'ರಾಮ್ ನಾಮ್ ಸತ್ಯ ಹೈ' ಮಂತ್ರದೊಂದಿಗೆ ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂರು!

ಲಾಕ್ ಡೌನ್ ಕಾರಣ ಕುಟುಂಬಸ್ಥರು ಯಾರೂ ಬಾರದ ಹಿನ್ನೆಲೆಯಲ್ಲಿ 68 ವರ್ಷದ ಹಿಂದೂ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರವನ್ನು ನೆರೆಹೊರೆಯ ಮುಸ್ಲಿಂ ಸಮುದಾಯದವರು ನೆರವೇರಿಸಿರುವ ಘಟನೆ ಮುಂಬೈ ಹೊರವಲಯ ಬಾಂದ್ರಾದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಮುಂಬೈ: ಲಾಕ್ ಡೌನ್ ಕಾರಣ ಕುಟುಂಬಸ್ಥರು ಯಾರೂ ಬಾರದ ಹಿನ್ನೆಲೆಯಲ್ಲಿ 68 ವರ್ಷದ ಹಿಂದೂ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರವನ್ನು ನೆರೆಹೊರೆಯ ಮುಸ್ಲಿಂ ಸಮುದಾಯದವರು ನೆರವೇರಿಸಿರುವ ಘಟನೆ ಮುಂಬೈ ಹೊರವಲಯ ಬಾಂದ್ರಾದಲ್ಲಿ ನಡೆದಿದೆ.

ಬಾಂದ್ರಾದ ಗರೀಬ್ ನಗರದ ನಿವಾಸಿಯಾಗಿದ್ದ ಪ್ರೇಮಚಂದ್ರ  ಬುದ್ಧಲಾಲ್ ಮಹಾವೀರ್ ಅವರ ಪಾರ್ಥೀವ ಶರೀರವನ್ನು ರಾಮ್ ನಾಮ ಸತ್ಯ ಹೈ ಘೋಷಣೆಗಳೊಂದಿಗೆ ಸ್ಮಶಾನದವರೆಗೂ ಭುಜಗಳಲ್ಲಿ ಹೊತ್ತು ಸಾಗುವ ಮೂಲಕ ನೆರೆಹೊರೆಯ ಮುಸ್ಲಿಂ ಸಮುದಾಯದವರು ಅಂತ್ಯಸಂಸ್ಕಾರ ಮಾಡಿದ್ದಾರೆ.

ರಾಜಸ್ಥಾನದ ಬಡ ಕುಟುಂಬಕ್ಕೆ ಸೇರಿದ ಮಹಾವೀರ್ ಅನಾರೋಗ್ಯದಿಂದ ಮೃತಪಟ್ಟಿದ್ದರು. ಕೂಡಲೇ ಅವರ ಪುತ್ರ ಮೋಹನ್ ಮಹಾವೀರ್ ಸಂಬಂಧಿಕರು ಹಾಗೂ ಕುಟುಂಬಸ್ಥರಿಗೆ ಸುದ್ದಿ ತಿಳಿಸಿದ್ದಾರೆ. ಆದರೆ, ಲಾಕ್ ಡೌನ್ ಕಾರಣ ಅವರು ಬರಲು ಸಾಧ್ಯವಾಗಿಲ್ಲ.

ಇಂತಹ ಸಂದರ್ಭದಲ್ಲಿ ತಂದೆಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ ನೆರೆಹೊರೆಯವರಿಗೆ ಮೋಹನ್ ಮಹಾವೀರ್ ಧನ್ಯವಾದ ಸಲ್ಲಿಸಿದರು. ಇಂತಹ ಸಂದರ್ಭಗಳಲ್ಲಿ  ಧಾರ್ಮಿಕ ಅಡೆತಡೆಗಳನ್ನು ಮೀರಿದ ಮಾನವೀಯತೆಯನ್ನು ನಾವು ತೋರಿಸಬೇಕು ಎಂದು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಯೂಸಫ್ ಸಿದ್ದಿಕಿ ಶೇಕ್ ಹೇಳಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com