ಶೌಚಾಲಯ ಇಲ್ಲವೆಂದು ಮದುವೆಯಾದ ಮೂರನೇ ದಿನಕ್ಕೆ ಪತಿ ಮನೆ ತೊರೆದ ನವ ವಿವಾಹಿತೆ!

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹಾತ್ವಾಕಾಂಕ್ಷಿ ಯೋಜನೆಯದ ಸ್ವಚ್ಛ ಭಾರತ್ ಅಭಿಯಾನದ ಸ್ಪೂರ್ತಿಗೊಂಡ ಮಹಿಳೆಯೊಬ್ಬಳು, ಶೌಚಾಲಯವಿಲ್ಲವೆಂದು ವಿವಾಹದ ಮೂರನೇ ಪತಿ ಮನೆ ತೊರೆದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

Published: 07th October 2019 10:53 AM  |   Last Updated: 07th October 2019 10:53 AM   |  A+A-


Vivek Pankaj with his wife Jyoti at her parents house.

ನವವಿವಾಹಿತರಾದ ಜ್ಯೋತಿ ಮತ್ತು ಪಂಕಜ್

Posted By : Shilpa D
Source : The New Indian Express

ಭೂಪಾಲ್: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹಾತ್ವಾಕಾಂಕ್ಷಿ ಯೋಜನೆಯದ ಸ್ವಚ್ಛ ಭಾರತ್ ಅಭಿಯಾನದ ಸ್ಪೂರ್ತಿಗೊಂಡ ಮಹಿಳೆಯೊಬ್ಬಳು, ಶೌಚಾಲಯವಿಲ್ಲವೆಂದು ವಿವಾಹದ ಮೂರನೇ ಪತಿ ಮನೆ ತೊರೆದಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಅಕ್ಷಯ್ ಕುಮಾರ್ ಅಭಿನಯದ ಟಾಯ್ಲೆಟ್ ಏಕ್  ಪ್ರೇಮ್ ಕಥಾ ಸಿನಿಮಾ 2017 ರಲ್ಲಿ ತೆರೆಕಂಡಿತ್ತು. ಆಈ ,ಸಿನಿಮಾ ಕೂಡ ಶೌಚಾಲಯದ ಕಥಾ ಹಂದರ ಹೊಂದಿತ್ತು. ತೆರೆ ಮೇಲೆ ನೋಡಿದ್ದ ಕಥೆ ನೈಜ ಜೀವನದಲ್ಲೂ ನಡೆದಿದೆ.

ಜ್ಯೋತಿ ಎಂಬಾಕೆ 2019ರ ಮೇ ತಿಂಗಳಲ್ಲಿ ನಿರುದ್ಯೋಗಿ ಯುವಕ ವಿವೇಕ್ ಪಂಕಜ್ ಎಂಬಾತನ ಜೊತೆ ವಿವಾಹವಾಗಿತ್ತು, ಆದರೆ ವಿವೇಕ್ ಮನೆಯಲ್ಲಿ  ಶೌಚಾಲಯ ಇಲ್ಲದ ಕಾರಣ ಆಕೆ ಮದುವೆಯಾದ ಮೂರನೇ ದಿನಕ್ಕೆ ಮನೆ ತ್ಯಜಿಸಿ ಹೋಗಿದ್ದಾಳೆ.

ನಿರುದ್ಯೋಗಿಯಾದ ಪಂಕಜ್ ಐದು ತಿಂಗಳಾದರೂ  ಮನೆಯಲ್ಲಿ ಶೌಚಾಲಯ ಕಟ್ಟಿಸದ ಕಾರಣ ಜ್ಯೋತಿ ಮನೆಗೆ ವಾಪಸ್ ಬರಲಿಲ್ಲ, ಆಕೆ ಮನೆ ಬಿಟ್ಟು ಹೋದ ಮೇಲೆ ಸುಮಾರು 7 ಬಾರಿ ಹೋಗಿ ವಾಪಸ್ ಬರುವಂತೆ ಕರೆದೆ, ಆದರೆ ಆಕೆ ಮಾತ್ರ ಬರಲಿಲ್ಲ. ಪ್ರತಿ ಬಾರಿ ಅಕೆ ಮನೆಗೆ  ಹೋಗಿ ಬರುವಂತೆ ಮನವಿ ಮಾಡಿದೆ, ಆದರೆ  ಶೌಚಾಲಯ  ಕಟ್ಟಿಸುವವರೆಗೂ ಬರುವುದಿಲ್ಲ ಎಂದು ಜ್ಯೋತಿ ಹಠ ಹಿಡಿದಿದ್ದಳು ಎಂದು ಪಂಕಜ್ ತಿಳಿಸಿದ್ದಾರೆ,

ನಾನು ನಿರುದ್ಯೋಗಿ, ನನ್ನ ಬಳಿ ಹಣವಿಲ್ಲ, ಹೀಗಾಗಿ ಶೌಚಾಲಯ ಕಟ್ಟಿಸಿಕೊಡುವಂತೆ ಸರ್ಕಾರಕ್ಕೆ  ಮನವಿ ಮಾಡಿದ್ದೇನೆ, ಆದರೆ ಮೊದಲು ನಿಮ್ಮ ಹಣದಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಿ ಆನಂತರ ಹಣ ರಿಲೀಸ್ ಮಾಡುವುದಾಗಿ ಹೇಳುತ್ತಾರೆ ಎಂದು ಪಂಕಜ್ ತಿಳಿಸಿದ್ದಾರೆ.

ಆದರೆ ಶೌಚಾಲಯ ಕಟ್ಟುವವರೆಗೂ ಯಾವುದೇ ಕಾರಣಕ್ಕೂ ಮನೆಗೆ ಬರುವುದಿಲ್ಲವೆಂದು ಜ್ಯೋತಿ ಪಟ್ಟು ಹಿಡಿದಿದ್ದಾರೆ,

Stay up to date on all the latest ರಾಷ್ಟ್ರೀಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp