ನವರಾತ್ರಿ ಆರಂಭ: ದೇಶದ ಜನತೆಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ

ದೇಶದಾದ್ಯಂತ ನವರಾತ್ರಿ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಭಾನುವಾರ ಶುಭಾಶಯಗಳನ್ನು ಕೋರಿದ್ದಾರೆ. 
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ನವದೆಹಲಿ: ದೇಶದಾದ್ಯಂತ ನವರಾತ್ರಿ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ಭಾನುವಾರ ಶುಭಾಶಯಗಳನ್ನು ಕೋರಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ಜನರಿಗೆ ನವರಾತ್ರಿಯ ಶುಭಾಶಯಗಳು. ದುರ್ಗಾ ದೇವಿಯು ನಮ್ಮ ಜೀವನದಲ್ಲಿ ಹೊಸ ಶಕ್ತಿ, ಹೊಸ ಸಂತೋಷ ಮತ್ತು ಉತ್ಸಾಹವನ್ನು ತರಲಿ 'ಎಂದು ತಿಳಿಸಿದ್ದಾರೆ. 

ಇದರಂತೆ ಗೃಹ ಸಚಿವ ಅಮಿತ್ ಶಾ ಅವರು ಕೂಡ ಶುಭಾಶಯಗಳನ್ನು ಕೋರಿದ್ದು, ಶಕ್ತಿ ಆರಾಧನೆ ಭಾರತೀಯ ಸಂಸ್ಕೃತಿಯ ಆಧಾರವಾಗಿದೆ. ದೇಶದ ಜನತೆಗೆ ನವರಾತ್ರಿಯ ಶುಭಾಶಯಗಳು ಎಂದು ತಿಳಿಸಿದ್ದಾರೆ. 

ಪ್ರಸಕ್ತ ಸಾಲಿನಲ್ಲಿ ನವರಾತ್ರಿಯನ್ನು ಸೆ.29ರಿಂದ ಅಕ್ಟೋಬರ್ 7ರವರೆಗೂ ಆಚರಿಸಲಾಗುತ್ತಿದೆ. ನವರೂಪದಲ್ಲಿನ ವಿವಿಧ ಶಕ್ತಿ ದೇವಿಯ ಆರಾಧನೆಯೇ ನವರಾತ್ರಿಯಾಗಿದೆ. ಶಕ್ತಿ ಸ್ವರೂಪಣಿಯಾದ ದುರ್ಗೆ ದುಷ್ಟ ಸಂಹಾರಕ್ಕಾಗಿ ಈ ಸಮಯದಲ್ಲಿ 9 ಅವತಾರಗಳನ್ನು ತಾಳುತ್ತಾಳೆ. ಅಧರ್ಮ ಅಳಿಸಿ ಧರ್ಮ ಸೃಷ್ಟಿಸುವ ದುರ್ಗೆ, ಕಡೆಯ ದಿನ ಶಾಂತ ಸ್ವರೂಪಳಾಗುತ್ತಾಳೆ. ದೇಶದೆಲ್ಲೆಡೆ ಒಂಬತ್ತು ದಿನಗಳ ಕಾಲ ದುರ್ಗೆಯ ಶಕ್ತಿ ಪೂಜೆ ನಡೆಯುತ್ತದೆ. ಅದರಲ್ಲಿಯೂ ಕರ್ನಾಟಕದ ದುರ್ಗೆಯನ್ನು ಚಾಮುಂಡೇಶ್ವರಿ ಸ್ವರೂಪದಲ್ಲಿ ದಸರಾ ಸಂಭ್ರಮವಾಗಿ ಆಚರಿಸಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com