ನೂತನ ಸಂಚಾರ ನಿಯಮ ಎಫೆಕ್ಟ್: ಸ್ಕೂಟಿ ಬೆಲೆ 15 ಸಾವಿರ, ದಂಡ 23 ಸಾವಿರ

ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿರುವ ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ಕಾನೂನು ಅಕ್ಷರಶಃ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಶಾಕ್ ನೀಡಿದ್ದು, ವಾಹನದ ಮೌಲ್ಯಕ್ಕಿಂತಲೂ ದಂಡದ ಪ್ರಮಾಣವೇ ಹೆಚ್ಚಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿರುವ ಮೋಟಾರು ವಾಹನ ಕಾಯ್ದೆಯ ತಿದ್ದುಪಡಿ ಕಾನೂನು ಅಕ್ಷರಶಃ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಶಾಕ್ ನೀಡಿದ್ದು, ವಾಹನದ ಮೌಲ್ಯಕ್ಕಿಂತಲೂ ದಂಡದ ಪ್ರಮಾಣವೇ ಹೆಚ್ಚಾಗಿದೆ.

ಹೌದು.. ಮೋಟಾರು ವಾಹನ ಕಾಯ್ದೆಗೆ ತಂದಿರುವ ತಿದ್ದುಪಡಿ ಸೆಪ್ಟೆಂಬರ್‌ 1ರಿಂದ ಜಾರಿಯಾದ ಬಳಿಕ ದಾಖಲೆಗಳಿಲ್ಲದೆಯೇ ದ್ವಿಚಕ್ರ ವಾಹನ ಚಲಾಯಿಸಿದ್ದಕ್ಕೆ ದೆಹಲಿಯ ವ್ಯಕ್ತಿಯೊಬ್ಬರಿಗೆ ಬರೊಬ್ಬರಿ 23 ಸಾವಿರ ರೂ ದಂಡ ವಿಧಿಸಲಾಗಿದೆ. ಮೂಲಗಳ ಪ್ರಕಾರ ಸ್ಕೂಟಿ ಚಾಲಕ ಹೆಲ್ಮೆಟ್‌ ಇಲ್ಲದೆಯೇ ವಾಹನ ಚಲಾಯಿಸಿದ್ದು ಹಾಗೂ ಚಾಲನಾ ಪರವಾನಗಿ, ವಿಮೆ, ನೋಂದಣಿ ಪ್ರಮಾಣ ಪತ್ರ ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ಹೊಂದಿಲ್ಲದ ಕಾರಣಕ್ಕೆ ದಿನೇಶ್‌ ಮದನ್‌ ಎಂಬುವವರಿಗೆ ಗುರುಗ್ರಾಮ ಸಂಚಾರ ಪೊಲೀಸರು ಭಾರಿ ಮೊತ್ತದ ದಂಡ ವಿಧಿಸಿದ್ದಾರೆ.

ಆದರೆ ದಿನೇಶ್ ಮದನ್ ಚಲಾಯಿಸುತ್ತಿದ್ದ ದ್ವಿಚಕ್ರವಾಹನ (ಸ್ಕೂಟಿ)ದ ಮೌಲ್ಯ ಕೇವಲ 15 ಸಾವಿರ ರೂ ಎಂದು ತಿಳಿದುಬಂದಿದೆ. ಈ ಕುರಿತಂತೆ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಚಾಲನಾ ಪರವಾನಗಿ ಮತ್ತು ವಾಹನ ನೊಂದಣಿ ಪ್ರಮಾಣಪತ್ರ ಇಲ್ಲದೆ ವಾಹನ ಚಲಾಯಿಸಿದ್ದಕ್ಕೆ ತಲಾ ರೂ 5ಸಾವಿರ, ಥರ್ಡ್‌ ಪಾರ್ಟಿ ವಿಮೆ ಇಲ್ಲದಿರುವುದಕ್ಕೆ ರೂ 2ಸಾವಿರ, ವಾಯು ಮಾಲಿನ್ಯಕ್ಕಾಗಿ ರೂ 10 ಸಾವಿರ ಮತ್ತು ಹೆಲ್ಮೆಟ್‌ ಧರಿಸದ ಕಾರಣಕ್ಕೆ ರೂ 1 ಸಾವಿರ ದಂಡ ವಿಧಿಸಲಾಗಿದೆ ಎಂದು ಹೇಳಿದ್ದಾರೆ. ಅಂತೆಯೇ ಚಾಲಕನಿಗೆ ನೀಡಲಾಗಿರುವ ಚಲನ್ ನಲ್ಲೂ ಇದನ್ನು ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com