ಯುದ್ಧೋನ್ಮಾದದಲ್ಲಿರುವ ಪಾಕ್‌ನಿಂದ ಗಡಿಯಲ್ಲಿ ಸೇನಾ ಬಂಕರ್ ನಿರ್ಮಾಣ!

ಆರ್ಟಿಕಲ್ 370 ರದ್ದಿನ ಬಳಿಕ ಯುದ್ಧೋನ್ಮಾದದಲ್ಲಿರುವ ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಸೇನಾ ಬಂಕರ್ ನಿರ್ಮಾಣ ಮಾಡುತ್ತಿದೆ ಎಂಬ ಮಾಹಿತಿ ಭಾರತೀಯ ಸೇನೆಯ ಮೂಲಗಳಿಂದ ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಆರ್ಟಿಕಲ್ 370 ರದ್ದಿನ ಬಳಿಕ ಯುದ್ಧೋನ್ಮಾದದಲ್ಲಿರುವ ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಸೇನಾ ಬಂಕರ್ ನಿರ್ಮಾಣ ಮಾಡುತ್ತಿದೆ ಎಂಬ ಮಾಹಿತಿ ಭಾರತೀಯ ಸೇನೆಯ ಮೂಲಗಳಿಂದ ತಿಳಿದುಬಂದಿದೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲ್ತೋರೊ ಸೆಕ್ಟರ್ ಗೆ ಸಮೀಪ ಸಕಾರ್ದು ಪ್ರದೇಶದಲ್ಲಿ ಪಾಕಿಸ್ತಾನ ಸೇನಾ ಬಂಕರ್ ನಿರ್ಮಾಣ ಮಾಡುತ್ತಿದೆ. ಕೆಲವು ಬಂಕರ್ ಗಳು 10 ರಿಂದ 12 ಅಡಿ ಆಳ ಅಗಲ ಹೊಂದಿದೆ ಎಂದು ತಿಳಿದುಬಂದಿದೆ.

ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿರುವ ಭಾರತ ಪಿಒಕೆಯನ್ನು ವಶಪಡಿಸಿಕೊಳ್ಳಬಹುದೇನೊ ಎಂಬ ಆತಂಕದಲ್ಲಿದೆ. ಈ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ಸೇನೆ ಜಮಾವಣೆ ಹೆಚ್ಚಿಸುವುದು ಅಥವಾ ಶಸ್ತ್ರಾಸ್ತ್ರ ಸಂಗ್ರಹ ಮಾಡುವುದು ಪಾಕ್ ಬಂಕರ್ ನಿರ್ಮಾಣದ ಹಿಂದಿನ ಉದ್ದೇಶವಿರಬಹುದು ಎಂದು ಭಾರತೀಯ ಸೇನೆ ಅನುಮಾನ ವ್ಯಕ್ತಪಡಿಸಿದೆ. 

ಇತ್ತೀಚೆಗಷ್ಟೇ ಪಾಕಿಸ್ತಾನದ ರೇಲ್ವೆ ಸಚಿವ ಶೇಖ್ ಅಹ್ಮದ್ ರಶೀದ್ ಎರಡು ಅಣ್ವಸ್ತ್ರ ಬಲ ಹೊಂದಿರುವ ದೇಶಗಳ ನಡುವೆ ಅಕ್ಟೋಬರ್ ಇಲ್ಲವೇ ನವೆಂಬರ್ ನಲ್ಲಿ ಯುದ್ಧ ನಡೆಯಬಹುದು ಎಂದು ಹೇಳಿದ್ದರು. ಇದೇ ಅಲ್ಲದೆ ಪಾಕಿಸ್ತಾನ ಇಮ್ರಾನ್ ಖಾನ್ ಸಹ ಹಲವು ದಿನಗಳಿಂದ ಯುದ್ಧದ ಮಾತುಗಳನ್ನೇ ಆಡುತ್ತಾ ಬಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com