
ನವದೆಹಲಿ: ಕೇಂದ್ರ ಸರ್ಕಾರ “ಸ್ವಚ್ಚ ಸರ್ವೇಕ್ಷಣ್ ೨೦೨೦” ಸಮೀಕ್ಷೆಯನ್ನು ಗುರುವಾರ ಪ್ರಕಟಿಸಿದ್ದು, ೩ ರಿಂದ ೧೦ ಲಕ್ಷ ಜನಸಂಖ್ಯೆಯುಳ್ಳ ನಗರಗಳ ವಿಭಾಗದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಮೊದಲ ಸ್ಥಾನ ಪಡೆದಿದೆ.
ರಾಜಧಾನಿ ಬೆಂಗಳೂರು ನಗರಕ್ಕೆ ಅತ್ಯುತ್ತಮ ಸ್ವ ಸುಸ್ಥಿರ ನಗರ ಪ್ರಶಸ್ತಿ ದೊರೆತಿದೆ. ಈ ಮೂಲಕ ರಾಜ್ಯಕ್ಕೆ ಎರಡು ಪ್ರಮುಖ ಪ್ರಶಸ್ತಿಗಳು ದೊರೆತಿವೆ.
2018 ರಲ್ಲೂ ಈ ವಿಭಾಗದಲ್ಲಿ ಮೈಸೂರು ಅಗ್ರಸ್ಥಾನದಲ್ಲಿತ್ತು. ಆದರೆ ಸಮಗ್ರ ವಿಭಾಗದಲ್ಲಿ ಕಳೆದ ಬಾರಿ ಮೂರನೇ ಸ್ಥಾನದಲ್ಲಿದ್ದ ಮೈಸೂರು ಈ ಬಾರಿ ಐದನೇ ಸ್ಥಆನಕ್ಕೆ ಕುಸಿದಿದೆ. 2015 ಮತ್ತು 2016ರಲ್ಲಿ ದೇಶದ ಅತ್ಯಂತ ಸ್ವಚ್ಚ ನಗರ ಎಂಬ ಕೀರ್ತಿಗೆ ಭಾಜನವಾಗಿದ್ದ ಮೈಸೂರು ಕಳೆದ ಬಾರಿ ಮೂರನೇ ಸ್ಥಾನದಲ್ಲಿತ್ತು.
ಇನ್ನು ಬೆಂಗಳೂರಿಗೆ ಅತ್ಯುತ್ತಮ ಸ್ವ ಸುಸ್ಥಿರ ನಗರ ಪ್ರಶಸ್ತಿಲಭಿಸಿದ್ದು 10 ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆ ಇರುವ ಆಯ್ದ 47 ನಗರಗಳ ಆಯ್ಕೆ ಮಾಡಿದ್ದು ಅವುಗಳು ಕಸ ವಿಲೇವಾರಿ ಹಾಗೂ ನಿರ್ವಹಣೆಗಾಗಿ ಅಳವಡಿಸಿಕೊಂಡ ಮಾರ್ಗಗಳನ್ನು ಆಧರಿಸಿ ಈ ಪ್ರಶಸ್ತಿ ನೀಡಲಾಗಿದೆ. 47 ನಗರಗಳ ಪೈಕಿ ಬೆಂಗಳೂರು 37ನೇ ಸ್ಥಾನದಲ್ಲಿದೆ.
ಇನ್ನು ಸ್ವಚ್ಛ ಸರ್ವೇಕ್ಷಣ್ ಸ್ವಚ್ಚ ನಗರಗಳ ಪೈಕಿ ಬೆಂಗಳೂರಿಗೆ ಈ ಬಾರಿಯೂ ಹಿನ್ನಡೆಯಾಗಿದೆ. ಕಳೆದ ಬಾರಿಗಿಂತಲೂ ಮೂವತ್ತು ಸ್ಥಾನ ಕುಸಿತ ಕಂಡ ಬೆಂಗಳೂರು 214ನೇ ಸ್ಥಾನದಲ್ಲಿದೆ. ಕಳೆದ ಬಾರಿ ಬೆಂಗಳೂರು ಶ್ರೇಯಾಂಕದ ಪಟ್ಟಿಯಲ್ಲಿ 194ನೇ ಸ್ಥಾನದಲ್ಲಿತ್ತು.
ಕೇಂದ್ರ ಸಚಿವರೊಂದಿಗೆ ಮೈಸೂರು ಪೌರ ಕಾರ್ಮಿಕರ ಸಂವಾದ
ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ 2020 ಫಲಿತಾಂಶ ಪ್ರಕಟಿಸಿದ ಕೇಂದ್ರ ಸಚಿವ ಸಚಿವ ಹರ್ದೀಪ್ ಸಿಂಗ್ ಪುರಿ ದೇಶದ ಪೌರ ಕಾರ್ಮಿಕರ ಜೊತೆ ಸಂವಾದ ನಡೆಸಿದರು.
ಮೈಸೂರಿನ ಪೌರ ಕಾರ್ಮಿಕರಾದ ಮಂಜುಳ ಹಾಗೂ ನಂಜುಂಡಸ್ವಾಮಿ ಸಚಿವರ ಜೊತೆ ಸಂವಾದದಲ್ಲಿ ಭಾಗವಹಿಸಿದ್ದರು. ನಗರದ ಅರಮನೆ ಆವರಣದಲ್ಲಿ ನಡೆದ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ ವರ್ಚ್ಯುಯಲ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅನುಪಸ್ಥಿತಿಯಲ್ಲಿ ವಸತಿ ಮತ್ತು ನಗರಾಭಿವೃದ್ಧಿ ಖಾತೆ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ದೇಶದ ಪೌರ ಕಾರ್ಮಿಕರ ಜೊತೆ ಸಂವಾದ ನಡೆಸಿದರು.
ಇದರ ಜೊತೆಗೆ ಛತ್ತೀಸ್ ಗಡ ದೇಶದ ಸ್ವಚ್ಛ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
Advertisement