ಭಿಕ್ಷೆ ಬೇಡಿ ಜೀವ ಉಳಿಸಿಕೊಂಡು 2,800 ಕಿ.ಮೀ ನಡೆದು ಗುಜರಾತ್ ನಿಂದ ಮನೆಗೆ ತಲುಪಿದ ಅಸ್ಸಾಂ ವ್ಯಕ್ತಿ!

ಕೊರೋನಾ ವೈರಸ್ ತಡೆಗೆ ವಿಧಿಸಲಾಗಿರುವ ಲಾಕ್ ಡೌನ್ ನಡುವೆಯೇ ಈಸ್ಟ್-ವೆಸ್ಟ್ ಕಾರಿಡಾರ್ ಕನಸು ನನಸಾಗಿದೆ. 
ಭಿಕ್ಷೆ ಬೇಡಿ ಜೀವ ಉಳಿಸಿಕೊಂಡು 2,800 ಕಿ.ಮೀ ನಡೆದು ಗುಜರಾತ್ ನಿಂದ ಮನೆಗೆ ತಲುಪಿದ ಅಸ್ಸಾಂ ವ್ಯಕ್ತಿ!
ಭಿಕ್ಷೆ ಬೇಡಿ ಜೀವ ಉಳಿಸಿಕೊಂಡು 2,800 ಕಿ.ಮೀ ನಡೆದು ಗುಜರಾತ್ ನಿಂದ ಮನೆಗೆ ತಲುಪಿದ ಅಸ್ಸಾಂ ವ್ಯಕ್ತಿ!

ಅಸ್ಸಾಂ: ಕೊರೋನಾ ವೈರಸ್ ತಡೆಗೆ ವಿಧಿಸಲಾಗಿರುವ ಲಾಕ್ ಡೌನ್ ನಡುವೆಯೇ ಈಸ್ಟ್-ವೆಸ್ಟ್ ಕಾರಿಡಾರ್ ಕನಸು ನನಸಾಗಿದೆ. 

ಹೇಗೆ ಎಂದು ಹೌರಾರಬೇಡಿ, ಈಸ್ಟ್-ವೆಸ್ಟ್ ಕಾರಿಡಾರ್ ಕನಸು ಎಂದರೆ ಗುಜರಾತ್ ನಿಂದ ಅಸ್ಸಾಂ ಗೆ ತೆರಳು ವ್ಯಕ್ತಿಯೋರ್ವ 2,800 ಕಿ.ಮೀ ನಡೆದ ಕಥೆಯಾಗಿದೆ. ಅಸ್ಸಾಂ ನ ನಾಗೌನ್ ಮೂಲದ ಜಾದವ್ ಗೊಗೋಯ್ ಎಂಬ ವ್ಯಕ್ತಿ ಸತತ 25 ದಿನಗಳ ಕಾಲ ಕಾಲ್ನಡಿಗೆಯಲ್ಲಿ 2,800 ಕಿ.ಮೀ ಸಂಚರಿಸಿ ತನ್ನ ಮನೆ ತಲುಪಿ ಅದೃಷ್ಟವಶಾತ್ ಬದುಕಿ ಉಳಿದಿದ್ದಾನೆ. 

ಜೇಬಿನಲ್ಲಿ 4,000 ರೂಪಾಯಿಗಳನ್ನಿಟ್ಟುಕೊಂಡು ಮಾ.27 ರಂದು ರಂದು ಗುಜರಾತ್ ನ ಇಂಡಸ್ಟ್ರಿಯಲ್ ಟೌನ್ ವಾಪಿಯಿಂದ 2,800 ಕಿ.ಮೀ ಕಾಲ್ನಡಿಗೆ ಪ್ರಾರಂಭಿಸಿದ್ದಾನೆ. ಬಿಹಾರದ ಮೂಲಕ ಅಸ್ಸಾಂ ನ ನಾಗೌನ್ ತಲುಪಿರುವ ಜಾದವ್ ಗೊಗೋಯ್ ನ್ನು ನಾಗೌನ್ ನ ರಾಹ ನಲ್ಲಿ ಎಜೆವೈಸಿಪಿ ಸಿಬ್ಬಂದಿಗಳು ಆತನನ್ನು ರಕ್ಷಿಸಿದ್ದಾರೆ. 2,800 ನಡೆದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 

ಮಾಧ್ಯಮಗಳ ಮೂಲಕ  ಜಾದವ್ ಗೊಗೋಯ್ ಮಾಹಿತಿ ಲಭ್ಯವಾಯಿತು ತಕ್ಷಣವೇ ಆತನನ್ನು ಹುಡುಕಿ ಸಹಾಯ ಮಾಡಿದೆವು, ಮಾರ್ಗ ಮಧ್ಯೆ ಭಿಕ್ಷೆ ಬೇಡಿ ಜೀವ ಉಳಿಸಿಕೊಂಡಿದ್ದಾರೆ, ನಡೆದಿರುವುದರಿಂದ ಸುಸ್ತಾಗಿರುವ ಗೊಗೋಯ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಎಜೆವೈಸಿಪಿ ನಾಯಕರು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com