ಮೋಸ್ಟ್ ವಾಂಟೆಡ್ ಉಗ್ರರು ಸೇರಿ 4 ದಿನದ ಅಂತರದಲ್ಲಿ ಆರು ಉಗ್ರರ ಹತ್ಯೆ: ಭಾರತೀಯ ಸೇನೆ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ನಾಲ್ಕು ದಿನಗಳ ಅಂತರದಲ್ಲಿ ಮೋಸ್ಟ್ ವಾಂಟೆಡ್ ಉಗ್ರರೂ ಸೇರಿದಂತೆ ಒಟ್ಟು 6 ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.
ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್
ಜಮ್ಮು-ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್

ಕುಪ್ವಾರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ನಾಲ್ಕು ದಿನಗಳ ಅಂತರದಲ್ಲಿ ಮೋಸ್ಟ್ ವಾಂಟೆಡ್ ಉಗ್ರರೂ ಸೇರಿದಂತೆ ಒಟ್ಟು 6 ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.

ಬಾರಾಮುಲ್ಲ ಮತ್ತು ಕುಪ್ವಾರ ಎನ್ ಕೌಂಟರ್ ಗೆ ಸಂಬಂಧಿಸಿದಂತೆ ಎಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ನಾಲ್ಕು ದಿನಗಳಲ್ಲಿ ಕಾಶ್ಮೀರದಲ್ಲಿ ಮೋಸ್ಟ್ ವಾಟೆಂಡ್ ಉಗ್ರರ ಹೆಡೆ ಮುರಿ ಕಟ್ಟಲಾಗಿದ್ದು, ಈ ಪೈಕಿ 4 ಮಂದಿ ಉಗ್ರರು ಸೇನೆಯ ಟಾಪ್ 10 ಲಿಸ್ಟ್ ನಲ್ಲಿದ್ದರು ಎಂದು  ಹೇಳಿದ್ದಾರೆ. ಕುಪ್ವಾರ, ಬಾರಾಮುಲ್ಲಾ ಮತ್ತು ಕ್ರೀರಿ ಸೇರಿದಂತೆ ಒಟ್ಟು ಮೂರು ಕಾರ್ಯಾಚರಣೆ ನಡೆಸಲಾಗಿದ್ದು, ಸಜ್ಜದ್ ಹೈದರ್ ನಂತಹ ಉಗ್ರ ಸಂಘಟನೆಯ ಟಾಪ್ ಕಮಾಂಡರ್ ನ ಹತ್ಯೆಯಾಗಿದೆ. ಇದಲ್ಲದೆ ಈತನ ಪಾಕಿಸ್ತಾನಿ ಉಗ್ರ ಕಮಾಂಡರ್ ಉಸ್ಮಾನ್ ಮತ್ತು ಅನಾಯತುಲ್ಲಾ ನನ್ನು ಹತ್ಯೆ ಮಾಡಲಾಗಿದೆ. 

ಅಂತೆಯೇ ಇದೇ ಪ್ರದೇಶದಲ್ಲಿದ್ದ ಇತರೆ ಉಗ್ರ ಸಂಘಟನೆಗಳ ಉಗ್ರರಾದ ನಾಸಿರುದ್ದೀನ್ ಅಲಿಯಾಸ್ ಅಬುಸಾದ್ ನನ್ನು ಕೂಡ ಸೇನೆ ಹೊಡೆದುರುಳಿಸಿದೆ. ಸೇನೆ ಮತ್ತು ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆಯಿಂದಾಗಿ ಪ್ರಮುಖ ಉಗ್ರಗಾಮಿಗಳ ಹೆಡೆ ಮುರಿ ಕಟ್ಟಲಾಗಿದೆ.ಈ ಪೈಕಿ ಸೇನೆಯಿಂದ ಹತ್ಯೆಯಾದ  ಅಬುಸಾದ್ ಗೆ ಉತ್ತರ ಕಾಶ್ಮೀರ ಉಗ್ರ ಸಂಘಟನೆಯ ಹೊಣೆಗಾರಿಕೆ ನೀಡಲಾಗಿತ್ತು. ಈತನಿಗೆ ಡ್ಯಾನಿಷ್ ಸಾಥ್ ನೀಡುತ್ತಿದ್ದ. ಇಬ್ಬರನ್ನೂ ಕೊಲ್ಲುವ ಮೂಲಕ ಈ ಭಾಗದಲ್ಲಿ ಉಗ್ರ ಸಂಘಟನೆ ಬೆಳವಣಿಗೆಗೆ ಬ್ರೇಕ್ ಹಾಕಿದ್ದೇವೆ. ಇನ್ನು ನಾಸಿರುದ್ದೀನ್ ಲೋನ್ ನನ್ನು ಕುಪ್ವಾರ ಜಿಲ್ಲೆಯ ಹಂದ್ವಾರ ಎನ್ ಕೌಂಟರ್ ನಲ್ಲಿ  ಹೊಡೆದುರುಳಿಸಲಾಗಿತ್ತು. ಈ ಕಾರ್ಯಾಚರಣೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಹೇಳಿದರು.

ಗಡಿಯಲ್ಲಿ ಸೇನೆಯ ನಿರಂತರ ಕಾರ್ಯಾಚರಣೆಯಿಂದಾಗಿ ಒಳ ನುಸುಳಿವಿಕೆ ಪ್ರಮಾಣ ಶೇ.50ರಷ್ಟು ಕುಸಿದಿದೆ. 2020ರಲ್ಲಿ ಈ ವರೆಗೂ ಉಗ್ರ ಸಂಘಟನೆ ಪಾಲಾಗಿದ್ದ 16 ಮಕ್ಕಳನ್ನು ರಕ್ಷಿಸಿ ಪೋಷಕರ ಮಡಿಲು ಸೇರುವಂತೆ ಮಾಡಿದ್ದೇವೆ ಎಂದೂ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com