ್ದನ ಶರ್ಮಾ ಎಂಬುವರೇ ನಿತ್ಯಾನಂದ ಆಶ್ರಮದಿಂದ ತಮ್ಮ ಮಕ್ಕಳನ್ನು ಬಂಧನ ಮುಕ್ತಗೊಳಿಸಬೇಕೆಂದು ಕೋರಿ ನ್ಯಾಯಾಲಯದ ಕದತಟ್ಟಿದವರಾಗಿದ್ದಾರೆ. 

2013ರಲ್ಲಿ 7 ವರ್ಷದಿಂದ 15 ವರ್ಷದವರೆಗಿನ ತಮ್ಮ ನಾಲ್ವರು ಮಕ್ಕಳನ್ನು ನಿತ್ಯಾನಂದ ಅವರು ನಿರ್ವಹಿಸುವ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಸೇರಿಸಿದ್ದೆವು. ಆದರೆ, ಹೆಣ್ಣು ಮಕ್ಕಳು ಅಹಮದಾಬಾದ್'ನಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯ ಆವರಣದಲ್ಲಿರುವ ನಿತ್ಯಾನಂದನ ಧ್ಯಾನಪೀಠವಾಗಿರುವ ಯೋಗಿನಿ ಸರ್ವಜ್ಞಾನಪೀಠಂ ಎಂಬಲ್ಲಿಗೆ ವರ್ಗಾಯಿಸಲಾಗಿದೆ ಎಂದಿದ್ದಾರೆ. 

ನಮ್ಮ ಮಕ್ಕಳನ್ನು ನಮಗೆ ನೀಡುವಂತೆ ಶಿಕ್ಷಣ ಸಂಸ್ಥೆ ಬಳಿ ಮನವಿ ಮಾಡಿಕೊಂಡಿದ್ದೇವು. ಆದರೆ, ಮಕ್ಕಳನ್ನು ಭೇಟಿ ಮಾಡಲು ನಮಗೆ ಅವಕಾಶ ನೀಡಲಾಗುತ್ತಿಲ್ಲ. ಮಕ್ಕಳ ವಿಡಿಯೋವನ್ನು ಆಗಾಗ ಹರಿಬಿಡಲಾಗುತ್ತಿದೆ. ಎಲ್ಲೋ ಏನೋ ತಪ್ಪಾಗುತ್ತಿದೆ ಎಂದೆನಿಸುತ್ತಿದೆ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಿದ್ದೇನೆಂದು ಶರ್ಮಾ ಅವರು ಹೇಳಿದ್ದಾರೆ. 

ಗುಜರಾತ್ ಹೈಕೋರ್ಟ್ ಬಳಿ ಮಕ್ಕಳನ್ನು ವಶಕ್ಕೆ ನೀಡುವಂತೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಲಾಗಿದೆ ಎಂದು ದಂಪತಿಗಳ ಪರ ವಕೀಸ ಪ್ರೀತೇಶ್ ಶಾ ತಿಳಿಸಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿತ್ತು. ಇದರಲ್ಲಿ ದಂಪತಿಗಳ ಪುತ್ರಿ ಎಂದು ಹೇಳಲಾಗುತ್ತಿರುವ ನಿತ್ಯಾನಂದಿತಾ ಮಾತನಾಡಿದ್ದಳು. ಸ್ವಇಚ್ಛೆಯಿಂದಲೇ ನಾನು ಆಶ್ರಮದಲ್ಲಿದ್ದೇನೆಂದು ಹೇಳಿದ್ದಳು. 

ಕಳೆದ 6 ವರ್ಷಗಳಿಂದ ನಾನು ಆಶ್ರಮದಲ್ಲಿದ್ದೇನೆ. ಇಲ್ಲಿ ಸಂತೋಷವಾಗಿಯೇ ಇದ್ದೇನೆ. ಸ್ವಇಚ್ಛೆಯಿಂದ ನಾನು ಈ ದಾರಿಯನ್ನು ಆರಿಸಿಕೊಂಡಿದ್ದೇನೆ. ಸನ್ಯಾಸಿನಿಯಾಗಿ ನಾನಿಲ್ಲಿದ್ದೇನೆ. ಈ ಮಾರ್ಗದಿಂದ ಸ್ವಾಮೀಜಿಗಳ ಸಂದೇಶಗಳನ್ನು ಹಂಚಿಕೊಳ್ಳುತ್ತೇನೆ. ಪೋಷಕರಾಗಲೀ, ಯಾರೇ ಆದರೂ ನಾನು ಯಾರನ್ನೂ ಭೇಟಿಯಾಗಲು ಇಚ್ಛಿಸುವುದಿಲ್ಲ. ನಾನಿಲ್ಲಿ ಸುರಕ್ಷಿತವಾಗಿದ್ದೇನೆ. ಸನ್ಯಾಸಿನಿಯಾಗಿ ನಾನಿಲ್ಲಿ ಮುಂದುವರೆಯಲು ಇಚ್ಛಿಸಿದ್ದೇನೆ. ಇಲ್ಲಿರುವವರು ನನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆಂದು ಹೇಳಿಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com