ನವದೆಹಲಿ: ಪಂಜಾಬ್ ನ ತಾರ್ನ್ ತಾರನ್ ಅಂತಾರಾಷ್ಟ್ರೀಯ ಗಡಿಯಲ್ಲಿ ಐವರು ನುಸುಳುಕೋರರನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೊಡೆದುರುಳಿಸಿದೆ.
ಗಡಿಯಲ್ಲಿ ನುಸುಳುಕೋರರ ಚಲನವಲನವನ್ನು ಗಮನಿಸಿ ಬಿಎಸ್‌ಎಫ್ ಅವರನ್ನು ಹಿಮ್ಮೆಟ್ಟಿಸಲು ಮುಂದಾದರು. ಈ ವೇಳೆ ನುಸುಳುಕೋರರು ಬಿಎಸ್‌ಎಫ್ ಮೇಲೆ ಗುಂಡಿನ ದಾಳಿ ನಡೆಸಿದ್ದು ಇದಕ್ಕೆ ಪ್ರತಿಯಾಗಿ ಯೋಧರು ಗುಂಡಿನ ದಾಳಿ ನಡೆಸಿದ್ದು ಐವರು ನುಸುಳುಕೋರರು ಹತರಾಗಿದ್ದಾರೆ.
ಇನ್ನು ಬಿಎಸ್‌ಎಫ್ ಯೋಧರು ಕಾರ್ಯಾಚರಣೆ ಮುಂದುವರೆಸಿದ್ದು ನುಸುಳುಕೋರರು ಅಡಗಿ ಕುಳಿತಿರಬಹುದು ಎಂಬ ಶಂಕೆ ಮೇಲೆ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.
Advertisement