ಮೋಟಾರು ವಾಹನ ತಿದ್ದುಪಡಿ ಕಾಯ್ದೆ: ದಂಡ ಕಡಿಮೆಗೊಳಿಸಿದ ಗುಜರಾತ್ ಸರ್ಕಾರ

ಇತ್ತೀಚಿಗೆ ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ಹೊಸ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಡಿ ವಿಧಿಸಲಾಗುವ ದಂಡದ ಮೊತ್ತವನ್ನು ಗುಜರಾತ್ ಸರ್ಕಾರ ಕಡಿಮೆಗೊಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗಾಂಧಿನಗರ:ಇತ್ತೀಚಿಗೆ ಸಂಸತ್ತಿನಲ್ಲಿ ಅಂಗೀಕಾರಗೊಂಡಿರುವ ಹೊಸ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಡಿ ವಿಧಿಸಲಾಗುವ ದಂಡದ ಮೊತ್ತವನ್ನು ಗುಜರಾತ್ ಸರ್ಕಾರ ಕಡಿಮೆಗೊಳಿಸಿದೆ.

ಜುಲೈ ತಿಂಗಳಲ್ಲಿ ಸಂಸತ್ತಿನಲ್ಲಿ ಅಂಗೀಕಾರ ಪಡೆದುಕೊಂಡಿದ್ದ ಮೋಟಾರು ವಾಹನ ( ತಿದ್ದುಪಡಿ) ಮಸೂದೆ 2019 ಸೆಪ್ಟೆಂಬರ್ 1 ರಿಂದ ಅಧಿಕೃತವಾಗಿ ಜಾರಿಗೆ ಬಂದಿದ್ದು, ಹೆಚ್ಚಿನ ಮೊತ್ತದ ದಂಡ ವಿಧಿಸಲಾಗುತ್ತಿದೆ. ಆದಾಗ್ಯೂ, ಜನರ ಮೇಲೆ ವಿಧಿಸಲಾಗುತ್ತಿರುವ ದಂಡದ ಮೊತ್ತವನ್ನು ಕಡಿಮೆಗೊಳಿಸಬೇಕೆಂದು ಕೆಲ ರಾಜ್ಯಗಳು ಹೇಳುತ್ತಿವೆ.

ವಿಸ್ತೃತವಾಗಿ  ಯೋಚಿಸಿದ ನಂತರ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯಡಿ ವಿಧಿಸಲಾಗುತ್ತಿರುವ ದಂಡದ ಮೊತ್ತವನ್ನು ಕಡಿಮೆಗೊಳಿಸಲು ನಿರ್ಧರಿಸಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಪ್ರಕಟಿಸಿದ್ದಾರೆ.

ನೂತನ ಕಾಯ್ದೆ ಪ್ರಕಾರ ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿಗೆ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಆದರೆ, ಗುಜರಾತ್ ಸರ್ಕಾರ ಈ ದಂಡದ ಮೊತ್ತವನ್ನು ಇಂದು 500 ರೂಪಾಯಿಗೆ ಕಡಿಮೆಗೊಳಿಸಿದೆ. ಸೀಟ್ ಬೆಲ್ಟ್ ಹಾಕದೆ ಕಾರು ಚಲಾಯಿಸಿದರೆ ದಂಡದ ಮೊತ್ತವನ್ನು ಕೂಡಾ 500 ರೂ. ಗೆ ಇಳಿಕೆ ಮಾಡಲಾಗಿದೆ. 

 ಪರವಾನಗಿ ಇಲ್ಲದೆ ವಾಹನ ಚಲಾಯಿಸಿದರೆ ವಿಧಿಸಲಾಗುವ  5 ಸಾವಿರ ರೂ. ದಂಡದ ಬದಲಿಗೆ 
ನಾಲ್ಕು ಚಕ್ರದ ವಾಹನ ಚಲಾಯಿಸಿದರೆ 3 ಸಾವಿರ ಹಾಗೂ ದ್ವಿ ಚಕ್ರ ವಾಹನಗಳಿಗೆ 2 ಸಾವಿರ ರೂಗೆ ಕಡಿಮೆ ಮಾಡಲಾಗಿದೆ. 

ದಂಡವನ್ನು ಕಡಿಮೆ ಮಾಡುವ ಮೂಲಕ ಗುಜರಾತ್ ಸರ್ಕಾರ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಮೃದುತ್ವವನ್ನು ತೋರಿಸುತ್ತಿಲ್ಲ ಎಂದು ಹೇಳಿರುವ  ರೂಪಾನಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com