ಧಾರಾವಿಯಲ್ಲಿ ಮತ್ತೆ 30 ಮಂದಿಯಲ್ಲಿ ಕೊರೋನಾ ವೈರಸ್ ಪತ್ತೆ, ಸೋಂಕಿತರ ಸಂಖ್ಯೆ 168ಕ್ಕೆ ಏರಿಕೆ

ಏಷ್ಯಾದಲ್ಲೇ ಅತೀ ದೊಡ್ಡ ಕೊಳಚೆ ಪ್ರದೇಶ ಎಂದು ಕರೆಯಲಾಗುವ ಧಾರಾವಿಯಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, 24 ಗಂಟೆಗಳಲ್ಲಿ ಮತ್ತೆ 30 ಹೊಸ ಪಾಸಿಟಿವ್ ಕೇಸ್ ಗಳ ಪತ್ತೆಯಾಗಿದೆ. ಆ ಮೂಲಕ ಈ ಪ್ರದೇಶವೊಂದರಲ್ಲೇ ಸೋಂಕಿತರ  ಸಂಖ್ಯೆ 168ಕ್ಕೆ ಏರಿಕೆಯಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಏಷ್ಯಾದಲ್ಲೇ ಅತೀ ದೊಡ್ಡ ಕೊಳಚೆ ಪ್ರದೇಶ ಎಂದು ಕರೆಯಲಾಗುವ ಧಾರಾವಿಯಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, 24 ಗಂಟೆಗಳಲ್ಲಿ ಮತ್ತೆ 30 ಹೊಸ ಪಾಸಿಟಿವ್ ಕೇಸ್ ಗಳ ಪತ್ತೆಯಾಗಿದೆ. ಆ ಮೂಲಕ ಈ ಪ್ರದೇಶವೊಂದರಲ್ಲೇ ಸೋಂಕಿತರ  ಸಂಖ್ಯೆ 168ಕ್ಕೆ ಏರಿಕೆಯಾಗಿದೆ.

ಇದೇ ಧಾರಾವಿಯಲ್ಲಿ ಭಾನುವಾರ ಒಂದೇ ದಿನ 20 ಕೊರೋನಾ ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಇದೀಗ ಮತ್ತೆ 24 ಗಂಟೆಗಳ ಅವಧಿಯಲ್ಲಿ 30 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಆ ಮೂಲಕ ಧಾರಾವಿಯಲ್ಲಿ ಪತ್ತೆಯಾದ ಕೊರೋನಾ ಸೋಂಕಿತರ ಸಂಖ್ಯೆ  168ಕ್ಕೆ ಏರಿಕೆಯಾಗಿದೆ. ಅಲ್ಲದೆ ಇಲ್ಲಿ 11 ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಬಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಪತ್ತೆಯಾಗಿರುವ 30 ಹೊಸ ಕೊರೋನಾ ಪಾಸಿಟಿವ್ ಸೋಂಕಿತರಲ್ಲಿ 17 ಮಂದಿ ಸೋಂಕಿತರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. 15 ಮತ್ತು 2 ವರ್ಷದ ಬಾಲಕರಲ್ಲಿ ವೈರಸ್ ಪತ್ತೆಯಾಗಿದೆ. ಬಿಎಂಸಿ ಅಧಿಕಾರಿಗಳು ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ  ಧಾರಾವಿ ಮತ್ತೆ ಮತ್ತೆ ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿರುವುದು ಅಧಿಕಾರಿಗಳಿಗೆ ತಲೆನೋವು ತಂದಿದೆ. 

ಇನ್ನು ಮಹಾರಾಷ್ಟ್ರದಲ್ಲೂ ಕೊರೋನಾ ಸೋಂಕಿತರ ಸಂಖ್ಯೆ 4,666ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ ಕೂಡ 232ಕ್ಕೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com