ಕಾಶ್ಮೀರ ವಿಚಾರದಲ್ಲಿ ಮಧ್ಯಪ್ರವೇಶಿಸದಂತೆ ಟ್ರಂಪ್'ಗೆ ಪ್ರಧಾನಿ ಮೋದಿ ಸೂಚಿಸಿದ್ದಾರೆ: ಅಮಿತ್ ಶಾ

ಕಾಶ್ಮೀರ ವಿಚಾರ ಭಾರತದ ಆಂತರಿಕವಾಗಿದ್ದು, ಇದರಲ್ಲಿ ಮಧ್ಯಪ್ರವೇಶಿಸದಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ಮೋದಿ ಸೂಚಿಸಿದ್ದಾರೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶುಕ್ರವಾರ ಹೇಳಿದ್ದಾರೆ. 
ಅಮಿತ್ ಶಾ
ಅಮಿತ್ ಶಾ

'ಕಾಶ್ಮೀರ' ನಮ್ಮ ಆಂತರಿಕ ವಿಚಾರ, ಅಮೆರಿಕಾ ಅಲ್ಲ ಯಾರೇ ಮಧ್ಯ ಬಂದರೂ ನಮ್ಮ ನಿಲುವು ಒಂದೇ: ಅಮಿತ್ ಶಾ

ಬುಲ್ಧಾನಾ (ಮಹಾರಾಷ್ಟ್ರ): ಕಾಶ್ಮೀರ ವಿಚಾರ ಭಾರತದ ಆಂತರಿಕವಾಗಿದ್ದು, ಇದರಲ್ಲಿ ಮಧ್ಯಪ್ರವೇಶಿಸದಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ಮೋದಿ ಸೂಚಿಸಿದ್ದಾರೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಶುಕ್ರವಾರ ಹೇಳಿದ್ದಾರೆ. 

ಚುನಾವಣಾ ರ್ಯಾಲಿಯಲ್ಲಿ ಮಾತನಾಡಿರುವ ಅಮಿತ್ ಶಾ ಅವರು, ಕಾಶ್ಮೀರ ವಿಚಾರ ಸಂಬಂಧ ಭಾರತದ ನಿಲುವು ಹಲವು ವರ್ಷಗಳಿಂದಲೂ ಒಂದೇ ಆಗಿದೆ. ಈ ವಿಚಾರದಲ್ಲಿ ಯಾರೇ ಮಧ್ಯಪ್ರವೇಶಿಸಿದರೂ ಅದನ್ನು ಸಹಿಸುವುದಿಲ್ಲ. ಕಾಶ್ಮೀರ ವಿಚಾರವಾಗಿ ಯಾವುದೇ ರಾಷ್ಟ್ರ ಮಾತನಾಡಿದರೂ, ಅಮೇರಿಕಾ ಆಗಲೀ ಯಾವುದೇ ಯಾರೇ ಆದರೂ, ಅದು ನಮ್ಮ ಆಂತರಿಕ ವಿಚಾರವೆಂದೇ ಎಲ್ಲಾ ರಾಷ್ಟ್ರಕ್ಕೂ ಹೇಳುತ್ತೇವೆ. ಕಾಶ್ಮೀರ ನಮ್ಮ ಆಂತರಿಕ ವಿಚಾರವಾಗಿದ್ದು, ಮಧ್ಯಪ್ರವೇಶಿಸದಂತೆ ಟ್ರಂಪ್ ಅವರಿಗೆ ಮೋದಿಯವರು ಸೂಚಿಸಿದ್ದಾರೆಂದು ಹೇಳಿದ್ದಾರೆ. 

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ವಿಧಿ ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ಹಾಗೂ ಎನ್'ಸಿಪಿ ವಿರೋಧಿಸಿತ್ತು. ಕಾಶ್ಮೀರ ವಿಚಾರ ಸಂಬಂಧ ಅವರ ನಿಲುವೇನು ಎಂಬುದನ್ನು ಮತದಾರರು ಅವರನ್ನು ಪ್ರಶ್ನಿಸಬೇಕು. ಭಾರತದೊಂದಿಗೆ ಕಾಶ್ಮೀರ ಏಕೀಕರಣವಾಗಲು 370 ವಿಧಿ ರದ್ದು ಅತ್ಯಂತ ಮುಖ್ಯವಾದದ್ದು. 70 ವರ್ಷಗಳಲ್ಲಿ ಯಾವುದೇ ಪ್ರಧಾನಮಂತ್ರಿಗಳೂ ಈ ರೀತಿಯ ದಿಟ್ಟ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆದರೆ, ಪ್ರಧಾನಿ ಮೋದಿ ಮಾಡಿದ್ದಾರೆ. 

370 ವಿಧಿ ರದ್ದುಗೊಳಿಸದರೆ, ಕಾಶ್ಮೀರದಲ್ಲಿ ರಕ್ತದ ಹೊಳೆ ಹರಿಯುತ್ತದೆ ಎಂದಿದ್ದರು. ಆದರೆ, ಒಂದು ಹನಿ ರಕ್ತ ಕೂಡ ಬೀಳಲಿಲ್ಲ. ಬಿಜೆಪಿ ಹಾಗೂ ಎನ್'ಸಿಪಿ ನಾಯಕರು ಮತ ಕೇಳಲು ಬಂದಾಗ ಕಾಶ್ಮೀರ ವಿಚಾರ ಸಂಬಂಧ ನಿಲುವೇನು ಎಂದು ಕೇಳಿ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com