ಕೊರೋನಾ ವೈರಸ್: ಭಾರತದಲ್ಲಿ ಮರಣ ಪ್ರಮಾಣ ಶೇ.2 ಕ್ಕಿಂತ ಕಡಿಮೆ: ಆರೋಗ್ಯ ಸಚಿವಾಲಯ    

ಭಾರತದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ ಜಗತ್ತಿನ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ದೇಶದಲ್ಲಿ ಕೊರೋನಾ ಮರಣ ಪ್ರಮಾಣ ತೀರಾ ಕಡಿಮೆ ಇದೆ ಎಂದು ಹೇಳಲಾಗಿದೆ.
ಕೊರೋನಾ ವೈರಸ್ ಆರ್ಭಟ
ಕೊರೋನಾ ವೈರಸ್ ಆರ್ಭಟ

ನವದೆಹಲಿ: ಭಾರತದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ ಜಗತ್ತಿನ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ದೇಶದಲ್ಲಿ ಕೊರೋನಾ ಮರಣ ಪ್ರಮಾಣ ತೀರಾ ಕಡಿಮೆ ಇದೆ ಎಂದು ಹೇಳಲಾಗಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಭಾರತದಲ್ಲಿ ಕೊರೋನಾ ವೈರಸ್ ಮರಣ ಪ್ರಮಾಣ ತಗ್ಗಿದ್ದು, ಈ ಹಿಂದೆ 3.3ರಷ್ಟಿದ್ದ ಮರಣ ಪ್ರಮಾಣ ಇದೀಗ ಶೇ.2ಕ್ಕಿಂತ ಕಡಿಮೆಗೆ ಕುಸಿದಿದೆ. ಪ್ರಸ್ತುತ ದೇಶದಲ್ಲಿ ಕೊರೋನಾ ವೈರಸ್ ಮರಣ ಪ್ರಮಾಣ 1.94ಕ್ಕೆ ಕುಸಿತವಾಗಿದೆ. ಇದು ಜಗತ್ತಿನ ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ತೀರಾ ಕಡಿಮೆ ಎಂದು ಹೇಳಿದೆ.

ಇನ್ನು ಅಮೆರಿಕದಲ್ಲಿ ಕೇವಲ 23 ದಿನಗಳಲ್ಲಿ 50 ಸಾವಿರ ಕೊರೋನಾ ಸಾವು ಸಂಭವಿಸಿತ್ತು.  ಬ್ರೆಜಿಲ್ ನಲ್ಲಿ 95 ದಿನದಲ್ಲಿ50 ಸಾವಿರ ಸಾವು ಸಂಭವಿಸಿತ್ತು. ಮೆಕ್ಸಿಕೋದಲ್ಲಿ 141 ದಿನದಲ್ಲಿ 50 ಸಾವಿರ ಸಾವು ಸಂಭವಿಸಿತ್ತು. ಆದರೆ ಭಾರತದಲ್ಲಿ ಈ ಪ್ರಮಾಣಕ್ಕೆ ತಗುಲಿದ್ದು ಬರಬ್ಬರಿ 156 ದಿನಗಳು ತಗುಲಿದೆ. ಇದು ಭಾರತದಲ್ಲಿ ಕೊರೋನಾ ವೈರಸ್ ಸಾವಿನ ಪ್ರಮಾಣ ನಿಧಾನಗತಿಯಲ್ಲಿದೆ ಎಂಬುದನ್ನು ಸೂಚಿಸುತ್ತದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

 ಕಳೆದ ಜೂನ್ 18ರಂದು ದೇಶದಲ್ಲಿ ಕೊರೋನಾ ವೈರಸ್ ಪ್ರಮಾಣ ಗರಿಷ್ಠ 3.33ಕ್ಕೆ ಏರಿಕೆಯಾಗಿತ್ತು. ಬಳಿಕ ಈ ಪ್ರಮಾಣ ಗಣನೀಯವಾಗಿ ತಗ್ಗಿದ್ದು, ಜುಲೈ 14ರ ಹೊತ್ತಿಗೆ ಇದು 2.57ಕ್ಕೆ ಕುಸಿದಿತ್ತು. ಇದೀಗ ಅಂದರೆ ಆಗಸ್ಟ್ 15ರ ಹೊತ್ತಿಗೆ 1.94ಕ್ಕೆ ಕುಸಿದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿಯಲಿದೆ ಎಂದು ಸಚಿವಾಲಯ ವಿಶ್ವಾಸ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com