ದೆಹಲಿ: ಓವರ್‌ಲೋಡ್ ಮಾಡಿದ್ದಕ್ಕಾಗಿ ಟ್ರಕ್ ಮಾಲೀಕನಿಗೆ ಬರೋಬ್ಬರಿ 2 ಲಕ್ಷ ರೂ. ದಂಡ!
ದೆಹಲಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ಓವರ್‌ಲೋಡ್ ಮಾಡಿದ್ದಕ್ಕಾಗಿ ಟ್ರಕ್ ಮಾಲೀಕನಿಗೆ ಬರೋಬ್ಬರಿ 2 ಲಕ್ಷ ರೂ.ಗಿಂತ ಹೆಚ್ಚಿನ ದಂಡ ವಿಧಿಸಲಾಗಿದೆ.
Published: 13th September 2019 12:57 AM | Last Updated: 13th September 2019 12:57 AM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ದೆಹಲಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿ ಓವರ್‌ಲೋಡ್ ಮಾಡಿದ್ದಕ್ಕಾಗಿ ಟ್ರಕ್ ಮಾಲೀಕನಿಗೆ ಬರೋಬ್ಬರಿ 2 ಲಕ್ಷ ರೂ.ಗಿಂತ ಹೆಚ್ಚಿನ ದಂಡ ವಿಧಿಸಲಾಗಿದೆ.
ಮುಕರ್ಬಾ ಚೌಕ್ ಬಳಿ, ಓವರ್‌ಲೋಡ್‌ಗಾಗಿ ಟ್ರಕ್ ಮಾಲೀಕನಿಗೆ ದೆಹಲಿ ಸಂಚಾರಿ ಪೊಲೀಸರು 2,00,500 ರೂ. ದಂಡ ವಿಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭಾರೀ ದಂಡಕ್ಕೆ ಕಾರಣನಾದ ಟ್ರಕ್ ಚಾಲಕನನ್ನು ರಾಮ್ ಕ್ರಿಷನ್ ಎಂದು ಗುರುತಿಸಲಾಗಿದೆ. ಟ್ರಕ್ ಮಾಲೀಕ ಈ ದಂಡವನ್ನು ನ್ಯಾಯಾಲಯದಲ್ಲಿ ಕಟ್ಟಬೇಕಾಗಿದೆ.
ಯಾವುದಕ್ಕೆ ಎಷ್ಟು ದಂಡ ಗೊತ್ತಾ?
ಓವರ್ ಲೋಡಿಂಗ್ ಕಾರಣಕ್ಕೆ – 20,000 + 36,000 (ಪ್ರತೀ ಹೆಚ್ಚುವರಿ ಓವರ್ ಲೋಡ್ ಟನ್ ಗೆ 2000 ದಂತೆ) ಈ ಟ್ರಕ್ ನಲ್ಲಿ 18 ಟನ್ ಹೊರೆ ಹೆಚ್ಚುವರಿಯಾಗಿತ್ತು.
ಡ್ರೈವಿಂಗ್ ಲೈಸನ್ಸ್ ಇರಿಸಿಕೊಂಡಿರದೇ ಇದ್ದುದಕ್ಕೆ – 5000 ರೂಪಾಯಿಗಳು
ವಾಹನದ ನೋಂದಣಿ ದಾಖಲಾತಿ ಇಲ್ಲದೇ ಇದ್ದುದಕ್ಕೆ – 10,000 ರೂಪಾಯಿಗಳು
ಫಿಟ್ನೆಸ್ ಪ್ರಮಾಣಪತ್ರ ಇಲ್ಲದಿದ್ದುಕ್ಕೆ – 10,000 ರೂಪಾಯಿಗಳು
ಪರವಾನಿಗೆ ಪತ್ರ ಉಲ್ಲಂಘನೆಗೆ – 10,000 ರೂಪಾಯಿಗಳು
ವಿಮೆ ಇಲ್ಲದೇ ಇದ್ದುದಕ್ಕೆ – 4000 ರೂಪಾಯಿಗಳು
ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದನ್ವಯ ಮಾಲಿನ್ಯಕ್ಕಾಗಿ – 10,000 ರೂಪಾಯಿಗಳು
ಟ್ರಕ್ ನಲ್ಲಿ ನಿರ್ಮಾಣ ಸಾಮಾಗ್ರಿಗಳನ್ನು ಮುಚ್ಚದೇ ಇದ್ದುದಕ್ಕೆ – 20,000 ರೂಪಾಯಿಗಳು
ಸೀಟ್ ಬೆಲ್ಟ್ ಧರಿಸದೇ ಇದ್ದುದಕ್ಕೆ – 1000 ರೂಪಾಯಿಗಳು
ಮೋಟಾರು ವಾಹನಗಳ ತಿದ್ದುಪಡಿ ಕಾಯ್ದೆ 2019ರ ಪ್ರಕಾರ, ಚಾಲನಾ ದೋಷಗಳಿಗೆ ದಂಡವನ್ನು ಹೆಚ್ಚಿಸಲಾಗಿದೆ ಮತ್ತು ಸೆಪ್ಟೆಂಬರ್ 1 ರಿಂದ ರಾಷ್ಟ್ರ ರಾಜಧಾನಿ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಜಾರಿಗೆ ತರಲಾಗಿದೆ.