ಮಾನವೀಯತೆ ಅತ್ಯಂತ ಮುಖ್ಯ: ಜೈಲಿನಲ್ಲಿ ಗೌತಮ್ ನವ್ಲಾಖಾ ಕನ್ನಡಕ ಕಳ್ಳತನ ಕುರಿತು ಬಾಂಬೆ ಹೈಕೋರ್ಟ್!

ಮಾನವೀಯತೆ ಅತ್ಯಂತ ಮುಖ್ಯವಾಗಿದ್ದು, ಕೈದಿಗಳ ಅಗತ್ಯತೆಗಳ ಬಗ್ಗೆ ಸಂವೇದನೆ ಮೂಡಿಸಲು ಜೈಲು ಅಧಿಕಾರಿಗಳಿಗೆ ಕಾರ್ಯಾಗಾರ ನಡೆಸುವ ಅಗತ್ಯವಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಮಾನವ ಹಕ್ಕು ಹೋರಾಟಗಾರ ಗೌತಮ್ ನವ್ಲಾಖಾ
ಮಾನವ ಹಕ್ಕು ಹೋರಾಟಗಾರ ಗೌತಮ್ ನವ್ಲಾಖಾ

ಮುಂಬೈ: ಟಲೋಜ ಜೈಲಿನಲ್ಲಿ ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಾಖಾ ಕನ್ನಡಕ ಕಳ್ಳತನವಾಗಿರುವುದನ್ನು ಇಂದು ಉಲ್ಲೇಖಿಸಿರುವ ಬಾಂಬೆ ಹೈಕೋರ್ಟ್, ಮಾನವೀಯತೆ ಅತ್ಯಂತ ಮುಖ್ಯವಾಗಿದ್ದು, ಕೈದಿಗಳ ಅಗತ್ಯತೆಗಳ ಬಗ್ಗೆ ಸಂವೇದನೆ ಮೂಡಿಸಲು ಜೈಲು ಅಧಿಕಾರಿಗಳಿಗೆ ಕಾರ್ಯಾಗಾರ ನಡೆಸುವ ಅಗತ್ಯವಿದೆ ಎಂದು ಹೇಳಿದೆ.

ಎಲ್ಗಾರ್- ಪರಿಷದ್- ಮಾವೋವಾದಿ ನಂಟಿನ ಪ್ರಕರಣದಲ್ಲಿ ನವ್ಲಾಖಾ ಆರೋಪಿಯಾಗಿದ್ದಾರೆ. ಜೈಲಿನೊಳಗೆ ನವ್ಲಾಖಾ ಕನ್ನಡಕ ಹೇಗೆ ಕಳ್ಳತನ ಕಳ್ಳತನವಾಯಿತು, ಕೊರಿಯರ್ ಮೂಲಕ ಅವರ ಕುಟುಂಬ ಸದಸ್ಯರು ಕಳುಹಿಸಿಕೊಟ್ಟ ಹೊಸ ಕನ್ನಡಕವನ್ನು ಸ್ವೀಕರಿಸದ ಜೈಲಿನ ಅಧಿಕಾರಿಗಳ ಬಗ್ಗೆ ತಿಳಿದ ನ್ಯಾಯಾಧೀಶ ಎಸ್.ಎಸ್. ಶಿಂಧೆ ಮತ್ತು ಎಂಎಸ್ ಕಾರ್ನಿಕ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಮಾನವೀಯತೆ ಅತ್ಯಂತ ಪ್ರಮುಖವಾದದ್ದು, ಎಲ್ಲರೂ ಕೂಡಾ ಇದನ್ನು ಪಾಲಿಸಬೇಕು. ಜೈಲು ಅಧಿಕಾರಿಗಳು ಕಾರ್ಯಗಾರ ನಡೆಸಬೇಕಾದ ಅಗತ್ಯವಿದೆ. ಈ ಎಲ್ಲಾ ಸಣ್ಣ ವಸ್ತುಗಳನ್ನು ನಿರಾಕರಿಸಬಹುದೇ? ಇವೆಲ್ಲವೂ ಮಾನವೀಯ ಪರಿಗಣನೆಗಳು ಎಂದು ಹೇಳಿತು.

ಟಲೋಜ ಜೈಲಿನೊಳಗೆ ನವೆಂಬರ್ 27 ರಂದು ಕನ್ನಡಕ ಕಳ್ಳತನವಾಗಿದೆ ಎಂದು ನವ್ಲಾಖಾ ಕುಟುಂಬ ಸದಸ್ಯರು ಸೋಮವಾರ ಹೇಳಿದ್ದರು. ಕನ್ನಡಕ ಇಲ್ಲದೆ ನವ್ಲಾಖಾ ಬಹುತೇಕ ದೃಷ್ಟಿ ಕಳೆದುಕೊಂಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಎರಡು ಹೊಸ ಕನ್ನಡಕಗಳನ್ನು ಪೋಸ್ಟ್ ಮೂಲಕ ಕಳುಹಿಸಿಕೊಟ್ಟಾಗ ಜೈಲಿನ ಅಧಿಕಾರಿಗಳು ಅವುಗಳನ್ನು ಸ್ವೀಕರಿಸದೆ ವಾಪಸ್ ಕಳುಹಿಸಿದ್ದಾರೆ ಎಂದು ಕುಟುಂಬ ಸದಸ್ಯರು ಹೇಳಿದ್ದರು.

ಎಲ್ಗಾರ್  ಪರಿಷದ್ - ಮಾವೋವಾದಿ ನಂಟಿನ ಪ್ರಕರಣದಲ್ಲಿ ಎನ್ ಐಎಯಿಂದ ಬಂಧನವನ್ನು ಪ್ರಶ್ನಿಸಿ ಹೋರಾಟಗಾರರಾದ ರಮೇಶ್ ಗೈಚೊರ್ ಮತ್ತು ಸಾಗರ್ ಗೊರ್ತೆ ಸಲ್ಲಿಸಿರುವ ಅರ್ಜಿಗಳನ್ನು ಹೈಕೋರ್ಟ್ ವಿಚಾರಣೆ ನಡೆಸಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com