ಎಮ್ಮೆ ನಂತರ ಅಜಂ ಖಾನ್ ವಿರುದ್ಧ ಮೇಕೆ ಕದ್ದ ಆರೋಪ, ದೂರು ದಾಖಲು

ಮ್ಮೆ ಕದ್ದ ಆರೋಪದ ನಂತರ  ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ವಿರುದ್ಧ ಮೇಕೆ ಕಳ್ಳತನ ದೂರು ದಾಖಲಾಗಿದೆ.
ಅಜಂ ಖಾನ್
ಅಜಂ ಖಾನ್

ರಾಮಪುರ್: ಎಮ್ಮೆ ಕದ್ದ ಆರೋಪದ ನಂತರ  ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ವಿರುದ್ಧ ಮೇಕೆ ಕಳ್ಳತನ ದೂರು ದಾಖಲಾಗಿದೆ.

2016 ರ ಅಕ್ಟೋಬರ್ 15 ರಲ್ಲಿ ನಸೀಮಾ ಕಾಟೂನ್ ಎಂಬವರು  ದೂರು ದಾಖಲಿಸಿದ್ದರು, ದೂರಿನ ಅನ್ವಯ ಅಜಂ ಖಾನ್ ವಿರುದ್ಧ ಎಫ್ ಐ ಆರ್ ದಾಖಲಿಸಲಾಗಿದೆ. ಅಜಂ ಖಾನ್ ಸೇರಿದಂತೆ ಸುಮಾರು 25 ಮಂದಿ ಅಕ್ಟೋಬರ್ 15 ರಂದು  ನಮ್ಮ ಮನೆಗೆ ನುಗ್ಗಿ  ಮನೆಯನ್ನು ಧ್ವಂಸಗೊಳಿಸಿ ಮನೆಯಲ್ಲಿದ್ದ ಚಿನ್ನಾಭರಣ, ಮೂರು ಎಮ್ಮೆ, ಹಸು ಹಾಗೂ ಮೇಕೆಗಳನ್ನು ಕದ್ದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಾನು ವಕ್ಫ್ ಮಂಡಳಿ ನೀಡಿದ್ದ  ಜಾಗದಲ್ಲಿ ವಾಸಿಸುತ್ತಿದ್ದೆ, ಆ ಜಾಗವನ್ನು ಖಾಲಿ ಮಾಡುವಂತೆ  ತಮ್ಮ ಒತ್ತಾಯಿಸುತ್ತಿದ್ದರು.

ಆದರೆ ನಾವು ಖಾಲಿ ಮಾಡದ ಹಿನ್ನೆಲೆಯಲ್ಲಿ  ಮನೆಯನ್ನು ಧ್ವಂಸಗೊಳಿಸಿ ಮೇಕೆಗಳನ್ನು ಕದ್ದು ಒಯ್ದಿದ್ದಾರೆ ಎಂದು ದೂರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com