ಒಮ್ಮೆಗೆ ವಿದ್ಯುತ್ ದೀಪಗಳನ್ನು ಆರಿಸಿದರೆ ತುರ್ತು ಸೇವೆಗಳು, ಪವರ್ ಗ್ರಿಡ್ ಗಳಿಗೆ ಹಾನಿ: ಮಹಾರಾಷ್ಟ್ರ ಸಚಿವ

ಕೊರೋನಾವೈರಸ್ ವಿರುದ್ಧ ಹೋರಾಟದಲ್ಲಿ ದೇಶದ ಉತ್ಸಾಹವನ್ನು ಹೆಚ್ಚಿಸಲು  ಭಾನುವಾರ ರಾತ್ರಿ 9 ಗಂಟೆಗೆ ಮನೆಯ ಲೈಟ್ ಸ್ವಿಚ್ ಆಫ್ ಮಾಡಿ ಹಣತೆ, ಮೊಂಬತ್ತಿ, ಮೊಬೈಲ್ ಟಾರ್ಚ್ ಲೈಟ್ ಗಳನ್ನು ಉರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವುದು"ಪವರ್ ಗ್ರಿಡ್" ಮತ್ತು ತುರ್ತು ಸೇವೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಮಹಾರಾಷ್ಟ್ರ ಇಂಧನ ಸಚಿವ ನಿತಿನ್  ರೌತ್ ಹೇಳಿದ್ದಾರೆ
ನಿತಿನ್ ರೌತ್
ನಿತಿನ್ ರೌತ್

ಮುಂಬೈ: ಕೊರೋನಾವೈರಸ್ ವಿರುದ್ಧ ಹೋರಾಟದಲ್ಲಿ ದೇಶದ ಉತ್ಸಾಹವನ್ನು ಹೆಚ್ಚಿಸಲು  ಭಾನುವಾರ ರಾತ್ರಿ 9 ಗಂಟೆಗೆ ಮನೆಯ ಲೈಟ್ ಸ್ವಿಚ್ ಆಫ್ ಮಾಡಿ ಹಣತೆ, ಮೊಂಬತ್ತಿ, ಮೊಬೈಲ್ ಟಾರ್ಚ್ ಲೈಟ್ ಗಳನ್ನು ಉರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವುದು"ಪವರ್ ಗ್ರಿಡ್" ಮತ್ತು ತುರ್ತು ಸೇವೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಮಹಾರಾಷ್ಟ್ರ ಇಂಧನ ಸಚಿವ ನಿತಿನ್  ರೌತ್ ಹೇಳಿದ್ದಾರೆ

ಜನರು ತಮ್ಮ ಮನೆಗಳಲ್ಲಿ ದೀಪಗಳನ್ನು ಸ್ವಿಚ್ ಆಫ್ ಮಾಡದೆ ಮೇಣದ ಬತ್ತಿಗಳು ಮತ್ತು ದೀಪಗಳನ್ನು ಬೆಳಗಿಸಬೇಕು ಎಂದು ಸಚಿವರು ತಿಳಿಸಿದ್ದು "ಎಲ್ಲಾ ದೀಪಗಳನ್ನು ಒಮ್ಮೆಗೇ ಸ್ವಿಚ್ ಆಫ್ ಮಾಡಿದರೆ ಅದು ಗ್ರಿಡ್  ಗಳ ವೈಫಲ್ಯಕ್ಕೆ ಕಾರಣವಾಗಬಹುದು. ನಮ್ಮ ಎಲ್ಲಾ ತುರ್ತು ಸೇವೆಗಳ ಮೇಲೆ ಇದು ಪರಿಣಾಮ ಬೀರುತ್ತದೆ.ಮತ್ತೆ ವಿದ್ಯುತ್ ಗ್ರಿಡ್  ಪುನಃಸ್ಥಾಪಿಸಲು ಒಂದು ವಾರ ಸಮಯ ತೆಗೆದುಕೊಳ್ಳಬಹುದು ." ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

"ಒಂದೇ ಬಾರಿಗೆ  ದೀಪಗಳನ್ನು ಆಫ್ ಮಾಡುವುದರಿಂದ ಬೇಡಿಕೆ ಮತ್ತು ಪೂರೈಕೆಯಲ್ಲಿ ಭಾರಿ ವ್ಯತ್ಯಾಸ ಉಂಟಾಗುತ್ತದೆ. ಲಾಕ್‌ಡೌನ್ ಇರುವುದರಿಂದ, ಕಾರ್ಖಾನೆ ಗಳು ಕಾರ್ಯಾಚರಣೆ ಮಾಡದ ಕಾರಣ  ಬೇಡಿಕೆ ಈಗಾಗಲೇ 23,000 ಮೆಗಾವ್ಯಾಟ್‌ನಿಂದ 13,000 ಮೆಗಾವ್ಯಾಟ್‌ಗೆ ಇಳಿದಿದೆ" ಎಂದು ಅವರು ಹೇಳಿದರು."ಆ ಸಮಯದಲ್ಲಿ ದೀಪಗಳನ್ನು ಸ್ವಿಚ್ ಆಫ್ ಮಾಡುವುದರಿಂದ ಅದು ತುರ್ತು ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಸೇವೆಗಳನ್ನು ಪುನಃಸ್ಥಾಪಿಸಲು ನಮಗೆ ಕನಿಷ್ಠ 12-16 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಕೊರೋನಾವೈರಸ್  ಬಿಕ್ಕಟ್ಟಿನ ಸಂದರ್ಭದಲ್ಲಿ ವಿದ್ಯುತ್ ಒಂದು ಪ್ರಮುಖ ಸಾಧನವಾಗಿದೆ" ಎಂದು ಅವರು ಹೇಳಿದರು. .

ಕೊರೋನಾವೈರಸ್ ಬಿಕ್ಕಟ್ಟನ್ನು  "ತಪ್ಪಾಗಿ ನಿರ್ವಹಿಸುವುದು" ಮತ್ತು ಅದನ್ನು ನಿಭಾಯಿಸಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳದಿರುವ ಬಗ್ಗೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ಟೀಕಿಸಿದೆ.

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ತಿಳಿಸಿರುವ ವೀಡಿಯೋ ಸಂದೇಶದಲ್ಲಿ ಭಾನುವಾರ  (ಏಪ್ರಿಲ್ 5) ರಾತ್ರಿ 9 ಗಂಟೆಗೆ ತಮ್ಮ ಮನೆಗಳಲ್ಲಿ ಎಲ್ಲಾ ವಿದ್ಯುತ್ ದೀಪಗಳನ್ನು ಫ್ ಮಾಡಲು ಮತ್ತುಒಂಬತ್ತು ನಿಮಿಷಗಳ ಕಾಲ ಮೇಣದ ಬತ್ತಿ, ಹಣತೆ, ಬ್ಯಾಟರಿ, ಮೊಬೈಲ್ ಟಾರ್ಚ್ ಗಳೊಂದಿಗೆ ತಮ್ಮ ಮನೆ ಅಥವಾ ಕಿಟಕಿಗಳ ಬಳಿ ನಿಲ್ಲುವಂತೆ ಸೂಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com