ಕಾಶ್ಮೀರದ ಪ್ರಗತಿ ಒಪ್ಪಿಕೊಳ್ಳಲು ಇಮ್ರಾನ್‌ಗೆ ಸಾಧ್ಯವಾಗುತ್ತಿಲ್ಲ: ಭಾರತೀಯ ರಾಯಭಾರಿ

ಜಮ್ಮು ಮತ್ತು ಕಾಶ್ಮೀರ ಈಗ ಪ್ರಗತಿ ಮತ್ತು ಸಮೃದ್ಧಿಯ ಹಾದಿಯಲ್ಲಿದೆ ಎಂದು ಒಪ್ಪಿಕೊಳ್ಳುವುದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಕಷ್ಟಕರವಾಗಿದೆ ಎಂದು ಅಮೆರಿಕದ ಭಾರತೀಯ ರಾಯಭಾರಿ ಹರ್ಷವರ್ಧನ್ ಶ್ರೀಂಗ್ಲಾ ಹೇಳಿದ್ದಾರೆ.
ಹರ್ಷವರ್ಧನ್ ಶ್ರೀಂಗ್ಲಾ
ಹರ್ಷವರ್ಧನ್ ಶ್ರೀಂಗ್ಲಾ

ವಾಷಿಂಗ್ಟನ್: ಜಮ್ಮು ಮತ್ತು ಕಾಶ್ಮೀರ ಈಗ ಪ್ರಗತಿ ಮತ್ತು ಸಮೃದ್ಧಿಯ ಹಾದಿಯಲ್ಲಿದೆ ಎಂದು ಒಪ್ಪಿಕೊಳ್ಳುವುದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಕಷ್ಟಕರವಾಗಿದೆ ಎಂದು ಅಮೆರಿಕದ ಭಾರತೀಯ ರಾಯಭಾರಿ ಹರ್ಷವರ್ಧನ್ ಶ್ರೀಂಗ್ಲಾ ಹೇಳಿದ್ದಾರೆ.

ಆಗಸ್ಟ್ 5 ರಿಂದ ಜಮ್ಮು ಮತ್ತು 370 ನೇ ವಿದೇಯಕ ರದ್ದುಗೊಳಿಸಿದ ಕುರಿತು ನ್ಯೂಯಾರ್ಕ್‌ ಟೈಮ್ಸ್‌ ಪತ್ರಿಕೆಗೆ ಲೇಖನ ಬರೆದಿರುವ ಅವರು, "ಹೆಚ್ಚು ಶ್ರೀಮಂತ ಕಾಶ್ಮೀರವನ್ನು" ನಿರ್ಮಿಸಲು ಭಾರತ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹೇಳಿದರು.

"ಕಾಶ್ಮೀರ ಪ್ರದೇಶವು ಈಗ ಪ್ರಗತಿ ಮತ್ತು ಸಮೃದ್ಧಿಯ ಹಾದಿಯಲ್ಲಿದೆ ಎಂದು ಪಾಕಿಸ್ತಾನ ಪ್ರಧಾನಿ ಖಾನ್ಗೆ ಒಪ್ಪಿಕೊಳ್ಳುವುದು ಕಷ್ಟಕರವಾಗಿದೆ. ಅಲ್ಲಿನ ಅಭಿವೃದ್ಧಿಗೆ ಅಡ್ಡಿಯಾಗಿರುವ ಕಾನೂನುಬಾಹಿರ ಮತ್ತು ತಾತ್ಕಾಲಿಕ ಕಾನೂನಿನ ನಿಯಮವನ್ನು ಭಾರತ ಸರ್ಕಾರ ರದ್ದುಗೊಳಿಸಿದೆ" ಎಂದು ರಾಯಭಾರಿ ಶ್ರೀಂಗ್ಲಾ ಅಭಿಪ್ರಾಯಪಟ್ಟಿದ್ದಾರೆ.

"ಪ್ರಧಾನ ಮಂತ್ರಿ ಖಾನ್ ಅವರ ಆಳ್ವಿಕೆಯಲ್ಲಿ ಪಾಕಿಸ್ತಾನದ ಜನರು ಆರ್ಥಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ, ಹಣದುಬ್ಬರವು ಐದು ವರ್ಷಗಳ ಗರಿಷ್ಠ ಮಟ್ಟದಲ್ಲಿದೆ. ರಾಷ್ಟ್ರೀಯ ಸಾಲವು ಒಟ್ಟು ದೇಶೀಯ ಉತ್ಪನ್ನವನ್ನು ಮೀರಿದೆ ಮತ್ತು 22ನೇ ಬಾರಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ತುರ್ತು ನೆರವು ಪಡೆದಿದೆ".ಎಂದಿದ್ದಾರೆ.

"ಖಾನ್, ತಮ್ಮ ದೇಶದ ಆರ್ಥಿಕತೆಯನ್ನು ಸರಿಪಡಿಸುವ ಎಲ್ಲ ಹಕ್ಕನ್ನು ಹೊಂದಿದ್ದಾರೆ, ಆದರೆ ನೆರೆಯ ದೇಶದ ಪ್ರಾಂತ್ಯದ ಮೇಲೆ ಇದೇ ರೀತಿಯ ಹಾನಿಯನ್ನುಂಟುಮಾಡುವುದನ್ನು ಅಂತಾರಾಷ್ಟ್ರೀಯ ಸಮುದಾಯ ಸಹಿಸುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

ಸಂವಿಧಾನದ 370ನೇ ವಿಧಿ, ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರಗಳು ಮತ್ತು ಸಂವಹನ ವಿಷಯಗಳ ಹೊರತಾಗಿ ಜಮ್ಮು ಮತ್ತು ಕಾಶ್ಮೀರದ ವ್ಯವಹಾರಗಳಲ್ಲಿ ಭಾರತ ಸರ್ಕಾರದ ಪ್ರವೇಶಿಸುವಿಕೆಯನ್ನು ತಡೆಯುತ್ತಿತ್ತು. ಇದು ಪ್ರಾಂತೀಯ ಹೋರಾಟಗಳಿಗೆ ಕಾರಣವಾಯಿತು. ಭಾರತದ ಉಳಿದ ಭಾಗವು ಬಲವಾದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಹೊಂದಿದ್ದರೆ, ಆರ್ಥಿಕ ಬೆಳವಣಿಗೆ, ಉದ್ಯೋಗ, ಭ್ರಷ್ಟಾಚಾರದ ವಿರುದ್ಧ ಹೋರಾಡುವುದು, ಲಿಂಗ ಸಮಾನತೆ, ಸಾಕ್ಷರತೆ ಮತ್ತು ಇತರ ಅನೇಕ ವಿಷಯದಲ್ಲಿ ಜಮ್ಮು ಮತ್ತು ಕಾಶ್ಮೀರ ಹಿಂದುಳಿದಿದೆ ಎಂದು ಶ್ರೀಂಗ್ಲಾ ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com