ನಾವು ಭಾರತ್ ಮಾತಾ ಕಿ ಜೈ ಎಂದರೆ, ಕಾಂಗ್ರೆಸ್ಸಿಗರು ಸೋನಿಯಾ ಮಾತಾ ಕಿ ಜೈ ಎನ್ನುತ್ತಾರೆ: ಹರಿಯಾಣ ಸಿಎಂ

ನಾವು ಭಾರತ್ ಮಾತಾ ಕಿ ಜೈ ಎಂದರೆ, ಕೆಲ ಕಾಂಗ್ರೆಸ್ಸಿನಲ್ಲಿರುವವರು ಸೋನಿಯಾ ಮಾತಾ ಕಿ ಜೈ ಎನ್ನುತ್ತಾರೆಂದು ಕಾಂಗ್ರೆಸ್ ವಿರುದ್ಧ ಹರಿಯಾಣ ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಭಾನುವಾರ ತೀವ್ರವಾಗಿ ಕಿಡಿಕಾರಿದ್ದಾರೆ. 
ಹರಿಯಾಣ ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್
ಹರಿಯಾಣ ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್

ಚಂಡೀಗಢ: ನಾವು ಭಾರತ್ ಮಾತಾ ಕಿ ಜೈ ಎಂದರೆ, ಕೆಲ ಕಾಂಗ್ರೆಸ್ಸಿನಲ್ಲಿರುವವರು ಸೋನಿಯಾ ಮಾತಾ ಕಿ ಜೈ ಎನ್ನುತ್ತಾರೆಂದು ಕಾಂಗ್ರೆಸ್ ವಿರುದ್ಧ ಹರಿಯಾಣ ರಾಜ್ಯದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಭಾನುವಾರ ತೀವ್ರವಾಗಿ ಕಿಡಿಕಾರಿದ್ದಾರೆ. 

ಅಬಾಲಾ ಜಿಲ್ಲೆಯ ನಿರ್ಯಾಂಗರ್ಹ್ ನಲ್ಲಿ ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿರುವ ಅವರು, ಪ್ರಾಮುಖ್ಯತೆ ಮೊದಲು ಯಾವುದಕ್ಕೆ ನೀಡಬೇಕೆಂದು ಕೇಳಿದರೆ, ನಾವೆಲ್ಲರೂ ದೇಶ ಮೊದಲು ಎನ್ನುತ್ತೇವೆ. ಆದರೆ, ಕಾಂಗ್ರೆಸ್ಸಿನಲ್ಲಿರುವವರು ನಮ್ಮ ನಾಯಕರು ಮೊದಲು ಎನ್ನುತ್ತಾರೆ. ನಾವು ಭಾರತ್ ಮಾತಾ ಕಿ ಜೈ ಎಂದರೆ, ಕಾಂಗ್ರೆಸ್ಸಿನಲ್ಲಿರುವ ಕೆಲವರು ಸೋನಿಯಾ ಮಾತಾ ಕಿ ಜೈ ಎನ್ನುತ್ತಾರೆಂದು ಹೇಳಿದ್ದಾರೆ. 

ಕಾಂಗ್ರೆಸ್ಸಿನಲ್ಲಿರುವ ಕೆಲವರ ಮನಸ್ಥಿತಿ ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ವಿಡಿಯೋವೊಂದೇ ಹೇಳುತ್ತದೆ. ಗುರ್ಗಾಂವ್ ನಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು, ಗುರ್ಗಾಂವ್ ಇನ್ನುಮಂದೆ ಭಾರತ್ ಮಾತಾ ಕಿ ಜೈ ಎಂದು ಹೇಳುವುದಿಲ್ಲ, ಕೇವಲ ಸೋನಿಯಾ ಮಾತಾ ಕಿ ಜೈ ಎಂದಷ್ಟೇ ಹೇಳುತ್ತಾರೆಂದು ಹೇಳಿದ್ದಾರೆಂದು ಟೀಕಿಸಿದ್ದಾರೆ. 

