ಕೊರೊನವೈರಸ್
ದೇಶ
ಭಾರತದಲ್ಲಿರುವ ಶೇ.80% ರಷ್ಟು ಕೊರೋನಾ ಪ್ರಕರಣಗಳು ರೋಗಲಕ್ಷಣ ರಹಿತ!
ಭಾರತದಲ್ಲಿರುವ ಶೇ.80 ರಷ್ಟು ಕೊರೋನಾ ಪ್ರಕರಣಗಳು ರೋಗಲಕ್ಷಣ ರಹಿತ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ನವದೆಹಲಿ: ಭಾರತದಲ್ಲಿರುವ ಶೇ.80 ರಷ್ಟು ಕೊರೋನಾ ಪ್ರಕರಣಗಳು ರೋಗಲಕ್ಷಣ ರಹಿತ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಕೊರೋನಾ ಸೋಂಕು ತಗುಲಿರುವ ಬಹುತೇಕ ವ್ಯಕ್ತಿಗಳಿಗೆ ಒಂದೋ ರೋಗದ ಲಕ್ಷಣಗಳೇ ಕಾಣಿಸಿಕೊಳ್ಳುವುದಿಲ್ಲ. ಅಥವಾ ಸಣ್ಣ ಪ್ರಮಾಣದ ಲಕ್ಷಣಗಳು ಗೋಚರಿಸುತ್ತವೆ ಇದೇ ಆತಂಕಕಾರಿ ವಿಷಯ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ರೋಗಲಕ್ಷಣಗಳಿಲ್ಲದ ಜನರಿಂದ ಸೋಂಕು ಇನ್ನಷ್ಟು ಜನರಿಗೆ ಸುಲಭವಾಗಿ ಹರಡುತ್ತದೆ. ಆದ್ದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಚಿವಾಲಯ ಸಲಹೆ ನೀಡಿದೆ.

