ಒಂದು ವರ್ಷದಲ್ಲಿ ಏಕತಾ ಪ್ರತಿಮೆಗೆ 26 ಲಕ್ಷ ಜನರ ಭೇಟಿ: ಪ್ರಧಾನಿ ಮೋದಿ

ವಿಶ್ವದ ಅತಿ ದೊಡ್ಡ ಪ್ರತಿಮೆ ಎಂದೇ ಖ್ಯಾತಿ ಪಡೆದಿರುವ ಗುಜರಾತ್ ನ ಏಕತಾ ಪ್ರತಿಮೆಗೆ ಕಳೆದೊಂದು ವರ್ಷದಿಂದ ಸುಮಾರು 26 ಲಕ್ಷ ಮಂದಿ ಭೇಟಿ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಿಶ್ವದ ಅತಿ ದೊಡ್ಡ ಪ್ರತಿಮೆ ಎಂದೇ ಖ್ಯಾತಿ ಪಡೆದಿರುವ ಗುಜರಾತ್ ನ ಏಕತಾ ಪ್ರತಿಮೆಗೆ ಕಳೆದೊಂದು ವರ್ಷದಿಂದ ಸುಮಾರು 26 ಲಕ್ಷ ಮಂದಿ ಭೇಟಿ ನೀಡಿದ್ದಾರೆ.

ಈ ಬಗ್ಗೆ ಸ್ವತಃ ಪ್ರಧಾನಿ ಮೋದಿ ಮಾಹಿತಿ ನೀಡಿದ್ದು, ಗುಜರಾತ್ ನ ಏಕತಾ ಪ್ರತಿಮೆ ಉದ್ಘಾಟನೆಯಾಗಿ ಒಂದು ವರ್ಷ ಕಳೆದಿದೆ. ಈ ಒಂದು ವರ್ಷದಲ್ಲಿ ಈ ಬೃಹತ್ ಪ್ರತಿಮೆ ನೋಡಲು ಭೇಟಿ ನೀಡಿದ ಪ್ರವಾಸಿಗರೆಷ್ಟು ಗೊತ್ತಾ?   ಎಂಬುದರ ಬಗ್ಗೆ ಪ್ರಧಾನಿ ಮೋದಿ ಕುತೂಹಲಕಾರಿ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಇಂದು ಆಕಾಶವಾಣಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು , ಏಕತಾ ಪ್ರತಿಮೆ ದೇಶದ ಹೆಮ್ಮೆಯ ಸಂಕೇತವಾಗಿದೆ. ಅಮೆರಿಕದ ಲಿಬರ್ಟಿ ಪ್ರತಿಮೆಗಿಂತಲೂ ಎತ್ತರವಾಗಿರುವ ಈ ವಲ್ಲಭಾಯಿ ಪಟೇಲ್ ಪ್ರತಿಮೆಗೆ ಒಂದು ವರ್ಷದಲ್ಲಿ 26 ಲಕ್ಷ ಜನರು ಭೇಟಿ ನೀಡಿದ್ದಾರೆ ಎಂದು ಹೇಳಿದರು.

2018ರ ಅಕ್ಟೋಬರ್​ 31ರಂದು ಈ ಏಕತಾ ಪ್ರತಿಮೆಯನ್ನು ಜಗತ್ತಿನ ಮುಂದೆ ಅನಾವರಣಗೊಳಿಸಲಾಗಿದೆ. ಅಮೆರಿಕಾದ ಸ್ವಾತಂತ್ರ್ಯ ದೇವತೆಯ ಪ್ರತಿಮೆ(ಸ್ಟ್ಯಾಚ್ಯೂ ಆಫ್​ ಲಿಬರ್ಟಿ)ಗಿಂತ ದುಪ್ಪಟ್ಟು ಎತ್ತರವಿರುವ ಈ ಪ್ರತಿಮೆಯನ್ನು ಅನಾವರಣಗೊಳಿಸಿ, ಒಂದು ವರ್ಷ ಪೂರೈಸುವ ಮುನ್ನ 26 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ ಎಂದು ಮೋದಿ ಮಾಹಿತಿ ಕೊಟ್ಟಿದ್ದಾರೆ.

ಈ ಏಕತಾ ಪ್ರತಿಮೆ ಭಾರತ ಸೇರಿದಂತೆ ಇತರೆ ಪ್ರಜಾಪ್ರಭುತ್ವ ರಾಷ್ಟ್ರಗಳು ಹಾಗೂ ಪ್ರವಾಸೋದ್ಯಮ ಇಲಾಖೆಗೆ ಮಹತ್ವದ ಸಂಶೋಧನೆಯ ವಿಷಯವಾಗಬಹುದು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com