ಕೊಚ್ಚಿ: ಇಂಗ್ಲಿಷ್ ತರಗತಿಯಲ್ಲಿ ಮಲಯಾಳಂನಲ್ಲಿ ಮಾತನಾಡಿದ್ದಕ್ಕೆ ಬಾಲಕಿಗೆ ಥಳಿಸಿದ ಶಿಕ್ಷಕಿ, ಸೇವೆಯಿಂದ ವಜಾ 

ಮಲಯಾಳಂ ಭಾಷೆಯನ್ನು ಹೆಚ್ಚು ಪ್ರಚುರಪಡಿಸಲು ಒಂದೆಡೆ ಕೇರಳ ಸರ್ಕಾರ ಯತ್ನಿಸುತ್ತಿದ್ದರೆ, ಮತ್ತೊಂದೆಡೆ ಕೊಚ್ಚಿಯ ಖಾಸಗಿ ಶಾಲೆಯಲ್ಲಿ ಮಲಯಾಳಂನಲ್ಲಿ ಮಾತನಾಡಿದ ವಿದ್ಯಾರ್ಥಿನಿಗೆ ಶಿಕ್ಷಕಿ ಚೆನ್ನಾಗಿ ಥಳಿಸಿದ ಘಟನೆ ನಡೆದಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಚ್ಚಿ: ಮಲಯಾಳಂ ಭಾಷೆಯನ್ನು ಹೆಚ್ಚು ಪ್ರಚುರಪಡಿಸಲು ಒಂದೆಡೆ ಕೇರಳ ಸರ್ಕಾರ ಯತ್ನಿಸುತ್ತಿದ್ದರೆ, ಮತ್ತೊಂದೆಡೆ ಕೊಚ್ಚಿಯ ಖಾಸಗಿ ಶಾಲೆಯಲ್ಲಿ ಮಲಯಾಳಂನಲ್ಲಿ ಮಾತನಾಡಿದ ವಿದ್ಯಾರ್ಥಿನಿಗೆ ಶಿಕ್ಷಕಿ ಚೆನ್ನಾಗಿ ಥಳಿಸಿದ ಘಟನೆ ನಡೆದಿದೆ.


ಎರ್ನಾಕುಲಂ ಜಿಲ್ಲೆಯ ಅಸ್ಸಿಸಿ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಗೆ ಇಂಗ್ಲಿಷ್ ಶಿಕ್ಷಕಿ ಮಲಯಾಳಂನಲ್ಲಿ ಮಾತನಾಡಿದ್ದಕ್ಕೆ ಹೊಡೆದಿದ್ದಾರೆ. ಈ ಬಗ್ಗೆ ಶಾಲಾ ಆಡಳಿತ ಮಂಡಳಿಯನ್ನು ಕೇಳಿದಾಗ ಶಿಕ್ಷಕಿ ಶಾಲೆಯ ಅಧಿಕೃತ ಸಿಬ್ಬಂದಿಯಲ್ಲ ಎಂದಿದ್ದಾರೆ.


ಪಾಠ ಹೊರತುಪಡಿಸಿ ಪಠ್ಯೇತರ ಮೂಲಕ ಮಕ್ಕಳು ಖುಷಿಯಾಗಿ ಇಂಗ್ಲಿಷ್ ಮಾತನಾಡಲು ಕಲಿಯಲಿ ಎಂದು ನಾವು ಖಾಸಗಿ ಏಜೆನ್ಸಿ ಮೂಲಕ ಸಂವಹನ ಇಂಗ್ಲಿಷ್ ಗೆ ಹೊರಗಿನಿಂದ ಶಿಕ್ಷಕರನ್ನು ನೇಮಿಸಿಕೊಳ್ಳುತ್ತೇವೆ. ಶಿಕ್ಷಕಿ ಆ ಏಜೆನ್ಸಿಗೆ ಸಂಬಂಧಪಟ್ಟವರಾಗಿದ್ದು, ಅವರು ವಿದ್ಯಾರ್ಥಿನಿಗೆ ಇಂಗ್ಲಿಷ್ ಮಾತನಾಡದ್ದಕ್ಕೆ ಮತ್ತು ಕೊಟ್ಟ ಕೆಲಸವನ್ನು ಮಾಡಿಕೊಂಡು ಬಾರದಿದ್ದಕ್ಕೆ ಚಿವುಟಿದ್ದರು ಎಂದು ಶಾಲೆಯ ಸಿಬ್ಬಂದಿ ಹೇಳಿದ್ದಾರೆ.


ಬಾಲಕಿಯ ಪೋಷಕರು ನೀಡಿದ ದೂರಿನ ಮೇರೆಗೆ ಶಾಲಾ ಆಡಳಿತ ಮಂಡಳಿ ಇಂಗ್ಲಿಷ್ ಶಿಕ್ಷಕಿಯನ್ನು ಸೇವೆಯಿಂದ ವಜಾಗೊಳಿಸಿದೆ. ಕಳೆದ ಗುರುವಾರವೇ ನಾವು ಶಿಕ್ಷಕಿಯನ್ನು ಸೇವೆಯಿಂದ ತೆಗೆದುಹಾಕಿದ್ದು ಏಜೆನ್ಸಿ ಜೊತೆಗಿನ ಒಪ್ಪಂದವನ್ನು ರದ್ದುಪಡಿಸಲು ಮಾತುಕತೆ ನಡೆಯುತ್ತಿದೆ ಎಂದು ಅಸ್ಸಿಸಿ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ವ್ಯವಸ್ಥಾಪಕ ಆಂಟೊನಿ ತಿಳಿಸಿದ್ದಾರೆ.


ಬಾಲಕಿಯ ಪೋಷಕರು ಮಕ್ಕಳ ಸಹಾಯವಾಣಿ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿಗೆ ದೂರು ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com