ರಾಮ ಮಂದಿರ ಭೂಮಿ ಪೂಜೆ: ಭಾರತೀಯರಿಗೆ ಶುಭಾಶಯ ಕೋರಿದ್ದಕ್ಕೆ ಕ್ರಿಕೆಟಿಗ ಶಮಿ ಮಾಜಿ ಪತ್ನಿಗೆ ಜೀವ ಬೆದರಿಕೆ!

ಅಯೋಧ್ಯೆ ರಾಮಮಂದಿರ ಭೂಮಿಪೂಜೆ ಹಿನ್ನೆಲೆಯಲ್ಲಿ ಭಾರತೀಯರಿಗೆ ಶುಭಾಶಯ ಕೋರಿದ್ದ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿಯವರ ಮಾಜಿ ಪತ್ನಿ ಹಸಿನ್ ಜಹಾನ್ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ಹಸಿನ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆಂದು ತಿಳಿದುಬಂದಿದೆ.
ಹಸಿನ್ ಜಹಾನ್
ಹಸಿನ್ ಜಹಾನ್

ಕೋಲ್ಕತಾ: ಅಯೋಧ್ಯೆ ರಾಮಮಂದಿರ ಭೂಮಿಪೂಜೆ ಹಿನ್ನೆಲೆಯಲ್ಲಿ ಭಾರತೀಯರಿಗೆ ಶುಭಾಶಯ ಕೋರಿದ್ದ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿಯವರ ಮಾಜಿ ಪತ್ನಿ ಹಸಿನ್ ಜಹಾನ್ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ಹಸಿನ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆಂದು ತಿಳಿದುಬಂದಿದೆ. 

ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಭೂಮಿ ಪೂಜೆ ಹಿನ್ನೆಲೆಯಲ್ಲಿ ಹಿಂದೂ ಸಹೋದರ ಹಾಗೂ ಸಹೋದರಿಯರಿಗೆ ಶುಭಾಶಯ ಕೋರಿದ್ದೆ. ಇದಕ್ಕೆ ಕೆಲ ತುಚ್ಚ ಮನಸ್ಸಿನ ನನಗೆ ಕಿರುಕುಳಗಳನ್ನು ನೀಡುತ್ತಿದ್ದು, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾರೆ. ಇದು ನಿಜಕ್ಕೂ ದುರಾದೃಷ್ಟಕರ ವಿಚಾರ. ಕೆಲವರು ನನಗೆ ಜೀವ ಬೆದರಿಕೆ ಹಾಕುತ್ತಿದ್ದರೆ, ಕೆಲವರು ಅತ್ಯಾಚಾರ, ಲೈಂಗಿಕ ದೌರ್ಜನ್ಯ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ನನಗೆ ಇದೀಗ ಅಸುರಕ್ಷಿತ ಭಾವನೆಗಳು ಉಂಟಾಗುತ್ತಿದ್ದು, ದಯವಿಟ್ಟು ಸಹಾಯ ಮಾಡಿ. ಇದೇ ರೀತಿ ಮುಂದುವರೆದರೆ, ನಾನು ಮಾನಸಿಕ ಸಮಸ್ಯೆಗೊಳಗಾಗುವ ಸಾಧ್ಯತೆಗಳಿವೆ ಎಂದು ಹಸಿನ್ ಅವರು ಹೇಳಿಕೊಂಡಿದ್ದಾರೆ. 

ನಾನು ನನ್ನ ಮಗಳೊಂದಿಗೆ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದು, ಅಸುರಕ್ಷಿತ ಮನೋಭಾವನೆ ಉಂಟಾಗುತ್ತಿದೆ. ಪ್ರತೀ ರಾತ್ರಿ ಭಯದಿಂದಲೇ ಕಳೆಯುವಂತಾಗಿದೆ. ಈ ಮಾನಸಿಕ ಹಿಂಸೆಯನ್ನು ದೂರಾಗಿಸಿದರೆ ನಾನು ಭಯದಿಂದ ವಿಮುಕ್ತಳಾಗುತ್ತೇನೆ. ಮಾನವೀಯತೆ ಆಧಾರದ ಮೇಲೆ ದಯೆ ತೋರಿಸುತ್ತೀರೆಂಬ ಭರವಸೆ ನನಗಿದೆ ಎಂದು ಹಸಿನ್ ಅವರು ತಮ್ಮ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com