'ಮಹಾ' ಫಲಿತಾಂಶ: ಸಂಭ್ರಮಾಚರಣೆಗೆ 5 ಸಾವಿರ ಲಡ್ಡು ತಯಾರಿಸಿದ ಬಿಜೆಪಿ ಕಾರ್ಯಕರ್ತರು

ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಮತಎಣಿಕೆ ಕಾರ್ಯ ಆರಂಭವಾಗಿದ್ದು, ಗೆಲುವಿನ ವಿಶ್ವಾಸದಲ್ಲಿರುವ ಬಿಜೆಪಿ ಕಾರ್ಯಕರ್ತರು ಈಗಾಗಲೇ ಸಂಭ್ರಮಾಚರಣೆಗಾಗಿ ಬರೊಬ್ಬರಿ 5 ಸಾವಿರ ಲಡ್ಡುಗಳನ್ನು ತಯಾರಿಸಿದ್ದಾರೆ.
ಸಂಭ್ರಮಾಚರಣೆಗೆ ಸಿದ್ದವಾಗಿರುವ ಲಾಡು
ಸಂಭ್ರಮಾಚರಣೆಗೆ ಸಿದ್ದವಾಗಿರುವ ಲಾಡು

ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣಾ ಮತಎಣಿಕೆ ಕಾರ್ಯ ಆರಂಭವಾಗಿದ್ದು, ಗೆಲುವಿನ ವಿಶ್ವಾಸದಲ್ಲಿರುವ ಬಿಜೆಪಿ ಕಾರ್ಯಕರ್ತರು ಈಗಾಗಲೇ ಸಂಭ್ರಮಾಚರಣೆಗಾಗಿ ಬರೊಬ್ಬರಿ 5 ಸಾವಿರ ಲಡ್ಡುಗಳನ್ನು ತಯಾರಿಸಿದ್ದಾರೆ.

ಪ್ರಸ್ತುತ ಲಭ್ಯವಾಗಿರುವ ಇತ್ತೀಚಿನ ವರದಿಗಳ ಅನ್ವಯ ಬಿಜೆಪಿ ಮೈತ್ರಿಕೂಟ 81 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್ ಮೈತ್ರಿಕೂಟ 23 ಮತ್ತು ಇತರರು 12 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಹೀಗಾಗಿ ಈಗಾಗಲೇ ಮಹಾರಾಷ್ಟ್ರದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮದಲ್ಲಿ ತೊಡಗಿದ್ದು, ಫಲಿತಾಂಶ ಘೋಷಣೆಗೆ ಮೊದಲೇ ಗೆಲುವಿನ ಸಂಭ್ರಮದಲ್ಲಿ ತೇಲುತ್ತಿರುವ ಕಾರ್ಯಕರ್ತರು ಲಡ್ಡು ವಿತರಣೆಗೆ ತುದಿಗಾಲಲ್ಲಿ ನಿಂತಿದ್ದಾರೆ.

ಮುಂಬೈನ ವಿವಿಧ ಬಡಾವಣೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಬೃಹತ್‌ ಕಟೌಟ್‌, ಪೋಸ್ಟರ್‌ ಗಳು ರಾರಾಜಿಸುವ ಬಣ್ಣಬಣ್ಣದ ಪೆಂಡಾಲ್‌ಗಳು ಕಂಡುಬರುತ್ತಿದ್ದು, ಈ ಪೆಂಡಾಲ್‌ಗಳಲ್ಲಿ ಬೃಹತ್‌ ಟಿವಿ ಪರದೆಗಳನ್ನು ಅಳವಡಿಸಿ ಫಲಿತಾಂಶದ ನೇರ ಪ್ರಸಾರ ಮಾಡಲಾಗುತ್ತಿದೆ. 

ಅಲ್ಲದೆ ಫಲಿತಾಂಶ ಘೋಷಣೆಯ ನಂತರ ಹಂಚಲೆಂದು ಬಿಜೆಪಿ ಕಾರ್ಯಕರ್ತರು ಈಗಾಗಲೇ 5000 ಲಾಡು ಸಿದ್ಧಪಡಿಸಿದೆ.

 ಬಹುತೇಕ ಮತಗಟ್ಟೆ ಸಮೀಕ್ಷೆಗಳು ಬಿಜೆಪಿ–ಶಿವಸೇನೆ ಮೈತ್ರಿಕೂಟ ನಿಚ್ಚಳ ಬಹುಮತ ಸಾಧಿಸಲಿದೆ ಮತ್ತು ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com