ವಿದ್ವಂಸಕ ಕೃತ್ಯಕ್ಕೆ ಸಂಚು, ದೆಹಲಿಯಲ್ಲಿ ಐಸಿಸ್ ಉಗ್ರನ ಸೆರೆ

 ಸುಧಾರಿತ ಸ್ಫೋಟಕ ಸಾಧನಗಳ ಸಂಗ್ರಹ ಹೊಂದಿದ್ದ ಇಸ್ಲಾಮಿಕ್ ಸ್ಟೇಟ್ (ಐಸಿಸ್​ ) ಸಂಘಟನೆಯವನೆನ್ನಲಾದ ವ್ಯಕ್ತಿಯೊಬ್ಬನನ್ನು ದೆಹಲಿ ಪೋಲೀಸರು ಬಂಧಿಸಿದ್ದಾರೆ.  ಮಧ್ಯ ದೆಹಲಿಯ ರಿಡ್ಜ್ ರಸ್ತೆ ಪ್ರದೇಶದಲ್ಲಿ ಈ ಉಗ್ರನನ್ನು ಬಂಧಿಸಲಾಗಿದೆ ಎಂದು  ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ವಿದ್ವಂಸಕ ಕೃತ್ಯಕ್ಕೆ ಸಂಚು, ದೆಹಲಿಯಲ್ಲಿ ಐಸಿಸ್ ಉಗ್ರನ ಸೆರೆ
Updated on

ನವದೆಹಲಿ:  ಸುಧಾರಿತ ಸ್ಫೋಟಕ ಸಾಧನಗಳ ಸಂಗ್ರಹ ಹೊಂದಿದ್ದ ಇಸ್ಲಾಮಿಕ್ ಸ್ಟೇಟ್ (ಐಸಿಸ್​ ) ಸಂಘಟನೆಯವನೆನ್ನಲಾದ ವ್ಯಕ್ತಿಯೊಬ್ಬನನ್ನು ದೆಹಲಿ ಪೋಲೀಸರು ಬಂಧಿಸಿದ್ದಾರೆ.  ಮಧ್ಯ ದೆಹಲಿಯ ರಿಡ್ಜ್ ರಸ್ತೆ ಪ್ರದೇಶದಲ್ಲಿ ಈ ಉಗ್ರನನ್ನು ಬಂಧಿಸಲಾಗಿದೆ ಎಂದು  ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಕೆಲ ಕಾಲದ ಗುಂಡಿನ ಚಕಮಕಿಯ ನಂತರ  ಆರೋಪಿಯನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ.

ಪೊಲೀಸ್ ವಿಶೇಷ ಕೋಶದ ಉಪ ಆಯುಕ್ತ ಪ್ರಮೋದ್ ಸಿಂಗ್ ಕುಶ್ವಾಹಾ ಹೇಳಿದಂತೆ ಉಗ್ರನಿಂದ ಎರಡು ಐಇಡಿ ಹಾಗೂ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಐಇಡಿಗಳನ್ನು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ಸ್​​​ ನಿಷ್ಕ್ರಿಯಗೊಳಿಸಿದ್ದಾರೆ.

ಸಧ್ಯ ಬಂಧಿತ ಉಗ್ರನನ್ನು ಲೋಧಿ ಕಾಲೋನಿಯ  ವಿಶೇಷ ಪೊಲೀಸ್​ ಸೆಲ್ ಕಚೇರಿಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com