ಪ್ರತಿದಿನ 2.6 ಲಕ್ಷ ಊಟ ಪೂರೈಕೆಗೆ ಮುಂದಾದ ರೈಲ್ವೆ! 

ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ, ಪ್ರತಿ ದಿನ 2.6 ಲಕ್ಷ ಊಟವನ್ನು ಪೂರೈಕೆ ಮಾಡಲು ರೈಲ್ವೆ ಇಲಾಖೆ ಮುಂದಾಗಿದೆ. 
ಪ್ರತಿದಿನ 2.6 ಲಕ್ಷ ಊಟ ಪೂರೈಕೆಗೆ ಮುಂದಾದ ರೈಲ್ವೆ!
ಪ್ರತಿದಿನ 2.6 ಲಕ್ಷ ಊಟ ಪೂರೈಕೆಗೆ ಮುಂದಾದ ರೈಲ್ವೆ!

ನವದೆಹಲಿ: ದೇಶಾದ್ಯಂತ ಲಾಕ್ ಡೌನ್ ಹಿನ್ನೆಲೆಯಲ್ಲಿ, ಪ್ರತಿ ದಿನ 2.6 ಲಕ್ಷ ಊಟವನ್ನು ಪೂರೈಕೆ ಮಾಡಲು ರೈಲ್ವೆ ಇಲಾಖೆ ಮುಂದಾಗಿದೆ. 

ಈ ವ್ಯವಸ್ಥೆ ಅಗತ್ಯವಿರುವವರಿಗೆ ಲಭ್ಯವಾಗಲಿದ್ದು, ರೈಲ್ವೆಯ ಭಾಗವಾಗಿರುವ ಐಆರ್ ಸಿಟಿಸಿ ಕೇಟರಿಂಗ್ ಸಿದ್ಧಪಡಿಸಿದ ಆಹಾರವನ್ನು 15 ರೂಪಾಯಿಗಳಿಗೆ ರಾಜ್ಯ ಸರ್ಕಾರಕ್ಕೆ ತಲುಪಿಸಲಾಗುವುದು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. 

ಈ ಸೌಲಭ್ಯದ ಬಗ್ಗೆ ಜಿಲ್ಲಾ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಜೋನ್ ಗಳ ಮಟ್ಟದಲ್ಲಿ ಲಭ್ಯವಿರುವ ವ್ಯವಸ್ಥೆ ಬಗ್ಗೆ ಮಾಹಿತಿ ರವಾನೆ ಮಾಡಲಾಗಿದೆ. ರಾಜ್ಯಗಳು ಹಣವನ್ನು ನಂತರ ಪಾವತಿ ಮಾಡಬಹುದು ಎಂದು ರೈಲ್ವೆ ಇಲಾಖೆ ತಿಳಿಸಿದೆ. 

ದೇಶದ ವಿವಿಧ ಭಾಗಗಳಲ್ಲಿ ರೈಲ್ವೆ ಇಲಾಖೆಯ ಐಆರ್ ಸಿಟಿಸಿ ಪಾಕಶಾಲೆಗಳು ಕಾರ್ಯನಿರ್ವಹಿಸುತ್ತಿವೆ. 

ಪ್ರತಿ ದಿನ 2.6 ಲಕ್ಷ ಊಟ ಪೂರೈಕೆ ಮಾಡುವ ಯೋಜನೆ ಹೊಂದಲಾಗಿದೆ. ಅಗತ್ಯವಿದ್ದಲ್ಲಿ ಇದನ್ನು ಏರಿಕೆ ಮಾಡಲಾಗುವುದು ಎಂದು ರೈಲ್ವೆ ಹೇಳಿದೆ. ಅಗತ್ಯವಿರುವವರಿಗೆ ರೈಲ್ವೆ ಉಚಿತವಾಗಿ  ಊಟದ ವ್ಯವಸ್ಥೆ ಮಾಡುತ್ತಿದ್ದು, ಏ.21 ರಂದು ಇದು 20 ಲಕ್ಷಕ್ಕೆ ತಲುಪಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com