ರಾಹುಲ್ ಗಾಂಧಿ
ರಾಹುಲ್ ಗಾಂಧಿ

ದೇಶದ ರೈತರ ಆದಾಯ ಬಿಹಾರ ಕೃಷಿಕರ ಆದಾಯಕ್ಕಿಂತ ಕಡಿಮೆಗೊಳಿಸಲು ಕೇಂದ್ರ ಯತ್ನ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿಯವರು ದೇಶದ ರೈತರ ಆದಾಯವನ್ನು ಬಿಹಾರದ ರೈತರ ಆದಾಯಕ್ಕಿಂತ ಕಡಿಮೆ ಇರುವಂತೆ ಮಾಡಲು ಬಯಸುತ್ತಾರೆ ಎಂದು ಕಾಂಗ್ರೆಸ್‍ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ರೈತರ ಆದಾಯವನ್ನು ಬಿಹಾರದ ರೈತರ ಆದಾಯಕ್ಕಿಂತ ಕಡಿಮೆ ಇರುವಂತೆ ಮಾಡಲು ಬಯಸುತ್ತಾರೆ ಎಂದು ಕಾಂಗ್ರೆಸ್‍ ಮುಖಂಡ ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.

ದೇಶದಲ್ಲಿ ರೈತರು ತಮ್ಮ ಆದಾಯವು ಪಂಜಾಬ್‌ ರೈತರ ಆದಾಯದಂತೆ ಇರಬೇಕೆಂದು ಬಯಸುತ್ತಾರೆ. ಆದರೆ ಮೋದಿ ಸರ್ಕಾರ ದೇಶದ ಪ್ರತಿಯೊಬ್ಬ ರೈತನ ಆದಾಯ ಬಿಹಾರ ರೈತರಿಗಿಂತ ಕೆಳಗಿಳಿಸಲು ಬಯಸಿದೆ” ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಟ್ವೀಟ್ ಜೊತೆಗೆ, ಕೆಲವು ಅಂಕಿ ಅಂಶಗಳನ್ನು ರಾಹುಲ್ ಹಂಚಿಕೊಂಡಿದ್ದು, ಗರಿಷ್ಠ ಸರಾಸರಿ ವಾರ್ಷಿಕ ಆದಾಯವು ಪಂಜಾಬ್‌ನ ರೈತನದ್ದಾಗಿದೆ, ಆದರೆ ಬಿಹಾರ ರೈತರ ಆದಾಯ ಅದಕ್ಕೆ ತದ್ವಿರುದ್ಧವಾಗಿ ಕಡಿಮೆಯಾಗಿದೆ. ದತ್ತಾಂಶವು ಪಂಜಾಬ್‌ನ ರೈತನ ಸರಾಸರಿ ವಾರ್ಷಿಕ ಆದಾಯ 2,16,708 ರೂ., ಎಂದು ತೋರಿಸಿದರೆ, ಬಿಹಾರದಲ್ಲಿ ಇದು ಅತಿ ಕಡಿಮೆ 42, 684 ರೂ. ಮತ್ತೊಂದೆಡೆ ಹರಿಯಾಣ ರೈತರ ಸರಾಸರಿ ವಾರ್ಷಿಕ 1,73,208 ರೂ. ಮತ್ತು ಮೂರನೆಯ ಸ್ಥಾನದಲ್ಲಿ ಜಮ್ಮು ಕಾಶ್ಮೀರದ ರೈತರ ವಾರ್ಷಿಕ ಸರಾಸರಿ 1,52,196 ರೂ. ಕೇರಳದ ರೈತ ನಾಲ್ಕನೇ ಸ್ಥಾನದಲ್ಲಿದ್ದರೆ, ಕರ್ನಾಟಕ ನಂತರದ ಸ್ಥಾನದಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com