ಮತ್ತೊಬ್ಬರ ವಿರುದ್ಧ ಮೊಕದ್ದಮೆ ಹೂಡಲು ಪಾಲುದಾರನಿಗೆ ಎಲ್ಲ ಹಕ್ಕಿದೆ: ಮದ್ರಾಸ್ ಹೈಕೋರ್ಟ್ 

ಸಹಭಾಗಿತ್ವದ ಸಂಸ್ಥೆಯಲ್ಲಿ ಪಾಲುದಾರ ಮತ್ತೊಬ್ಬ ಪಾಲುದಾರನ ಮೇಲೆ ಮೊಕದ್ದಮೆ ಹೂಡಲು ಅರ್ಹರು ಎಂದು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.  
ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್

ಚೆನ್ನೈ: ಸಹಭಾಗಿತ್ವದ ಸಂಸ್ಥೆಯಲ್ಲಿ ಪಾಲುದಾರ ಮತ್ತೊಬ್ಬ ಪಾಲುದಾರನ ಮೇಲೆ ಮೊಕದ್ದಮೆ ಹೂಡಲು ಅರ್ಹರು ಎಂದು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ. 


ಕಾವೇರಿ ಆಸ್ಪತ್ರೆಯ ಹೂಡಿಕೆಯಲ್ಲಿ ಪಾಲುದಾರನಾದ ಬಿ ಆರ್ ಶ್ರೀನಿವಾಸ ರಾವ್, ವಿಲ್ಲಿವಕ್ಕಮ್ ನಿಂದ ಆಸ್ಪತ್ರೆಯನ್ನು ಬೇರೆಡೆಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲು ಕೋರ್ಟ್ ನಲ್ಲಿ ದಾವೆ ಹೂಡಿದ್ದರು. 


ಅಡ್ವೊಕೇಟ್ ವಿ ಸುರೇಶ್, ರಾವ್ ಅವರ ಪಾಲುದಾರ ಅವರ ಹತ್ತಿರದ ಸಂಬಂಧಿಯಾಗಿದ್ದಾರೆ. ಕುಟುಂಬದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಬಂದ ನಂತರ ವಿಲ್ಲಿವಕ್ಕಮ್ ನಲ್ಲಿರುವ ಆಸ್ಪತ್ರೆಯನ್ನು ಅಲ್ಲಿಂದ ತೆರವುಗೊಳಿಸಲು ಆದೇಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಕೆಳ ಹಂತದ ನ್ಯಾಯಾಲಯ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಅದಕ್ಕೆ ಮದ್ರಾಸ್ ಹೈಕೋರ್ಟ್ ನ ಮೊರೆ ಹೋಗಿದ್ದರು.


ಸಹಭಾಗಿತ್ವ ಕಾಯ್ದೆ ಸೆಕ್ಷನ್ 14ರಡಿಯಲ್ಲಿ ಸಂಸ್ಥೆಯ ಆಸ್ತಿಯೆಂದರೆ ಆಸ್ತಿಗೆ ಸಂಬಂಧಿಸಿದ ಎಲ್ಲಾ ರೀತಿಯ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ಒಳಗೊಂಡಿರುತ್ತದೆ. ಬೇರೆ ರೀತಿಯ ವ್ಯತಿರಿಕ್ತ ಉದ್ದೇಶವು ಕಾಣಿಸದಿದ್ದಲ್ಲಿ, ಆಸ್ತಿ, ಆಸ್ತಿಗೆ ಸಂಬಂಧಿಸಿದ ಹಕ್ಕು ಮತ್ತು ಹಿತಾಸಕ್ತಿಗಳನ್ನು ಆಸ್ತಿಗಳಲ್ಲಿ ಪಡೆದಿದ್ದು ಮತ್ತು ಸಂಸ್ಥೆಗೆ ಸೇರಿದ ಬಂಡವಾಳ ಹಣವನ್ನು ಹೂಡಿಕೆ ಮಾಡಿದ ಪ್ರತಿಯೊಬ್ಬರೂ ಪಡೆಯಲು ಹಕ್ಕು ಹೊಂದಿರುತ್ತಾರೆ ಎಂದು ನ್ಯಾಯಮೂರ್ತಿ ಸರವಣ ತೀರ್ಪು ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com