ಇದೀಗ ಆ ವಿಡಿಯೋ ನಕಲಿ ಎಂದು ಕಾಂಗ್ರೆಸ್ ಹೇಳುವಂತಿಲ್ಲ. ಏಕೆಂದರೆ ಅದರಿಂದ ಸೋನಿಯಾ ಅವರಿಗೆ ಮುಜುಗರವನ್ನುಂಟು ಮಾಡುತ್ತದೆ. ವಿಡಿಯೋ ಅಧಿಕೃತವಾದದ್ದು ಎಂದರೆ, ಸಾರ್ವಜನಿಕರು ಕೆಂಡಾಮಂಡಲಗೊಳ್ಳುತ್ತಾರೆ. ಗಾಂಧಿ-ನೆಹರು ಕುಟುಂಬ ಬಿಟ್ಟು ಕಾಂಗ್ರೆಸ್ ಹೊರಗಿನದ್ದನ್ನು ನೋಡುವುದಿಲ್ಲ. ಲೋಕಸಭಾ ಚುನಾವಣೆ ಬಳಿಕ ರಾಹುಲ್ ಗಾಂಧಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆಂದು ಹೇಳಿದ್ದಾರೆ. ಖಾಲಿಯಿರುವ ಅಧ್ಯಕ್ಷ ಸ್ಥಾನಕ್ಕೆ ಹೊರಗಿನವರನ್ನು ಆಯ್ಕೆ ಮಾಡುತ್ತೇವೆಂದು ಹೇಳಿದ್ದಾರೆ. ರಾಜೀನಾಮೆ ಕೊಟ್ಟು 2 ತಿಂಗಳಾದರೂ, ಇನ್ನೂ ಆ ಸ್ಥಾನಕ್ಕೆ ಯಾರನ್ನು ನೇಮಿಸಿಲ್ಲ. ಹೊರಗಿನವರನ್ನು ನೇಮಿಸಲು ಸಾಧ್ಯವಾಗದೆ, ಸೋನಿಯಾ ಗಾಂಧಿಯವರನ್ನೇ ಮತ್ತೆ ನೇಮಕ ಮಾಡಲಾಗಿದೆ ಎಂದಿದ್ದಾರೆ. 

ಇದೇ ವೇಳೆ ಪ್ರಧಾನಿ ಮೋದಿಯವರನ್ನು ಕೊಂಡಾಡಿರುವ ಖಟ್ಟರ್ ಅವರು, ದೇಶದ ವರ್ಚಸ್ಸನ್ನು ಪ್ರಧಾನಿ ಮೋದಿ ಸರ್ಕಾರ ಇಡೀ ವಿಶ್ವದ ಎದುರು ಎತ್ತಿ ಹಿಡಿದಿದೆ. ದೇಶದ ವರ್ಚಸ್ಸು ಹೆಚ್ಚಿದೆ. ಹ್ಯೂಸ್ಟನ್ ನಲ್ಲಿ ನಡೆದ ಹೌಡಿ ಮೋದಿಯಲ್ಲಿ ಇದನ್ನು ಕಾಣಬಹುದು. ದೊಡ್ಡ ದೊಡ್ಡ ರಾಷ್ಟ್ರದವರು ಪ್ರಧಾನಿ ಮೋದಿಯವರನ್ನು ಭೇಟಿಯಾದರು. ಅವರ ನೀತಿ ಹಾಗೂ ಯೋಜನೆಗಳ ಕುರಿತು ಸಲಹೆ ಪಡೆದುಕೊಂಡಿದ್ದಾರೆ. ಇದೀಗ ಮೋದಿ ವಿಶ್ವದ ಟಾಪ್ ನಾಯಕರಲ್ಲಿ ಒಬ್ಬರಾಗಿದ್ದಾರೆ. ಯಾರಿಗೂ ಗೌರವ ನೀಡದ ಡೊನಾಲ್ಡ್ ಟ್ರಂಪ್, ಪ್ರಧಾನಿ ಮೋದಿಗೆ ನೀಡಿದ್ದಾರೆಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com