ಜಪಾನ್ ಹಡಗಿನಿಂದ ಅನಿಲ ಸೋರಿಕೆ
ದೇಶ
ಪಿಎಂ ಮೋದಿ ದೂರದೃಷ್ಟಿ 'ಸಾಗರ' ಸಾಕಾರ: ಭಾರತದಿಂದ ಮಾರಿಷಸ್‌ಗೆ 30 ಟನ್ ತಾಂತ್ರಿಕ ಉಪಕರಣ ರವಾನೆ
ಮಾರಿಷಸ್ ದೇಶದ ನೆರವಿಗಾಗಿ ಭಾರತ ವಾಯುಪಡೆಯ ವಿಮಾನವೊಂದು 30 ಟನ್ ಪ್ರಮಾಣದ ತಾಂತ್ರಿಕ ಉಪಕರಣಗಳು ಮತ್ತು ವಸ್ತುಗಳನ್ನು ಭಾನುವಾರ ರವಾನಿಸಿದೆ. I
ನವದೆಹಲಿ: ಮಾರಿಷಸ್ ದೇಶದ ನೆರವಿಗಾಗಿ ಭಾರತ ವಾಯುಪಡೆಯ ವಿಮಾನವೊಂದು 30 ಟನ್ ಪ್ರಮಾಣದ ತಾಂತ್ರಿಕ ಉಪಕರಣಗಳು ಮತ್ತು ವಸ್ತುಗಳನ್ನು ಭಾನುವಾರ ರವಾನಿಸಿದೆ.
ವಾಯುವ್ಯ ಕರಾವಳಿಯಲ್ಲಿ ತೈಲ ಸೋರಿಕೆಯಿಂದಾಗಿರುವ ಪರಿಸರ ಹಾನಿಯನ್ನು ತಡೆಯಲು ನೆರವು ನೀಡುವಂತೆ ಭಾರತವನ್ನು ಮಾರಿಷಸ್ ಸರ್ಕಾರ ಮನವಿ ಮಾಡಿತ್ತು.
ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾಹಿತಿ ನೀಡಿದ್ದು, ಸಾಗರದ ಬೂಮ್, ಡಿಸ್ಕ್ ಸ್ಕಿಮ್ಮರ್, ಹೆಲಿ ಸ್ಕಿಮ್ಮರ್, ಪವರ್ ಪ್ಯಾಕ್‌ಗಳು, ಬ್ಲೋವರ್‌ಗಳು, ಸಾಲ್ವೇಜ್ ಬಾರ್ಜ್ ಸೇರಿದಂತೆ ಇತರ ಪರಿಕರಗಳನ್ನು ಒದಗಿಸಲಾಗಿದೆ. ಇವುಗಳು ತೈಲ ಸೋರಿಕೆಯನ್ನು ತಡೆಯಲು, ನೀರಿನಿಂದ ತೈಲವನ್ನು ಹೊರಗೆಳೆಯಲು, ನೀರನ್ನು ಸ್ವಚ್ಛಗೊಳಿಸಲು ಬಳಸಲಾಗಿದೆ ಎಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿಗೆ ಅನುಗುಣವಾಗಿ ಎನ್ ಎಂಡಿಎ ಪ್ರದೇಶದ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆ(ಸಾಗರ) ಎಂಬ ಯೋಜನೆಯನ್ನು ಪ್ರಾರಂಭಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