ಕೊರೋನಾ ವೈರಸ್: ತಬ್ಲೀಘಿಗಳೂ ಸೇರಿದಂತೆ ವೈರಸ್ ಶಂಕಿತ ಸೋಂಕಿತರಿಗೆ ಚಿಕಿತ್ಸೆ ನೀಡಲು ಛತ್ರಗಳನ್ನು ಬಳಸಿ: ಟಿಟಿಡಿ

ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮಾರಕ ಕೊರೋನಾ ವೈರಸ್ ಹಾವಳಿ ಹೆಚ್ಚಾಗಿರುವಂತೆಯೇ ಇತ್ತ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ತನ್ನ ಟಿಟಿಡಿ ಛತ್ರಗಳನ್ನೇ ಕ್ವಾರಂಟೈನ್ ಕೇಂದ್ರಗಳಾಗಿ ಬಳಸಿಕೊಳ್ಳುವಂತೆ ಸರ್ಕಾರಕ್ಕೆ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಹೈದರಾಬಾದ್: ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮಾರಕ ಕೊರೋನಾ ವೈರಸ್ ಹಾವಳಿ ಹೆಚ್ಚಾಗಿರುವಂತೆಯೇ ಇತ್ತ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ತನ್ನ ಟಿಟಿಡಿ ಛತ್ರಗಳನ್ನೇ ಕ್ವಾರಂಟೈನ್ ಕೇಂದ್ರಗಳಾಗಿ ಬಳಸಿಕೊಳ್ಳುವಂತೆ ಸರ್ಕಾರಕ್ಕೆ ಹೇಳಿದೆ.

ದೆಹಲಿಯ ನಿಜಾಮುದ್ದೀನ್ ಮರ್ಕಜ್ ಮಸೀದಿಯಲ್ಲಿ ತಬ್ಲೀಘಿ ಜಮಾತ್ ಸಂಘಟನೆಯ ಧಾರ್ಮಿಕ ಸಭೆ ಬಳಿಕ ಕೊರೋನಾ ಸೋಂಕಿಗೆ ಕೋಮು ಬಣ್ಣ ಬಳಿಯಲಾಗುತ್ತಿದ್ದು, ತಬ್ಲೀಘಿಗಳಿಂದಲೇ ಸೋಂಕು ಹಾಚ್ಚಾಗುತ್ತಿದೆ ಎಂಬ ವಾದ ಕೇಳಿಬರುತ್ತಿವೆ. ಇಂತಹ ವಾದಗಳ ಬೆನ್ನಲ್ಲೇ ಟಿಟಿಡಿ  ಕೋಮು ಸೌಹರ್ಧತೆ ಬೆಳೆಸುವ ಕಾರ್ಯಕ್ಕೆ ಕೈ ಹಾಕಿದ್ದು, ತನ್ನ ಛತ್ರಗಳನ್ನೇ ಕ್ವಾರಂಟೈನ್ ಆಗಿ ಬಳಕೆ ಮಾಡುವಂತೆ ಒಪ್ಪಿಗೆ ನೀಡಿದೆ. ಅದರಂತೆ ಆಂಧ್ರಪ್ರದೇಶದ ಹಲವು ದೇವಸ್ಥಾನಗಳು ಸೋಂಕು ಶಂಕಿತರಿಗೆ ಆಶ್ರಯವನ್ನು ನೀಡಲು ಮುಂದಾಗಿವೆ. 

ತಬ್ಲಿಘಿಗಳೂ ಸೇರಿದಂತೆ ಹಿಂದೂ ಮುಸ್ಲಿಂ, ಕ್ರಿಶ್ಚಿಯನ್ ಎಂಬ ಬೇಧಭಾವಗಳಿಲ್ಲದೇ ಎಲ್ಲ ಜಾತಿ ಮತ್ತು ಧರ್ಮದ ವೈರಸ್ ಶಂಕಿತ ಸೋಂಕಿತರನ್ನೂ ಕ್ವಾರಂಟೈನ್ ಕೇಂದ್ರದಲ್ಲಿರಿಸಲು ಅನುಮತಿ ನೀಡಿದೆ. ಟಿಟಿಡಿ ಮಾಲೀಕತ್ವದ ಪದ್ಮಾವತಿ ನಿಲಯಂ, ವಿಷ್ಣು ವಾಸಂ ಸೇರಿದಂತೆ ಹಲವು  ಛತ್ರಗಳನ್ನು ಕ್ವಾರಂಟೈನ್‌ ಕೇಂದ್ರವಾಗಿಸಲು ಸರ್ಕಾರಕ್ಕೆ ಹಸ್ತಾಂತರಿಸಿವೆ. ಈ ಕ್ವಾರಂಟೈನ್ ಕೇಂದ್ರದಲ್ಲಿ ನಿಜಾಮುದ್ದೀನ್‌ ತಬ್ಲೀಗ್‌ ಜಮಾತ್‌ ಸಭೆಯಲ್ಲಿ ಭಾಗವಹಿಸಿದ್ದವರನ್ನೂ ಇಡಲಾಗಿದೆ.

