ಕಾಶ್ಮೀರ ಗಡಿ ಕಾಯಲು ಮೊದಲ ಬಾರಿಗೆ ಮಹಿಳಾ ಸೈನಿಕರ ನಿಯೋಜನೆ!

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಗಡಿ ಕಾಯಲು ಭಾರತದ ವೀರ ವನಿತೆಯರಾದ ಮಹಿಳಾ ಸೈನಿಕರನ್ನು ನಿಯೋಜಿಸಲಾಗಿದೆ.
ಗಡಿಯಲ್ಲಿ ಪಹರೆ ಕಾಯುತ್ತಿರುವ ಮಹಿಳಾ ಯೋಧರು
ಗಡಿಯಲ್ಲಿ ಪಹರೆ ಕಾಯುತ್ತಿರುವ ಮಹಿಳಾ ಯೋಧರು

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಗಡಿ ಕಾಯಲು ಭಾರತದ ವೀರ ವನಿತೆಯರಾದ ಮಹಿಳಾ ಸೈನಿಕರನ್ನು ನಿಯೋಜಿಸಲಾಗಿದೆ.

ಹೌದು.. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡುವ ಸಂವಿಧಾನದ 370 ರದ್ದುಗೊಳಿಸಿ ಒಂದು ವರ್ಷವಾದ ಬೆನ್ನಲ್ಲೇ, ಇದೇ ಮೊದಲ ಬಾರಿಗೆ ಗಡಿ ಕಾಯಲು ಭಾರತದ ಮಹಿಳಾ ಸೈನಿಕರನ್ನು ನಿಯೋಜಿಸಲಾಗಿದೆ. ಈ ಕುರಿತಂತೆ ಅಸ್ಸಾಂ ರೈಫಲ್ಸ್ ಈ ಕುರಿತಂತೆ ಅಧಿಕೃತವಾಗಿ ಟ್ವೀಟ್ ಮಾಡಿದ್ದು, 'ಅಸ್ಸಾಂ ರೈಫಲ್ಸ್ ಯೋಧ ಪಡೆಯ ಮಹಿಳಾ ಗಡಿ ಭದ್ರತಾ ಸೈನಿಕರು ಕಾಶ್ಮೀರದಲ್ಲಿ ಗಡಿ ಕಾಯುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕಾಶ್ಮೀರದಲ್ಲಿ ಮಹಿಳಾ ಯೋಧರು ಗಡಿ ಭಾಗದಲ್ಲಿ ಕರ್ತವ್ಯ ನಿಭಾಯಿಸ ತೊಡಗಿದ್ದಾರೆ. 

ಇನ್ನು ಸೇನೆಯ ಈ ದಿಟ್ಟ ಕ್ರಮಕ್ಕೆ ಸ್ಥಳೀಯರು ಸ್ವಾಗತಿಸಿದ್ದಾರೆ. ಇದೇ ಮೊದಲ ಬಾರಿಗೆ ಕಾಶ್ಮೀರದಲ್ಲಿ ಮಹಿಳಾ ಯೋಧರು ಗಡಿ ಭಾಗದಲ್ಲಿ ಕರ್ತವ್ಯ ನಿಭಾಯಿಸ ತೊಡಗಿದ್ದಾರೆ. ಅಸ್ಸಾಂ ರೈಫಲ್ಸ್ ಮಹಿಳಾ ಯೋಧರ ವೃತ್ತಿಪರತೆಗೆ ಸ್ಥಳೀಯರು ಮಾರು ಹೋಗಿದ್ದಾರೆ ಎಂದು ಅಸ್ಸಾಂ ರೈಫಲ್ಸ್ ಟ್ವೀಟ್ ಮಾಡಿದೆ. 

ಭಾರತೀಯ ಸೇನಾ ಪಡೆಯಲ್ಲಿ ಅಸ್ಸಾಂ ರೈಫಲ್ಸ್ ಅತ್ಯಂತ ಹಳೆಯ ಪ್ಯಾರಾಮಿಲಿಟರಿ ಪಡೆಯಾಗಿದೆ. ಸಮುದ್ರಮಟ್ಟದಿಂದ 10 ಅಡಿಯಲ್ಲಿರುವ ಈ ಪ್ರದೇಶವು ಪಾಕ್ ಆಕ್ರಮಿತ ಕಾಶ್ಮೀರ, ಗಡಿ ನಿಯಂತ್ರಣ ರೇಖೆ ಸಮೀಪದಲ್ಲಿದೆ. ಉಗ್ರರ ನುಸುಳುವಿಕೆಯಲ್ಲದೆ, ನಕಲಿ ನೋಟು ಜಾಲ, ಡ್ರಗ್ಸ್ ಸ್ಮಗಲಿಂಗ್ ಎಲ್ಲದರ ಮೇಲೂ ನಿಗಾ ವಹಿಸಲಿದ್ದಾರೆ. ಸಾಧನಾ ಪಾಸ್ ವ್ಯಾಪ್ತಿಯ ತಂಗ್ಧಾರ್ ಹಾಗೂ ತಿಥ್ ವಾಲ್ ಪ್ರದೇಶದಲ್ಲಿ ಸುಮಾರು 40ಕ್ಕೂ ಅಧಿಕ ಹಳ್ಳಿಗಳಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com