ಕೋವಿಡ್ -19: ಕೇರಳ ಸರ್ಕಾರಿ ನೌಕರರ ಒಂದು ತಿಂಗಳ ವೇತನ ಕಡಿತ

ಕೊರೋನಾ ಅಟ್ಟಹಾಸದಿಂದ ನಲುಗಿರುವ ಕೇರಳ ರಾಜ್ಯ, ಸರ್ಕಾರಿ ಉದ್ಯೋಗಿಗಳ ಒಂದು ತಿಂಗಳ ವೇತನವನ್ನು 5 ಕಂತುಗಳಲ್ಲಿ ಕಡಿತಗೊಳಿಸಲು ನಿರ್ಧರಿಸಿದೆ.
ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್
Updated on

ತಿರುವನಂತಪುರ: ಕೊರೋನಾ ಅಟ್ಟಹಾಸದಿಂದ ನಲುಗಿರುವ ಕೇರಳ ರಾಜ್ಯ, ಸರ್ಕಾರಿ ಉದ್ಯೋಗಿಗಳ ಒಂದು ತಿಂಗಳ ವೇತನವನ್ನು 5 ಕಂತುಗಳಲ್ಲಿ ಕಡಿತಗೊಳಿಸಲು ನಿರ್ಧರಿಸಿದೆ.

ಕಡಿತಗೊಳಿಸಿದ ಒಂದು ತಿಂಗಳ ಸಂಬಳವನ್ನು ನಿರ್ದಿಷ್ಟ ಅವಧಿಯ ನಂತರ ಅವರಿಗೆ ಮರುಪಾವತಿ ಮಾಡಲಾಗುತ್ತದೆ. ಎಲ್ಲಾ ವಿಭಾಗದ ಸರ್ಕಾರಿ ನೌಕರರ ಆರು ದಿನಗಳ ವೇತನವನ್ನು ಐದು ತಿಂಗಳಲ್ಲಿ ಕಡಿತಗೊಳಿಸುವ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ಸಲ್ಲಿಸಿದೆ.

ವಿವಿಧ ಹಂತಗಳಲ್ಲಿ ಈ ಹಣವನ್ನು ವಾಪಸ್ ನೀಡಲಾಗುವುದು,  ಬುಧವಾರ ನಡೆಯುವ ಸಂಪುಟ ಸಭೆಯಲ್ಲಿ ಈ ಪ್ರಸ್ತಾವನೆ ಅನುಮೋದನೆಗೊಳ್ಳಲಿದ್ದು ಮುಖ್ಯಮಂತ್ರಿಗಳೇ ಅಧಿಕೃತವಾಗಿ ಘೋಷಿಸುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com