ದೇಶದಲ್ಲಿ 14 ಸಾವಿರ ಗಡಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ: 6ನೇ ಸ್ಥಾನದಲ್ಲಿ ಗುಜರಾತ್

ಕೊರೋನಾ ವೈರಸ್ ಸೋಂಕು ಪ್ರಕರಣದಲ್ಲಿ ಸಾವಿರ ಗಡಿ ದಾಟುವ ಮೂಲಕ ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಗುಜರಾತ್ ರಾಜ್ಯ ದೇಶದಲ್ಲಿ 6ನೇ ಸ್ಥಾನ ಪಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ:ಕೊರೋನಾ ವೈರಸ್ ಸೋಂಕು ಪ್ರಕರಣದಲ್ಲಿ ಸಾವಿರ ಗಡಿ ದಾಟುವ ಮೂಲಕ ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಗುಜರಾತ್ ರಾಜ್ಯ ದೇಶದಲ್ಲಿ 6ನೇ ಸ್ಥಾನ ಪಡೆದಿದೆ.

ಕಳೆದೊಂದು ವಾರದಿಂದ ಕೊರೋನಾ ಪೀಡಿತರ ಸಂಖ್ಯೆ ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದ್ದರೂ ಕೂಡ ಇಳಿಕೆಯಾದಂತೆ ಕಂಡುಬರುತ್ತಿಲ್ಲ. ಮಹಾರಾಷ್ಟ್ರದಲ್ಲಿ 3 ಸಾವಿರದ 220, ದೆಹಲಿ(1,640), ತಮಿಳು ನಾಡು(1,323), ರಾಜಸ್ತಾನ(1,193) ಮತ್ತು ಮಧ್ಯ ಪ್ರದೇಶ(1,310)ಗಳಲ್ಲಿ ಕೂಡ ಕೊರೋನಾ ಪೀಡಿತರ ಸಂಖ್ಯೆ ಸಾವಿರದ ಗಡಿ ದಾಟಿದೆ.

ಮುಂಬೈ ನಗರಿಯೊಂದರಲ್ಲಿಯೇ ಕೊರೋನಾ ಸೋಂಕಿತರ ಸಂಖ್ಯೆ 2,120 ಆಗಿದ್ದು ನಿನ್ನೆ ಮತ್ತೆ 77 ಹೊಸ ಪ್ರಕರಣಗಳು ಕಂಡುಬಂದಿವೆ. ಧಾರಾವಿ ಕೊಳಚೆ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ 101 ಆಗಿದೆ.

ಇದುವರೆಗೆ ದೇಶದಲ್ಲಿ ಕೋವಿಡ್-19 ಕೇಸುಗಳು 1,076 ಏರಿಕೆಯಾಗಿದ್ದು ಕಳೆದ 24 ಗಂಟೆಗಳಲ್ಲಿ 32 ಸಾವುಗಳು ವರದಿಯಾಗಿವೆ. ಈ ಮೂಲಕ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 13 ಸಾವಿರದ 835 ಆಗಿದೆ, 452 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶ ಹೇಳಿದೆ. ಒಟ್ಟು 1,767 ರೋಗಿಗಳು ಕೊರೋನಾದಿಂದ ಗುಣಮುಕ್ತರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com