ರಾಮ ಮಂದಿರ ನಂತರ, ಕಾಶಿ ವಿಶ್ವನಾಥ, ಮಥುರಾ ಕೃಷ್ಣ ದೇಗುಲಗಳು ನಮ್ಮ ಗುರಿ; ಡಾ. ಸುಬ್ರಮಣಿಯನ್ ಸ್ವಾಮಿ

ಅಯೋಧ್ಯೆಯ ರಾಮ ಜನ್ಮ ಭೂಮಿ ವಿವಾದ ಪ್ರಕರಣದಲ್ಲಿ ರಾಮಮಂದಿರ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ಬರಲಿದೆ ಎಂಬ ಆಶಯವನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ ವ್ಯಕ್ತಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಅಯೋಧ್ಯೆಯ ರಾಮ ಜನ್ಮ ಭೂಮಿ ವಿವಾದ ಪ್ರಕರಣದಲ್ಲಿ ರಾಮಮಂದಿರ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ಬರಲಿದೆ ಎಂಬ ಆಶಯವನ್ನು ಬಿಜೆಪಿ ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಸುದ್ದಿ ವಾಹಿನಿಯೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅವರು, ಆಯೋಧ್ಯೆಯಲ್ಲಿ ಮಂದಿರ ನಿರ್ಮಾಣವನ್ನು ಕ್ಷಿಪ್ರವಾಗಿ ಆರಂಭಿಸಿ, ಎರಡು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಅಗತ್ಯ ಏರ್ಪಾಡು ಈಗಾಗಲೇ ನಡೆಸಲಾಗಿದೆ ಎಂದು ಹೇಳಿದರು.

ಮಂದಿರದ ಪರವಾಗಿ ನ್ಯಾಯಾಲಯದ ತೀರ್ಪು ಬಂದರೆ, ನಮ್ಮ ಮುಂದಿನ ಗುರಿ ಕಾಶಿ ವಿಶ್ವನಾಥ ದೇವಾಲಯ ಮತ್ತು ಮಥುರಾ ಶ್ರೀ ಕೃಷ್ಣ ದೇಗುಲವಾಗಿರಲಿವೆ ಎಂದು ತಿಳಿಸಿದರು. ಆಯೋಧ್ಯೆ ರಾಮಜನ್ಮ ಭೂಮಿ ವಿವಾದದಲ್ಲಿ ಕೋರ್ಟ್ ತೀರ್ಪು ಅನುಕೂಲಕರವಾಗಿ ಬರದಿದ್ದರೆ, ಸಂವಿಧಾನ 300 ಎ ವಿಧಿ ಪ್ರಕಾರ ವಿವಾದಿತ ಭೂಮಿಯನ್ನು ರಾಷ್ಟ್ರೀಕರಣಗೊಳಿಸಬಹುದು ಎಂದು ಹೇಳಿದರು.

ಮೊಗಲರ ಆಡಳಿತದಲ್ಲಿ 40 ಸಾವಿರ ದೇಗುಲಗಳನ್ನು ದ್ವಂಸಗೊಳಿಸಲಾಗಿದೆ. ಕಾಶಿ ವಿಶ್ವನಾಥನ ದೇವಾಲಯಕ್ಕಾಗಿ ನಡೆಯುವ ಹೋರಾಟ ಅತ್ಯಂತ ಸುಲಭವಾಗಿರಲಿದೆ ಎಂದು ಡಾ. ಸ್ವಾಮಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com