ರಾಯಪುರ(ಛತ್ತೀಸ್ ಗಡ): ತಂದೆ ತಾಯಿ ಇಲ್ಲದ ಸಂದರ್ಭದಲ್ಲಿ ಪ್ರಿಯಕರನನ್ನು ಮನೆಗೆ ಕರೆಸಿಕೊಂಡಿದ್ದ 16 ವರ್ಷದ ಯುವತಿಯೋರ್ವಳು ಏಕಾಂತದಲ್ಲಿದ್ದ ತಮ್ಮನ್ನು ನೋಡಿದ ತಂಗಿಯನ್ನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಛತ್ತೀಸ್ ಗಡದ ಕೊರ್ಬಾದಲ್ಲಿ ಈ ಘಟನೆ ನಡೆದಿದೆ. ಕಳೆದ ಶುಕ್ರವಾರ ರಾತ್ರಿ ಪೋಷಕರು ಊರಿಗೆ ತೆರಳಿದ್ದರು. ಈ ವೇಳೆ ಮನೆಯಲ್ಲಿ ಅಕ್ಕ ತಂಗಿ ಮಾತ್ರ ಇದ್ದರು. ಸಂದರ್ಭದಲ್ಲಿ 16ರ ಯುವತಿ ಪ್ರಿಯಕರನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಮಲಗಿದ್ದ 11ರ ಯುವತಿ ಎದ್ದು ಬಂದಾಗ ಅಕ್ಕ ಪ್ರಿಯಕರನ ಜೊತೆ ಇದ್ದಿದ್ದನ್ನು ಗಮನಿಸಿದ್ದಾಳೆ.
ತಾವು ಏಕಾಂತದಲ್ಲಿದದ್ದನ್ನು ತಂಗಿ ನೋಡಿದ್ದು ಅದನ್ನು ಎಲ್ಲರಿಗೂ ಹೇಳುತ್ತಾಳೆ ಎಂದು ಹೆದರಿಸಿದ ಅಕ್ಕ ಮೊದಲಿಗೆ ತಂಗಿಯನ್ನು ದಿಂಬಿನಿಂದ ಉಸಿರುಗಟ್ಟಿಸಿ ನಂತರ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾಳೆ.
ಕೊಲೆ ನಂತರ ಯುವತಿ ತಾನು ಮೊಬೈಲ್ ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಹೇಳಿದ್ದಳು. ಆದರೆ ಆಕೆ ಸುಳ್ಳು ಹೇಳುತ್ತಿದ್ದಾಳೆ ಎಂದು ಪೊಲೀಸರು ಗಮನಿಸಿದ್ದಾರೆ. ಈ ವೇಳೆ ತನಿಖೆಗೆ ಚುರುಕುಗೊಳಿಸಿದಾಗ ಮನೆಯ ಮುಂದೆ ಬೈಕ್ ಚಕ್ರದ ಗುರುತು ಪತ್ತೆಯಾಗಿದೆ. ಕೂಡಲೇ ಪೊಲೀಸರು ಯುವತಿಯ ಮೊಬೈಲ್ ನಂಬರ್ ಕರೆಗಳನ್ನು ಗಮನಿಸಿದಾಗ ಯುವಕನೋರ್ವನ ನಂಬರ್ ಪತ್ತೆಯಾಗಿದೆ.
ಕೂಡಲೇ ಆತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಯಲಿಗೆ ಬಂದಿದೆ.
Advertisement