ಈ ಬಗ್ಗೆ ಜಿಲ್ಲಾಧಿಕಾರಿ ಭರತ್ ಗುಪ್ತಾ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 'ಇನ್ನು ಚಿತ್ತೂರಿನ ಶ್ರೀಕಾಳಹಸ್ತಿ ಮತ್ತು ಕಾಣಿಪಾಕಂ ವರಸಿದ್ಧಿ ವಿನಾಯಕ ದೇವಾಲಯಗಳ ಛತ್ರಗಳನ್ನೂ ಬಳಸಿಕೊಳ್ಳಲು ಟಿಟಿಡಿ ಆಡಳಿತ ಮಂಡಳಿಯು ಬಿಟ್ಟಕೊಟ್ಟಿದೆ. ಪದ್ಮಾವತಿ ನಿಲಯದ ಒಂದು  ಬ್ಲಾಕ್‌ನ 100 ಕೊಠಡಿ, ಕನಿಪಕಂನಲ್ಲಿ 88 ಕೊಠಡಿಗಳು ಮತ್ತು ಶ್ರೀಕಳಹಸ್ತಿಯಲ್ಲಿ 14 ಕೊಠಡಿಗಳು ಕ್ವಾರಂಟೈನ್‌ಗೆ ಬಳಕೆಯಾಗುತ್ತಿದೆ. ತಬ್ಲೀಗ್‌ ಸಭೆಯಲ್ಲಿ ಭಾಗವಹಿಸಿದ್ದ ಹಲವರು ಸೇರಿದಂತೆ 187 ಮಂದಿ ಪ್ರಸ್ತುತ ಪದ್ಮಾವತಿ ನಿಲಯದಲ್ಲಿದ್ದಾರೆ. ಕನಿಪಕಂನಲ್ಲಿ ಉಳಿದುಕೊಂಡಿದ್ದ  ಸುಮಾರು 40 ಮಂದಿಗೆ ಸೋಂಕು ಇಲ್ಲದಿರುವುದು ದೃಢಪಟ್ಟಿದ್ದು ಅವರನ್ನು ಮನೆಗೆ ಕಳುಹಿಸಲಾಗಿದೆ. ಅತಿಥಿಗೃಹಗಳಲ್ಲಿ ಶೌಚಾಲಯಗಳೂ ಕೊಠಡಿಯಲ್ಲೇ ಇರುವುದರಿಂದ ಇವುಗಳು ಕ್ವಾರಂಟೈನ್‌ ಕೇಂದ್ರಗಳನ್ನಾಗಿಸಲು ಸೂಕ್ತ ಎನ್ನುವ ದೃಷ್ಟಿಯಿಂದ, ಇವುಗಳನ್ನು ಬಳಸಿಕೊಳ್ಳಲಾಗಿದೆ’  ಎಂದರು. 

ಇನ್ನು ತಿರುಪತಿ ದೇವಸ್ಥಾನದ ವಿಷ್ಣವಾಸಂ ಮತ್ತು ಶ್ರೀನಿವಾಸಂ ಮುಂತಾದ ವಿಶ್ರಾಂತಿ ಗೃಹಗಳಲ್ಲಿ ವಲಸೆ ಕಾರ್ಮಿಕರು ಮತ್ತು ನಿರ್ಗತಿಕರಿಗೆ ಆಶ್ರಯ ಒದಗಿಸಲಾಗಿದೆ ಎಂದು ಭರತ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com