ಅಮೃತಸರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಾರ್ಯಕರ್ತನ ಬಂಧನ: ಪಂಜಾಬ್ ಡಿಜಿಪಿ

ಹಿಜ್ಬುಲ್ ಮುಜಾಹಿದ್ದೀನ್ ಕಾರ್ಯಕರ್ತನನ್ನು ಬಂಧಿಸಿರುವ ಪಂಜಾಬ್ ಪೊಲೀಸರು ಆತನಿಂದ 29 ಲಕ್ಷ ರು ಹಣ ವಶಕ್ಕೆ ಪಡೆದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಅಮೃತಸರ: ಹಿಜ್ಬುಲ್ ಮುಜಾಹಿದ್ದೀನ್ ಕಾರ್ಯಕರ್ತನನ್ನು ಬಂಧಿಸಿರುವ ಪಂಜಾಬ್ ಪೊಲೀಸರು ಆತನಿಂದ 29 ಲಕ್ಷ ರು ಹಣ ವಶಕ್ಕೆ ಪಡೆದಿದ್ದಾರೆ.

ಹಿಜ್ಬುಲ್ ಮುಜಾಹಿದ್ದೀನ್ ಕಾರ್ಯಕರ್ಕ ಹಿಮಾಲ್ ಅಹ್ಮದ್ ವಾಗೆ ಎಂಬುವನನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಡಿಜಿಪಿ ದಿನಕರ್ ಗುಪ್ತಾ ಭಾನುವಾರ ಹೇಳಿದ್ದಾರೆ.

ಈತ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ನೌಗಂ ನವನಾಗಿದ್ದಾನೆ. ಏಪ್ರಿಲ್ 25 ರಂದು ಗಸ್ತು ತಿರುಗತ್ತಿದ್ದ ಪೊಲೀಸರು ಆತನನ್ನು ಅಮೃತಸರದಲ್ಲಿ  ಬಂಧಿಸಿದ್ದು ಆತನ ವಿರುದ್ದ ಕೇಸ್ ದಾಖಲಿಸಿಲಾಗಿದೆ.

ಮೆಟ್ರೋ ಮಾರ್ಟ್ ಬಳಿ ಅಪರಿಚಿತ ವ್ಯಕ್ತಿಯಿಂದ ಹಣ ಸಂಗ್ರಹಿಸಿಕೊಂಡು ತನ್ನ ಲಾರಿಯಲ್ಲಿ ಇರಿಸಿಕೊಳ್ಳುತ್ತಿದ್ದ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com